ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೩.] ಪ್ರಥಮಸ್ಕಂಧವು. ಪುಣ್ಯಪಾಪಾದಿಕರ್ಮಗಳೆಂದೂ ಇಲ್ಲದುದರಿಂದ ಕರ್ಮಾಥೀನನಲ್ಲವು. ಆತ ಮ ಸಹೃದಯಾಂತರಾಮಿಯಾಗಿರುವನು. * ವಾಸ್ತವಕ್ಕೆ ಜನ್ಮಕರ್ಮಗ ಳೊಂದೂ ಇಲ್ಲದ ಆ ಭಗವಂತನಲ್ಲಿ ಜನ್ಮಗಳೂ, ಕರ್ಮಗಳೂ, ಈ ವಿಧವಾ ದುವುಗಳೆಂದು, ಜ್ಞಾನಿಗಳಾದವರು ಅವುಗಳನ್ನು ವೇದಗಳ ರಹಸ್ಯಾರ್ಥ ಗಳಿಂದ ತಿಳಿದು ಆ ರಹಸ್ಯಗಳನ್ನೇ ಪ್ರಕಾಶಪಡಿಸುವರು ಭಗವಂತನು ಆ ಮೋಘವಾದ ಲೀಲೆಯಳ್ಳವನು, ಈ ಚಿದಚಿದಾತ್ಮಕವಾದ ಪ್ರಪಂಚವನ್ನು ತಾನೇ ಸೃಷ್ಟಿಸುವನು. ತಾನೇ ಪಾಲಿಸುವನು. ತಾನೇ ನಾಶಹೊಂದಿಸುವ ನು, ಜೀವನು ಹಾಗಲ್ಲ. ಅಲ್ಪವಾದ ಕರ್ಮಗಳನ್ನು ಮಾಡುತ್ತ, ನಡುನಡುವೆ ಅನೇಕವಿಸ್ತಗಳಿಂದ ಪ್ರತಿಹತನಾಗಿ, ಹಿಡಿದ ಕರ್ಮಗಳನ್ನೂ ಸರಿಯಾಗಿ ಕೊ ನೆಮುಟ್ಟಿಸಲಾರನು. ಮತ್ತು ಆ ಭಗವಂತನು ಚಿದಚಿದಾತ್ಮಕವಾದ ಸಮಸ್ತ ಭೂತಗಳಲ್ಲಿಯೂ ಅಡಗಿದ್ದರೂ,ಯಾರಿಗೂ ತಿಳಿಯಲಾರನು. ದೇಹದಲ್ಲಿರುವ ಜೀವಾತ್ಮನನ್ನಾ ದರೋ ಅನುಮಾನಲಕ್ಷಣಗಳಿಂದ ತಿಳಿಯಬಹುದು. ಭಗ ವಂತನು ಸರಸ್ವತಂತ್ರನೇ ಹೊರತು ಜೀವನಂತೆ ಕಾಲಕ್ರಮಾದಿಗಳಿಗೆ ಪರ ತಂತ್ರನಲ್ಲ. ಮತ್ತು ಆ ಭಗವಂತನು ಜ್ಞಾನ, ಶಕ್ತಿ, ಬಲ, ಐಶ್ವರ, ವೀರ ತೇಜಸ್ಸುಗಳೆಂಬ ಷಡ್ಗುಣಗಳಿಗೆ ಅಧಿಪತಿಯಾಗಿರುವವನು. ಜೀವನಲ್ಲಿ ಈ ಗುಣಗಳೆಲ್ಲವೂ ವಿರುದ್ಧವಾಗಿರುವುವು. ಮತ್ತು ಭಗವಂತನು ಜೀವನಂತೆ ಸುಖದಃಖಮೊಗಾಡಿಗಳಿಗೆ ಈಡಾಗದೆ, ಪಡಿಂಗ್ರಿಯವೇದ್ಯಗಳಾದ ಶಬಾ ದಿಗಳ ಮೂಲಕವಾಗಿ ಲೀಲಾರಸವನ್ನನುಭವಿಸುವನು. ಮತ್ತು ಆ ಪರಮಾ ತ್ಮನು ತನ್ನ ಸಂಕಲ್ಪದಿಂದಲೇ ದೇವಾರೂಪಗಳನ್ನೂ, ವೇದಮಯಗಳಾದ ತನ್ನ ವಾಕ್ಕುಗಳಿಂದ ದೇವಮನುಷ್ಯಾನಾಮಗಳನ್ನೂ ನಳಚರೈಯಂತೆ ನಡ ಸುತ್ತಿರುವನು. ಹೀಗೆ ನಡೆಸುತ್ತಿರುವ ಅ ಈಶ್ವರನ ನೀತಿಗಳನ್ನು ಕುಟ್ಟಿ ತಬುದ್ದಿ ಯುಳ್ಳವರೂ, ಮಂದಬುದ್ಧಿಯುಳ್ಳರೂ, ಎಷ್ಮೆ ನೈಪುಣ್ಯದಿಂದಲಾದರೂ ತಿಳಿದುಕೊಳ್ಳಲಾರರು, ಶಬ್ಯಾದಿವಿಷಯಗಳಲ್ಲಿ ವಿರಕರಾಗಿಯೂ, ಜೀವಾತ್ಮ

  • ಇಲ್ಲಿ 'ಅಜಾಯಮಾನೋ ಬಹುಧಾ ವಿಜಾಯತೇ” ಎಂಬುದು ವೇದವಾಕ್ಯವು. ಇದರಲ್ಲಿರುವ ರಹಸ್ಕಾರವೇನೆಂದರೆ:-ಭಗವಂತನಿಗೆ ಕರಾಧೀನವಾದ ಜನ್ಮಗಳಿಲ್ಲt ದ್ದರೂ, ತನ್ನ ಸಂಕಲ್ಪ ಮೂಲಕವಾಗಿ ತಾನೇ ಅವತರಿಸತಕ್ಕವನೆಂದು ಭಾವನ