ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨ ಶ್ರೀಮದ್ಭಾಗವತವು. [ಅಧ್ಯಾ, ೩. ಪರಮಾತ್ಮ ತತ್ವಗಳನ್ನು ತಿಳಿಯಬಲ್ಲವರಾಗಿಯೂ ಇರತಕ್ಕ ಬುದ್ಧಿಶಾಲಿಗಳು ಮಾತ್ರವೇ ಆತನ ನಿಜಸ್ಥಿತಿಯನ್ನು ತಿಳಿಯಬಲ್ಲರು. ಮತ್ತು ನಾಟಕದಲ್ಲಿ ನಟನು ವಿಚಿತ್ರಗಳಾದ ವೇಷಗಳನ್ನು ಧರಿಸಿ, ಆಯಾಪಾತ್ರಗಳಿಗೆ ತಕ್ಕಷ್ಟೆ ಗಳನ್ನು ನಟಿಸುವಂತೆ, ಭಗವಂತನೂಕೂಡ ಮಕೂರಾದ್ಯವತಾರಗಳನ್ನೆ ತಿವಾಗ, ತನ್ನ ನಿಜಸ್ವಭಾವವನ್ನು ಬಿಡದೆ, ತಾನು ಲೀಲಾರ್ಥವಾಗಿ ಅವಲಂಬಿ ಸಿದ ರೂಪಕ್ಕೆ ತಕ್ಕ ಕಾವ್ಯಗಳನ್ನೇ ನಡೆಸುವನು. ಆದುದರಿಂದ ಯಾವನು ಮಾ ಯಾಗುಣಗಳಾದ ಕಾಮಾದಿಗಳನ್ನು ಬಿಟ್ಟು, ಭಗವಂತನ ಪಾದಪದ್ಯಗಳನ್ನು ಸೇವಿಸುವನೋ,ಯಾವನು ಆ ಪರಮಪುರಷನಾದ ಚಕ್ರಪಾಣಿಯನ್ನು ಭಕ್ತಿ ಯಿಂದ ಭಜಿಸುವನೋ ಅವನೇ ಪರಮಾತ್ಮನ ಲೀಲೆಗಳನ್ನು ವ್ಯಕ್ತವಾಗಿ ತಿಳಿ ಯಬಲ್ಲನು. ಎಲೈ ಮಹರ್ಷಿಗಳೆ ! ಪೂಜ್ಯರಾದ ನೀವೆಲ್ಲರೂ ಸ್ವಲೋಕನಾಥ ನಾದ ಆ ಶ್ರೀಹರಿಯಲ್ಲಿ, ಮನೋವಾಕ್ಕಾಯಗಳೆಂಬ ತ್ರಿಕರಣಗಳಿಂದಲೂ ಭ *ಯೋಗವನ್ನವಲಂಬಿಸಿ, ಆತನನ್ನು ಸೇವಿಸುತ್ತಿರುವುದರಿಂದ ನೀವೇ ಪರಮ ಧನ್ಯರು! ಭಕ್ತಿಯೋಗವೆಂಬುದು ಸಾಮಾನ್ಯವಲ್ಲ. ಆ ಭಕ್ತಿಯು ಹುಟ್ಟಿದೊಡ ನೆ, ಗರ್ಭ, ಜನ್ಮ, ಜರಾ, ಮರಣಾದಿ ದುಃಖಗಳುಳ್ಳ ಭಯಂಕರವಾದ ಸಂಸಾ ರಪಾಶವು ಬಿಟ್ಟು ಹೋಗುವುದು. ಭಾಗವತವೆಂಬ ಈ ಪುರಾಣರತ್ನವು ಪೂಣ್ಯ ಶೈಕನಾದ ಆ ಭಗವಂತನ ಚರಿತ್ರೆಗಳನ್ನು ಪ್ರತಿಪಾದಿಸುವುದರಿಂದ, ವೇದ ಸಮಾನವೆನಿಸುವುದು. ಸಕಲವೇದಗಳ ಸಾರವನ್ನೂ ತಿಳಿದ ವ್ಯಾಸನೇ ಇದನ್ನು ರಚಿಸಿರುವನು. ಇದನ್ನೊದುವುದರಿಂದ ಜನರು ಉತ್ತಮಜ್ಞಾನವನ್ನು ಹೊಂದಿ ಕೃತಾರ್ಥರಾಗುವರು, ಅತ್ಯಂತಮಂಗಳಕರವಾದ ಈ ಸದ್ಯಂಥ ವನ್ನು ಪಠಿಸಿ ಚೇತನರೆಲ್ಲರೂ ಉಜೀವಿಸಬೇಕೆಂಬುದಕ್ಕಾಗಿಯೇ, ವ್ಯಾಸ ಮುನಿಯು ಇದನ್ನು ರಚಿಸಿ, ಆತ್ಮಜ್ಞಾನಿಗಳಲ್ಲಿ ಮೇಲೆನಿಸಿಕೊಂಡ ತನ್ನ ಪುತ್ರನಾದ ಶುಕನಿಂದ ಅಧ್ಯಯನಮಾಡಿಸಿದನು. ವೇದಗಳಲ್ಲಿಯೂ, ಪುರಾಣಗ ಇಲ್ಲಿಯೂ ಇರುವ ಸಮಸ್ತಸಾರಗಳನ್ನೂ ಗ್ರಹಿಸಿ ಈ ಪುರಾಣವು ರಚಿಸಲ್ಪ ಟೈರುವುದು. ಶುಕನು ಇದನ್ನು ತನ್ನ ತಂದೆಯಾದ ವ್ಯಾಸಮಹರ್ಷಿಯಿಂದ ಅಧ್ಯಯನಮಾಡಿದಮೇಲೆ, ಗಂಗಾತೀರದಲ್ಲಿ ಅನೇಕಮಹರ್ಷಿಗಳಿಂದ ಪರಿವೃ ತನಾಗಿ ಪ್ರಾಯೋಪವೇಶದಲ್ಲಿದ್ದ ಪರಿಕ್ಷಿದ್ರಾಜನನ್ನು ನೋಡಿ, ಅವನಲ್ಲಿ ಕರು