ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ಭಾಗವತರು [ಅ . ೧೦. ದಾದರೂ, ಮೃತ್ಯುವನ್ನು ಜಯಿಸುವುದಕ್ಕೆ ಯಾವುದು ಕಾರಣವೋ, ಅಂತ ಹ ಮೋಕ್ಷಪಾಯವನ್ನು ಮಾತ್ರ ತಿಳಿಯಲಾರರು. ಅಂತವರು ತಾವು ಜೀ ವಿಸಿರುವವರೆಗಾದರೂ ಸತ್ಕರಾಚರಣೆಯಿಂದ ಅದಕ್ಕೆ ಫಲರೂಪವಾದ ಭೋಗಗಳನ್ನನುಭವಿಸುತ್ತ ಸುಖದಿಂದಿರಬಹುದಲ್ಲವೆ ? ” ಎಂದರೆ, ಹುಟ್ಟಿದ ಮೇಲೆ ಮೃತ್ಯವು ಅವರ ಬೆನ್ನ ಮೇಲೆಯೇ ಕಾದಿದ್ದು, ಅವರನ್ನು ಕಬಳಿಸು ವುದಕ್ಕಾಗಿ ನಿರಿಕ್ಷಿಸುತ್ತಿರುವಾಗ, ನಡುವೆ ಅವರಿಗೆ ಆ “ರಕಾಮಗಳಿಂ ದುಂಟಾಗತಕ್ಕ ಸುಖವೊಂದು ಸುಖವೆನಿಸುವುದೆ ? ಅಪರಾಧಿಯನ್ನು ಮಧ್ಯ ಸ್ಥಾನಕ್ಕೆ ಕರೆದುಕೊಂಡು ಹೋಗುವಾಗ, ಅವನಿಗೆ ಎಷ್ಟೆ ಅಲಂಕಾರವ ನ್ನು ಮಾಡಿದರೂ,ರಸವತ್ತಾದ ಭಕ್ಷ್ಯಭೋಜ್ಯಗಳನ್ನು ತಂದುಮುಂದಿಟ್ಟರೂ ಅವನಿಗೆ ತುಷ್ಟಿಯುಂಟಾಗುವುದೆ ?” ಕಾಮ್ಯಕರಗಳಿಗೆ ಶ್ರುತಿಗಳಲ್ಲಿ ಹೇಳಿ ರುವ ಲೌಕಿಕ ಫಲಗಳೂ, ಸ್ವರ್ಗಾಧಿಭೋಗಗಳೂ ಕೈಗೂಡಿ ಬರಬೇಕಾ ದರೂ, ನಡುವೆ ಪರಸ್ಪರಸ್ಪರ್ಧೆ, ಅಸೂಯೆ, ಆಯಾ ಕರಗಳಲ್ಲಿ ಹೆಚ್ಚು ಕರಿಮೆ, ಮುಂತಾಗಿ ಎಷ್ಟೋ ವಿಷ್ಣು ಪರಂಪರೆಗಳುಂಟು, ಬಹುಕಾಲದಿಂದ ಪ್ರಯತ್ನ ಪಟ್ಟು ನಡೆಸಿದ ವ್ಯವಸಾಯವು, ವಿಷ್ಣುಗಳಿಂದ ನಿಷ್ಪಲವಾಗು ವಂತೆ, ಶ್ರಮಪಟ್ಟು ನಡೆಸಿದ ಕಠಗಳೂ ಆಗಾಗ ವಿಷ್ಣು ಗಳಿಂದ ಪ್ರತಿಹತ ವಾಗುವುವು. ಒಂದುವೇಳೆ ಅಂತಹ ವಿಷ್ಣು ಗಳೊಂದಕ್ಕೂ ಅವಕಾಶಕೊ ಡದೆ ಆಯಾಕ್‌ಗಳನ್ನು ಎಚ್ಚರಿಕೆಯಿಂದ ನಡೆಸಿಕೊಂಡುಬಂದರೂ, ಆದ ರಿಂದ ಅಭಿಸಬಹುದಾದ ಭೋಗವೂ ಸ್ಥಿರವಲ್ಲ. ಇದೇ ಸಂದರ್ಭದಲ್ಲಿ ಆ ಕಮ್ಮ ಗಳಿಂದ ಅಭಿಸಬಹುದಾದ ಫಲವೇನೆಂಬುದನ್ನೂ ಸಂಕ್ಷೇಪವಾಗಿ ವಿವರಿಸು ವನು ಕಳು ಯಜ್ಞಶೀಲನಾದವನು, ಯಜ್ಞಗಳಿಂದ ಇಂದ್ರಾದಿದೇವತೆಗೆ ಇನ್ನು ಕ್ರಮವಾಗಿ ಆರಾಧಿಸಿದಪಕ್ಷದಲ್ಲಿ, ಸ್ವರ್ಗಲೋಕವನ್ನು ಸೇರುವನು. ಅಲ್ಲಿ ತನ್ನ ಕರಗಳಿಗೆ ಫಲವಾಗಿ ಇಂದ್ರಾದಿದೇವತೆಗಳೊಡನೆ ಸೇರಿ, ಅವ ರಿಗೆ ಸಮಾನವಾಗಿ ವ್ಯಭೋಗಗಳನ್ನನುಭವಿಸುವನು, ನಿರ್ಮಲವಾದ ವಿಮಾನದಲ್ಲಿ ಅಪ್ಪರಸ್ತ್ರೀಯರ ನಡುವೆ ಕುಳಿತು, ದಿವ್ಯವೇಷದಿಂದೊಪ್ಪತ್ರ, ಅವರಿಂದ ನಾನಾವಿಧವಾಗಿ ಉಪಚರಿಸಲ್ಪಡುವನು. ಗಂಧತ್ವರು ಸುತ್ತಲೂ ಸರಿ ಅವನ ಮನಸ್ಸಂತೋಷವಾಗುವಂತೆ ದಿವ್ಯಗಾನಗಳನ್ನು ಮಾಡುವರು.