ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೮ ಶ್ರೀಮದ್ಭಾಗವತವು [ಅನ್ಯಾ. ೧೩. ಹೋಗುವುದು. ಮೇಲೆ ಹೇಳಿದಂತೆ ನಿರೂಪಿಸತಕ್ಕ ಯುಕ್ತಿವಾದಗಳಿಂದ, ಮನುಷ್ಯನಿಗೆ ತನ್ನಲ್ಲಿ ದೇವರನಷ್ಯ ತ್ಯಾದಿಭೇದಬುದ್ಧಿಯ ಸಂಪೂಗ್ಗ ವಾಗಿ ನೀಗುವವರೆಗೂ, ಸ್ವಪ್ರ ವನ್ನು ಕಾಣುವವನಿಗೆ ಕನಸಿನ ವಿಷಯಗಳೆಲ್ಲವೂ ಎಚ್ಚರದಲ್ಲಿ ನಡೆದಹಾಗೆಯೇ ತೋರುವಂತೆ, ಅವನು ಜಾಗರಾವಸ್ಥೆಯಲ್ಲಿದ್ದರೂ ಮೈತಿಳಿಯದೆ ಮಲಗಿದವ ನಂತೆ ಅಜ್ನಾಗಿಯೇ ಇರುವನು. ಯಾವಾಗಲೂ ಜ್ಞಾನೈಕಸ್ವರೂಪ ನಾದ ಆತ್ಮನಿಗೆ ದೇವ ಮನುಷ್ಯಾ ಖ್ಯಾಕಾರಭೇದಗಳು ನಿತ್ಯವಾಗಿ ನಿಲ್ಲತಕ್ಕ ವುಗಳಲ್ಲ ! ಆತ್ಮ ಸ್ವರೂಪವನ್ನು ಯಥಾಸ್ಥಿತವಾಗಿ ತಿಳಿದುಕೊಂಡವ ನಿಗೆ, ಶರೀರಪ್ರ ಯಕ್ಷಗಳಾದ ಆ ಆ ಕಾರಭೇದಗಳೂ, ಆ ಶರೀರಸಂಬಂ ಧದಿಂದುಂಟಾಗುವ ಬುದ್ಧಿವಿಪತ್ಯಾಸಗಳೂ, ಆ ಬುದ್ಧಿಭೇದಕ್ಕೆ ಕಾರಣ ಗಳೂ, ಇನ್ನೂ ಆತ್ಮನಲ್ಲಿ ತೋರುವ ಕರವಶತ್ಪಾದೋಷಾಂತರಗ ಛ, ಸ್ವಪ್ಪ ಹಿಂದೆಚ್ಚರಗೊಂಡವನಿಗೆ ಸ್ಪಷ್ಟ ವಿಷಯಗಳು ಹೇಗೋ ಹಾಗೆ ಸುಳ್ಳಾಗಿಯೇ ತೋರುವುವು. ಜೀವನು ಜಾಗ್ರಾವಸ್ಥೆಯಲ್ಲಿ, ಎಂದರೆ ಎಚ್ಚರಗೊಂಡಿರುವಾಗ, ಕ್ಷಣಕ್ಷಣಕ್ಕೂ ಸುಖದುಃಖಾತ್ಮಕವಾಗಿ ಮಾರ್ಪಡುತ್ತಿರುವ ಶಬ್ಯಾವಿಷಯಗಳನ್ನು ತನ್ನ ಸತ್ಯೇಂದ್ರಿಯಗಳಿಂದಲೂ ಅನುಭವಿಸುತ್ತಿರುವನು. ಆ ಜಾಗರಾವಸ್ಥೆಯಲ್ಲಿ ತಾನು ಅನುಭವಿಸಿದುವು ಗಳಿಗೆ ಸಮಾನವಾದ ವಿಷಯಗಳನ್ನೇ ಸ್ವಪ್ನದಲ್ಲಿಯೂ ಅನುಭವಿಸುವನು. ಸುಷುಪ್ತಿಯಲ್ಲಿ ಆ ವಿಷಯಭೋಗಗಳನ್ನು ಉಪಸಂಹರಿಸಿ ಸುಮ್ಮನಿರುವ ನು, ಈ ಮೂರು ಅವಸ್ಥೆಗಳಲ್ಲಿಯೂ ಜೀವನೊಬ್ಬ ನಾಗಿಯೆ ಇರುವನೇ ಹೊರತು ಒಂದೊಂದವಸ್ಥೆಗೆ ಒಬ್ಬೊಬ್ಬ ಜೀನ್ ನಲ್ಲ! ಹೇಗೆಂದರೆ, ನಿದ್ರೆ ಯಿಂದೆದ್ದವನಿಗೆ ತಾನೇ ಮಲಗಿದ್ದು ಎಮ್ಮವನೆಂಬ ಸ್ಮ ತಿಯು ಬಿಟ್ಟು ಹೋಗಲಾರದಲ್ಲವೆ ? ಆದುದರಿಂದ ಜೀವನೊಬ್ಬನೇ ಆ ಅವಸ್ಥೆಗಳೆಲ್ಲವ ನ್ಯೂ ಅನುಭವಿಸತಕ್ಕವನೆಂಬುದು ಸ್ಪಷ್ಟವು. ಹೀಗೆ ಜೀವನು ಕನಿಮಿತ್ತ ಗಳಾದ ಪ್ರಾಕೃತೇಂದ್ರಿಯಪ್ರವರ್ತನವುಳ್ಳವನಾಗಿ ಸತ್ಪಾದಿಗುಣಗಳ ವ್ಯಾಪಾರಗಳಾದ ಜಾಗರಾದ್ಯವಸ್ಥೆಗಳನ್ನು ನೋಡತಕ್ಕವನಾಗಿರುವನು. ಆದುದರಿಂದ ಮನುಷ್ಯನು, ತನ್ನ ಮನಸ್ಸಿನ ಮರವಸ್ಥೆಗಳೂ ಸತ್ಯಾದಿ