ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು. ಅಧ್ಯಾ, ೩. ಯೂ, ಪ್ರಕೃತಿಮಹದಾದಿ ತತ್ತ್ವಗಳ ನಿಜವನ್ನು ನಿರ್ಣಯಿಸತಕ್ಕದಾಗಿಯೂ ಇರುವ ಸಾಂಖ್ಯಶಾಸ್ತ್ರವನ್ನು ಆಸುರಿಯೆಂಬ ಸಿದ್ದಶ್ರೇಷ್ಠಸಿಗೆ ಉಪದೇಶಿಸಿ ದನು. ಇದೇ ಆ ಭಗವಂತನ ಐದನೆಯ ಅವತಾರವು. ಅದರಿಂದಾಚೆಗೆ ಅತ್ರಿ ಮಹಾಮುನಿಗೆ ಅನಸೂಯಾದೇವಿಯಲ್ಲಿ ದತ್ತಾತ್ರೇಯನೆಂಬ ಹೆಸರಿನಿಂದ ಹುಟ್ಟಿ, ಆಲರ್ಕನಿಗೂ, ಪ್ರಹ್ಲಾದನೇ ಮೊದಲಾದವರಿಗೂ ಆಧ್ಯಾತ್ಮವಿದ್ಯೆಯ ನ್ನು ಪದೇಶಿಸಿದನು. ಇದು ಆರನೆಯ ಅವತಾರವು. ಆಮೇಲೆ ಏಳನೆಯ ಅವತಾ ರದಲ್ಲಿ, ರುಚಿಯೆಂಬ ಮಹರ್ಷಿಗೆ ಆಕತಿಯೆಂಬ ಭಾರೈಯಲ್ಲಿ ಯಜ್ಞನೆಂಬ ಹೆ ಸರಿನಿಂದ ಹುಟ್ಟಿ, ಯಾಮಾದಿದೇವತೆಗಳೊಡಗೂಡಿ ಸ್ವಾಯಂಭುವಮನ್ವಂತ ರವೆಂಬ ಕಾಲವೆಲ್ಲಾ ಆಳುತ್ತಿದ್ದನು. ಆಮೇಲೆ ಅಪ್ಪಿ ಧನ ಪುತ್ರನಾದ ನಾಭಿ ಯೆಂಬವನಿಗೆ ಮೇರುದೇವಿಯಲ್ಲಿ ಋಷಭನೆಂಬ ಹೆಸರಿನಿಂದ ಹುಟ್ಟಿ, ಯೋಗಿಗ ಳಿಗೆ ಅನುಷ್ಟಯವಾಗಿಯೂ, ಸಕಲಾಶ್ರಮದಲ್ಲಿರುವವರಿಂದಲೂ ಪೂಜಿತವಾ ಗಿಯೂ ಇರುವ ಧರ್ಮಮಾರ್ಗವನ್ನು ತೋರಿಸುತ್ತಿದ್ದನು. ಇದೇ ಆ ಮಹಾ ತ್ಯನ ಎಂಟನೆಯ ಅವತಾರವು. ಅದರಿಂದಾಚೆಗೆ ಆ ಭಗವಂತನು, ತಮ್ಮ ಹುಂಕಾರದಿಂದಲೇ ವೇನನೆಂಬವನನ್ನು ಕೊಂದ ಮಹರ್ಷಿಗಳಿಂದ, ಲೋಕರಕ್ಷ ಣಾರ್ಥವಾಗಿ ಪ್ರಾರ್ಥಿಸಲ್ಪಟ್ಟು, ಪೈಥುಚಕ್ರವರ್ತಿಯೆಂಬ ಹೆಸರಿನಿಂದ ಹು ಟೈ, ಗೋರೂಪಧಾರಿಣಿಯಾದ ಈ ಭೂದೇವಿಯಿಂದ ಹಾಲನ್ನು ಕರೆಯುವ ತೆ ಓಷಧಿಗಳೆಲ್ಲವನ್ನೂ ಕರೆದು, ಸತ್ವಲೋಕಪ್ರಿಯನೆನಿಸಿಕೊಂಡನು. ಇದೇ ಆತನ ಒಂಭತ್ತನೆಯ ಆವತಾರವು. ಅದರಿಂದಾಚೆಗೆ ಚಾಕ್ಷುಷಮನ್ವಂತರಕಾ ಲದಲ್ಲಿ ಪ್ರಳಯವುಂಟಾದಾಗ,ಮತೃರೂಪವನ್ನು ವಹಿಸಿ, ಮುಂದೆ ವೈವಸ್ವತ ಮನುವಾಗಿ ಹುಟ್ಟಬೇಕಾಗಿದ್ದ ಸತ್ಯವ್ರತನೆಂಬವನನ್ನು ಪೃಥ್ವಿರೂಪವಾದ ಹಡಗಿನಮೇಲೇರಿಸಿ ತಂದು ಆತನನ್ನು ರಕ್ಷಿಸಿದನು. ಇದೇ ಆತನ ಹತ್ತನೆಯ ಅವತಾರವು. ಆಮೇಲೆ ದೆವಾಸುರರಿಬ್ಬರೂ ಅಮೃತಕ್ಕಾಗಿ ಸಮದ್ರವನ್ನು ಮಂದರಪಕ್ವತದಿಂದ ಮಥಿಸುವಾಗ, ಆ ಪಕ್ವತವು ಮುಳುಗಿ ಹೋಗುತ್ತಿರು ವುದನ್ನು ನೋಡಿ, ಕೂರರೂಪವನ್ನು ತಳೆದು, ಅದನ್ನು ತನ್ನ ಬೆನ್ನ ಮೇಲೆ ಧರಿಸಿ ದನು. ಇದೇ ಹನ್ನೊಂದನೆಯ ಅವತಾರವು. ಹನ್ನೆರಡನೆಯ ಅವತಾರದಲ್ಲಿ ಧನ್ವಂತರಿಯ ರೂಪದಿಂದ ಹುಟ್ಟಿದನು. ಹದಿಮೂರನೆಯ ಅವತಾರದಲ್ಲಿ