ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಳ ಶ್ರೀಮದ್ಭಾಗವತವು. [ಅಧ್ಯಾ, ೪, ವಿಧವಾದ ವಿಕಲ್ಪವೂ ಇಲ್ಲದ ಪರಮಾರ್ಥಜ್ಞಾನವುಳ್ಳವನು. ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿಯುಳ್ಳವನು. ಆತ್ಮಜ್ಞಾನದಲ್ಲಿ ಯಾವಾಗಲೂ ಎಚ್ಚರವು ಇವನು ತನ್ನ ಮಹಿಮೆಯನ್ನು ಹೊರಗೆ ಕಾಣಿಸುವ ಸ್ವಭಾವವಿಲ್ಲದೆ, ನೋ ಡುವವರಿಗೆ ಏನೂ ತಿಳಿಯದವನಂತೆ ಕಾಣುತ್ತ ಗೂಢವಾಗಿರತಕ್ಕವನು.ಒಮ್ಮೆ ಆ ಶುಕಮುನಿಯು ಒಂದು ನದೀತೀರದಲ್ಲಿ ಹೋಗುತ್ತಿರುವಾಗ, ಅಲ್ಲಿ ಮೈ ಮೇಲೆ ಬಟ್ಟೆಯಿಲ್ಲದೆ ಕೆಲವು ದೇವತಾಸ್ತ್ರೀಯರು ಜಲಕ್ರೀಡೆಯನ್ನಾಡು ತಿದ್ದು, ವಸ್ತ್ರಧಾರಿಯಾದ ಈತನನ್ನು ನೋಡಿಯೂಕೊಡ ಲಜ್ಜೆಯಿಲ್ಲದೆ ನಿರ್ವಾಣದಲ್ಲಿಯೇ ನಿಂತಿದ್ದರು. ಈ ಶುಕನನ್ನು ಹಿಂಬಾಲಿಸಿ ಬರುತಿದ್ದ ಈ ತನ ತಂದೆಯಾದವ್ಯಾಸನು, ಆ ಸ್ತ್ರೀಯರ ನಡತೆಯನ್ನು ನೋಡಿ ಆಶ್ಚಯ್ಯಪ ಟ್ಯವನಾಗಿ, ಅವರು ನಾಚಿಕೆಯಿಲ್ಲದೆ ನಿಂತಿರುವುದಕ್ಕೆ ಕಾರಣವೇನೆಂದು ಅವ ರನ್ನೇ ಪ್ರಶ್ನೆ ಮಾಡಿದನು. ಅದಕ್ಕಾದೇವಯರು ವ್ಯಾಸಮುನಿಯನ್ನು ಕು ರಿತುಎಲೈ!ನಿನಗೆ ಇನ್ನೂ ಸ್ತ್ರೀಯರೆಂದೂ, ಪರುಷರೆಂದೂ ಭೇದಬುಟ್ಟಿಯಿ ರುವಂತಿದೆ! ನಿನ್ನ ಪುತ್ರನಾದ ಈ ಶುಕಮುನಿಯಾದರೆ ನಿನಗಿಂತಲೂ ಪು ಪಕ್ಷವಾದ ಜ್ಞಾನವುಳ್ಳವನು. ಆತನಿಗೆ ಪ್ರಕೃತಿಪುರುಷವಿಲಕ್ಷಣನಾದ ಪರ ಮಾತ್ಮನೊಬ್ಬನಲ್ಲಿ ದೃಷ್ಟಿಯೇ ಹೊರತು, ಅದನ್ನು ಬಿಟ್ಟು ಬೇರೊಂದು ವಿಧ ವಾದ ಭೇದವೂ ತಿಳಿಯದು. ಆದುದರಿಂದಲೇ ನಮಗೆ ಅವನನ್ನು ನೋಡಿಯೂ ಲಜ್ಜೆಹುಟ್ಟಲಿಲ್ಲವು” ಎಂದರು. ಇಂತಹ ಮಹಾಜ್ಞಾನಿಯಾದ ಶುಕನು ಏನೂ ತಿಳಿಯದ ಮೂಢನಂತೆಯೂ, ಹುಚ್ಚನಂತೆಯೂ, ಜಡನಂತೆಯೂ, ಕುರು ಜಾಂಗಲಪ್ರದೇಶಗಳಲ್ಲಿ ನಿಂತಲ್ಲಿ ನಿಲ್ಲದೆ ಸುತ್ತುತಿದ್ದನಲ್ಲವೆ ? ಇಂತವನಿಗೆ ಹ ಸಿನಾಪುರದಲ್ಲಿ ಹೇಗೆ ಪ್ರವೇಶವುಂಟಾಯಿತು ? ಅಲ್ಲಿನ ನಿವಾಸಿಗಳಿಗೆ ಇವನ ಮಹಿಮೆಯು ಹೇಗೆ ತಿಳಿಯಿತು? ಎಲೈ ಭದ್ರನೆ! ಪಾಂಡವಕುಲಕ್ಕೆ ಅಲಂಕಾರ ನೆನಿಸಿಕೊಂಡ ರಾಜಋಷಿಯಾದ ಪರೀಕ್ಷಿತಿಗೂ, ಈ ಶುಕಮುನಿಗೂ ಪರಸ್ಪರ ಸಂವಾದವು ಹುಟ್ಟಿದುದು ಹೇಗೆ ? ಆ ಸಂವಾದದಲ್ಲಿ ಈ ಭಾಗವತಸಂಹಿ ತೆಯ ಪ್ರಸಂಗವು ಬರುವುದಕ್ಕೆ ಕಾರಣವೇನು? ಮತ್ತು ಮಹಾತ್ಮನಾದ ಆ ಶುಕಮಹಾಮುನಿಯು ಅಲ್ಲಲ್ಲಿ ಸುತ್ತುವಾಗ, ಗೃಹಸ್ಥರ ಮನೆಯನ್ನು ಪವಿತ್ರವನ್ನಾಗಿ ಮಾಡುವುದಕ್ಕಾಗಿ ಎಂದಾದರೂ ಒಮ್ಮೆ ಅಲ್ಲಿಗೆ ಪ್ರವೇ