ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಥ್ಯಾ. ೧೧.] ಏಕಾದತಕ್ಕಂಧನ. ರುವ ಎರಡುಪಕ್ಷಿಗಳಂತೆ ಭಾವಿಸಬಹುದು. ಇವೆರಡಕ್ಕೂ ಅನೇಕವಿಧ ದಲ್ಲಿ ಸಮಾನ ಗುಣಗಳಿದ್ದರೂ, ಅವೆರಡೂ ಪರಸ್ಪರ ವಿರುದ್ಧವುಳ್ಳ ಗಳು. ಇವೆರಡೂ ಸಹಜವಾಗಿ ಅನ್ನೊವ್ಯಸ್ನೇಹವುಳ್ಳವು. ಇವೆರಡೂ ಶರೀರವೆಂಬ ವೃಕ್ಷದಲ್ಲಿ, ಹೃದಯಕಮಲವೆಂಬ ಗೂಡಿನಲ್ಲಿ ಸೇರಿರುವುವು. ಅವುಗಳಲ್ಲಿ ಒಂದು ಪಕ್ಷಿಯು, ಆ ಆಲದ ಮರದಹಣ್ಣುಗಳನ್ನೇ (ಪ್ರಕೃತಿ ಫಲರೂಪಗಳಾದ ಶಬ್ದಾವಿಷಯಗಳನ್ನು ) ಭುಜಿಸುತ್ತಿರುವುದು. ಮತ್ತೊಂ ದು ಪಕ್ಷಿಯು (ಈಶ್ವರನು) ಯಾವ ಫಲವನ್ನೂ ಭುಜಿಸದಿದ್ದರೂ (ಕರ ಪ್ರಾಪ್ತವಾದ ಸುಖದುಃಖಾಭೋಗಗಳಿಲ್ಲದಿದ್ದರೂ) ಬಲಾಧಿಕವಾಗಿ, ಸತ್ವಜ್ಞತ್ವ ಸಶಕ್ತತ್ವ ಮೊದಲಾದ ವಿಶೇಷಗುಣವುಳ್ಳದಾಗಿ) ಪ್ರಕಾ ತಿಸುತ್ತಿರುವುದು. ಆ ಬಲಾಧಿಕವಾದ ಪಕ್ಷಿಯು, ತನ್ನನ್ನೂ, ತಾನಿರುವ ಗೂ ಡಿನ ಸ್ಥಿತಿಯನ್ನೂ, ತನಗೆ ಪ್ರಿಯವಾದ ಮತ್ತೊಂದುಪಕ್ಷಿಯ ಸ್ವರೂಪ ವನ್ನೂ ಚೆನ್ನಾಗಿ ತಿಳಿಯಬಲ್ಲುದು. ಮತ್ತೊಂದು ಪಕ್ಷಿಯಾದರೋ, ತನ್ನನ್ನೂ, ತನಗೆ ಪ್ರಿಯವಾದ ಇತರಪಕ್ಷಿಯ ಸ್ವರೂಪವನ್ನೂ ತಿಳಿಯಲಾ ರದು. ಉದ್ವಾ ' ಜೀವೇಶ್ವರರಿಗಿರುವ ಭೇದವು ಇಷ್ಟೇ ಅಲ್ಲ! ದೇವನು ದೇಹವನ್ನೆ ತಾನೆಂದು ಭ್ರಮಿಸುತ್ತ, ಅವಿದ್ಯೆಯಿಂದ ನಿತ್ಯಬದ್ಧನಾಗಿರು ವನು. ಈಶ್ವರನು ಅಂತಹ ಅವಿದ್ಯೆಗೆ ಈಡಾಗದೆ, ಸತ್ವಜ್ಞನೆನಿಸಿರುವುದರಿಂದ ನಿತ್ಯಮುಕ್ತನು, ನಿಪುಣಬುದ್ಧಿಯುಳ್ಳ ವಿದ್ವಾಂಸನ ವರ್ತನವು ಹೇಗಿರುವು ದೆಂದು ಕೇಳಿದೆಯಲ್ಲವೆ? ಸ್ವಪ್ನ ಬಂದೆದ್ದವನಿಗೆ, ಹಿಂದೆ ತನಗೆ ಕನಸಿನಲ್ಲಿ ಕಾಣಿಸಿದ ಸ್ವಪ್ನ ಶರೀರದಲ್ಲಿ ತನ್ನದೆಂಬ ಭ್ರಾಂತಿಯು ಹೇಗೆ ಹುಟ್ಟುವು ದಿಲ್ಲವೋ, ಹಾಗೆಯೇ ವಿದ್ವಾಂಸನು, ದೇಹದಲ್ಲಿದ್ದರೂ ಆ ದೇಹದಲ್ಲಿ ಆತ್ಮ ಬುಕ್ಕಿಯನ್ನು ಎಂದಿಗೂ ಇಡಲಾರನು. ಈ ಕಾರಣದಿಂದ ಅವನು ದೇಹ ದಲ್ಲಿ ಸೇರಿದ್ದರೂ ಅದರಲ್ಲಿಲ್ಲದದಂತೆಯೇ ಇರುವನು.ದೇಹವನ್ನೇ ಆತ್ಮವೆಂದು ಭವಿಸತಕ್ಕ ಕುಖುದ್ದಿಯುಳ್ಳವನಾದರೋ, ದೇಹರಹಿತನಾಗಿದ್ದಾಗಲೂ (ಎಂದರೆ ಗರ್ಭದಶೆಯಲ್ಲಿಯೂ ಮತ್ತು ಮಹಾಪ್ರಳಯಾದಿಕಾಲಗಳಲ್ಲಿಯೂ, ಅವನಿಗೆ ದೇಹವು ನಿಷ್ಪನ್ನವಾಗದಿರುವಾಗಲೂ) ಕನಸನ್ನು ಕಂಡು ಕನವ ರಿಸುವವನ, ದೇಹಬದ್ಧನಂತೆಯೇ ಇರುವನು. ತನ್ನ ಇಂದ್ರಿಯಗಳಿಂ