ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೮ ಶ್ರೀಮದ್ಭಾಗವತನ [ಅಧ್ಯಾ ೧೧. ನಿರ್ದೋಷನಾದ ನನ್ನಲ್ಲಿ ಇದು ವಾಸ್ತವವಲ್ಲ. ಏಕೆಂದರೆ, ಮಾಯೆಯೆಂಬ ಪ್ರಕೃತಿಯು ನನ್ನ ನಿಯಮಕ್ಕೆ ಒಳಪಟ್ಟಿರುವುದರಿಂದ,ಆ ಮಾಯಾಗುಣಗ ಳು ನನ್ನನ್ನು ಕಟ್ಟಿಡಲಾರವು. ನನ್ನ ನಿಯಮಕ್ಕೊಳಪಟ್ಟ ಆ ಮಾಯೆ ಯಿಂದಲೇ ಜೀವನಿಗೆ, ಶೋಕ, ಮೋಹ, ಸುಖ, ದುಃಖಾದಿಗಳು ದೇಹ ಪ್ರಾತಿಯೂ ಸಂಭವಿಸುವುವು. ಆದರೆ ಸ್ವಪ್ನದಲ್ಲಿ ಆತ್ಮನಿಗೆ ದೇಹಸಂಬಂ ಥವಾ ದ ಸುಖದುಃಖಗಳು ತೋರುವಂತ, ಅದೂಕೂಡ, ಆಗಂತುಕವಾಗಿ ಸಂಭವಿಸುವುದೇ ಹೊರತು, ಆ ಸಂಸಾರವು ಆತ್ಮನಿಗೆ ಸ್ವರೂಪಸಿದ್ಧವಾ ದುದೂ ಅಲ್ಲ ! ನಿತ್ಯವೂ ಅಲ್ಲ ! ಅದು ಉಪಾಧಿವಶದಿಂದ ಬಂದುದಾದುದ ರಿಂದ ಆನಿತ್ಯವೆನಿಸುವುದು. ಉದ್ಯವಾ! ವಿದ್ಯೆ, ವಿದ್ಯೆ, ಎಂಬಿವೆರಡೂ ನನಗೆ ಶರೀರಗಳೆನಿಸಿಕೊಂಡು ನನ್ನ ಆಧೀನವಾಗಿರುವುವೆಂದು ತಿಳಿ ! ಆ ವಿದ್ಯಾ ವಿದ್ಯೆಗಳೇ ಕ್ರಮವಾಗಿ ಪ್ರಾಣಿಗಳಿಗೆ ಮೋಕ್ಷವನ್ನೂ, ಬಂಧವನ್ನೂ ಉಂಟುಮಾಡತಕ್ಕವುಗಳಾಗಿರುವವು. ಅವು ಅನಾದಿಯಾಗಿ ಅನುಸರಿಸಿ ಬಂದರೂ, ಅವುಗಳಿಗೆ ಕೊನೆಯುಂಟು. ಅವುಗಳನ್ನು ನಾನು ನನ್ನ ಸಂಕಲ್ಪ ರೂಪಜ್ಞಾನದಿಂದ ಸಿರಿಸಿರುವೆನು. ವಿದ್ಯೆಯೆಂದರೆ ನನ್ನ ಉಪಾಸನವು ಅವಿದ್ಯೆಯೆಂದರೆ ಆತ್ಮ ಪರಮಾತ್ಮ ಸ್ವರೂಪವನ್ನು ತಿಳಿಯಲಾರದ ಅಜ್ಞತೆ! ನನಗೆ ಶರೀರವೆನಿಸಿಕೊಂಡು, ನನ್ನ ಅಂಶಭೂತನಾದ ಜೀವನಿಗೆ,ಆ ಅವಿದ್ಯೆ ಯಿಂದ ಬಂಧವೂ, ವಿದ್ಯೆಯಿಂದ ಮೋಕ್ಷವೂ ಉಂಟಾಗುವುವು. ಬದ್ಧನಾದ ಜಿವನಿಗೂ, ನಿತ್ಯಮುಕ್ತನಾದ ಈಶ್ವರನಿಗೂ ಇರುವ ವೈ ಲಕ್ಷಣ್ಯವನ್ನೂ ನಿನಗೆ ತಿಳಿಸುವೆರು ಕೇಳು! ಆ ಜಿ'ವೇಶ್ವರರಿಬ್ಬರೂ ಒಂದೇ ಶರೀರದಲ್ಲಿ ಸೇರಿರತಕ್ಕವರಾದುದರಿಂದ ಅವರನ್ನು * ಒಂದೇ ಗೂಡಿನಲ್ಲಿ

  • ಇಲ್ಲಿ “ದ್ ಸುವರ್ಣ ಸಯುಜ ಸಖಾಯ್ ಸಮಾವಂ ವೃಕ್ಷಂ ಪರಿ ತಪ್ಪಜಾತೇ | ತರವ: ಶಿಪ್ಪಲಂ ಸ್ನಾತ್ರನನ್ನ ಮೈ ಅಭಿಚಾಕಶೀ ?” ಎಂಬ ಶ್ರತಿವಾಕ್ಯದ ಅರ್ಥವ ಅನುಸಂಧಿಸಲ್ಪಟ್ಟಿದೆ. “ ಊರ್ಧ್ವಮೂಲಮಧಕ್ಕಾರ ಮುತ್ಯಂ ಪ್ರಾಹುರವ್ಯಯಮ್” ಎಂಬುದಾಗಿ ಪ್ರಕೃತಿಯನ್ನೇ ಅತ್ಯರಂಶವಾಗಿ ಹೇಳಿರುವುದರಿಂದ ಅಲ್ಲಿ ಒಪ್ಪಲವೆಂದರೆ ಪ್ರಕೃತಿಯೆಂದೂ, ಅದರ ಫಲವನ್ನು ಛು ಸುವುದೆಂದರೆ ಶಬ್ದಾದಿವಿಷಯಗಳನ್ನನುಭವಿಸುವುದೆಂದು ಗ್ರಾಹನ.