ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು. (ಅಧ್ಯಾ, ೩, ಪ್ರಾಯರಾಗಿ ಸಮಸ್ತಲೋಕವೂ ಅಧರ್ಮಪ್ರಚುರವಾಗಿರುವುದನ್ನು ನೋಡಿ ಆ ದುಷ್ಟರನ್ನು ಸಂಹರಿಸುವುದಕ್ಕಾಗಿ ವಿಷ್ಣು ಯಶಸ್ಸೆಂಬ ಬ್ರಾಹ್ಮಣನಿಗೆ ಕಲ್ಕಿಸ್ವರೂಪದಿಂದ ಹುಟ್ಟುವನು. ಎಲೈ ಶೌನಕಾದಿ ಮಹರ್ಷಿಗಳೇ!ಅಶೋ ವ್ಯವಾದ ಸರಸ್ಸಿನಿಂದ ಸಾವಿರಾರು ಕೋಡಿಗಳು ಹರಿಯುವಂತೆ, ಶುದ್ಧಸತ್ವ ಮರ್ತಿಯಾದ ಆ ಭಗವಂತನ ಅನಿರುದ್ಧಸ್ವರೂಪದಿಂದ ಹುಟ್ಟಿದ ಅವತಾ ರಗಳು ಇನ್ನೂ ಅಸಂಖ್ಯಾತಗಳಾಗಿರುವುವು. ಇವುಗಳಲ್ಲಿ ಎಲ್ಲಿಯೋ ಕೆಲವನ್ನು ಮಾತ್ರ ಹೇಳಿರುವೆನು ಮಂತ್ರಜ್ಞರಾದ ವಸಿಷಾದಿಮಹರ್ಷಿಗಳೂ ಆತ್ಮತತ್ವ ವನ್ನು ತಿಳಿದ ಶುಕಾದಿಮುನಿಶ್ರೇಷ್ಠರೂ,ಇಂದ್ರಾದಿದೇವತೆಗಳೂ, ಪ್ರಿಯವ್ರ ತನೇ ಮೊದಲಾದ ಮುನಿಪುತ್ರರೂ, ಮಹಾಮಹಿಮೆಯುಳ್ಳ ದಕ್ಷಪ್ರಜಾಪತಿ ಮೊದಲಾದವರೂ, ಇವರೆಲ್ಲರೂ ಆ ಭಗವಂತನ ಅ೦ಶಮಾತ್ರದಿಂದಲೇಹುಟ್ಟಿ ದವರು. ಆ ಅನಿರುದ್ಧದೇವನಿಗೆ ಅಂಶಾಂಶಸಂಭೂತರಾದ ಈ ಮಹಾತ್ಮರೂ ಆ ಭಗವಂತನ ಪೂರ್ಣಾವತಾರರೂಪನಾದ ಶ್ರೀಕೃಷ್ಣನೂ ರಾಕ್ಷಸರಿಂ ದ ಭಾಧಿತವಾದ ಈ ಲೋಕವನ್ನು ರಕ್ಷಿಸುವುದಕ್ಕಾಗಿ, ಒಂದೊಂದುಯುಗ ದಲ್ಲಿಯೂ ಅವತರಿಸಿ, ಇದಕ್ಕೆ ಕ್ಷೇಮವನ್ನು ಂಟುಮಾಡುವರು. ಎಲೈ ಮಹ ರ್ಷಿಗಳೇ! ಯಾವನು ಈ ಭಗವದವತಾರರಹಸ್ಯವನ್ನು ಭಕ್ತಿಯಿಂದಲೂ ಶ್ರದ್ದೆಯಿಂದಲೂ, ಪ್ರಾತಸ್ಸಾಯಂಕಾಲಗಳಲ್ಲಿ ಕೀರ್ತಿಸುವನೋ, ಅಂತ ವನು ಸಮಸ್ತ ಪಾಪಗಳಿಂದಲೂ ಬಿಡಲ್ಪಟ್ಟು ಮುಕ್ತಿ ಹೊಂದುವನು. ಆ ಅವತಾರಗಳು ಮಾತ್ರವೇ ಭಗವದೂಪಗಳೆಂದು ತಿಳಿಯಬೇಡಿರಿ ! * - - - -

  • ಇಲ್ಲಿಂದ ಮುಂದಿನ ಮೂರು ಶ್ಲೋಕಗಳಿಗೆ ದೈತಾದೈತ ಪರಗಳಾದ ಅರ್ಥ ಭೇದಗಳುಂಟು. ಅವುಗಳಲ್ಲಿ ಅದೈತಪರವಾದ ಅರ್ಥವೇನೆಂದರೆ:-ಚೇತನರ ಈ ಸ್ಕೂಲರೂಪವು ಎಂದರೆ ಸ್ಕೂಲಶರೀರವ, ಭಗವಂತನ ಅವಿದ್ಯಾಗಣಗಳಾದ ಮಹದಾ ದಿಗಳಿಂದ ತನ್ನಲ್ಲಿಯೇ ಆರೋಪಿತವಾಗಿರುವುದು. ಮೇಘದಲ್ಲಿ ಆಕಾಶವೆಂದೂ, ಧೂಳಿ ನಲ್ಲಿ ವಾಯುವೆಂದೂ ಭ್ರಾಂತರಾಗುವಂತೆ ವಿವೇಕಶೂನ್ಯರು, ಆತ್ಮನಲ್ಲಿ ಶರೀರತ್ವವನ್ನಾ ರೂಪಿಸುವರು, ಆತ್ಮನಿಗೆ ಸ್ಕೂಲಶರೀರಕ್ಕಿಂತಲೂ ಬೇರೆಯಾದ ಸೂಕ್ಷ್ಮ (ಲಿಂಗ) ಶರೀರವೊಂದುಂಟು. ಅದಕ್ಕೆ ಆಕೃತಿವಿಶೇಷಗಳೊಂದೂ ಇಲ್ಲದುದರಿಂದ,ಅದು ಕಣ್ಣಿಗೆ ಅಸತಕ್ಕುದಲ್ಲ. 'ಆ ಲಿಂಗಶರೀರವೇ ಪುನರ್ಜನ್ಮಾದಿಗಳಿಗೆ ಅವಶ್ಯವಾದುದು. ಈ ಶರೀ