ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೧೯ ಅಧ್ಯಾ. ೧೩.] ಏಕಾದಶಂಥವು, ಗುಣಗಳಮೂಲಕವಾಗಿ ನನ್ನ ಮಾಯೆಯಿಂದ ನನ್ನಲ್ಲಿಯೇ (ಎಂದರೆ ಮದಾತ್ಮಕನಾದ ಜೀವನಲ್ಲಿ) ಕಲ್ಪಿತಗಳೆಂಬುದನ್ನು ಚೆನ್ನಾಗಿ ವಿಮರ್ಶಿಸಿ ತಿಳಿದುಕೊಂಡು, ನನ್ನನ್ನು ಸೇರುವುದಕ್ಕೆ ಸಾಧನವೆನಿಸಿದ ನನ್ನ ಉಪಾ. ಸನವೇ ತನಗೆ ಪರಮಪ್ರಯೋಜವೆಂಬುದನ್ನೂ ನಿಶ್ಚಯಿಸಿ, ತನ್ನ ಹೃದಯದಲ್ಲಿರುವ ಸಂಶಯಗಳೆಂಬ ವ್ಯಾಧಿಯನ್ನು ಅನುಮಾನಪ್ರಮಾಣ ದಿಂದಲೂ, ವೇದಾಂತವಿಚಾರದಿಂದಲೂ, ತೀಕ್ಷಜ್ಞಾನವೆಂಬ ಖಡ್ಗ ದಿಂದಲೂ ಛೇದಿಸಿ, ನನ್ನನ್ನು ಭಜಿಸಬೇಕು. ಅನುಮಾನದಿಂದ ತಿಳಿಯು ವುದು ಹೇಗೆಂದರೆ, ಈ ದೇವಮನುಷ್ಯಾದಿಶರೀರಗಳಲ್ಲಿ ಆತ್ಮಬ್ರಾಂ ತಿಯೂ, ಶಬ್ದಾದಿಸಿಷಯಗಳಲ್ಲಿ ಭೋಗ್ಯತಾಬುದ್ದಿಯೂ ಮನೋವೃತ್ತಿಯ ನೃನುಸರಿಸಿಯೇ ಹುಟ್ಟುವುವು. ಒಂದು ಕೊಳ್ಳಿಯನ್ನು ವೇಗದಿಂದ ತಿರುಗಿಸುವಾಗ, ಅದು ಅಖಂಡವಾದ ಅಗ್ನಿ ಚಕ್ರದಂತೆ ತೋರಿದರೂ, ಕೊನೆಗೆ ಆ ಚಕ್ರಾಕಾರವು ಅದಕ್ಕೆ ಸ್ಥಿರವಲ್ಲದಿರುವಂತೆ, ಆತ್ಮನಲ್ಲಿ ಶರೀರಾ ದ್ಯಾಕಾರಭೇದಗಳೂ, ಶಬ್ಬಾ ಏವಿಷಯಗಳೂ ಕಾಲಕ್ರಮದಿಂದ ತಪ್ಪಿಹೋ ಗುವುವೇಹೊರತು ಸ್ಥಿರವಲ್ಲ. ಆದುದರಿಂದ ಆತ್ಮನಿಗೆ ಇವೆಲ್ಲವೂ ಸಹಜವಲ್ಲ ವೆಂಬುದನ್ನು ಅನುಮಾನಿಸಿ ತಿಳಿಯಬೇಕು. ಮತ್ತು ಜಿವನು ಜ್ಞಾನೈಕ್ಷ ರೂಪನಾಗಿದ್ದರೂ, ದೇವಮನುಷ್ಯಾದಿನಾನಾರೂಪದಿಂದ ತೋರುವನು. ಇದು ಶರೀರಸಂಬಂಧದಿಂದಲೇ ಹೊರತು ಸಹಜವಾಗಿ ಜೀವನಲ್ಲಿ ಅಂತಹ ಭೇದಗಳಿಲ್ಲ! ಜೀವನಿಗೆ ಈ ವಿಕಲ್ಪಗಳೆಲ್ಲವೂ ಸತ್ಪರಜಸ್ತಮಸ್ಸುಗಳೆಂಬ ಮೂರುಗುಣಗಳ ಮೂಲಕವಾಗಿ, ಭಗವಂತನ ಮಾಯೆಯಿಂದ ಸ್ವಪ್ನದಂತೆ ಕಲ್ಪಿಸಲ್ಪಟ್ಟಿರುವುವು. ಎಚ್ಚರಗೊಂಡಮೇಲೆ ಸ್ವಪ್ಪಾ ನುಭವವು ಬಿಟ್ಟು, ಹೋಗುವಂತೆ, ಆತ್ಮ ಪರಮಾತ್ಮಸ್ವರೂಪವನ್ನು ತಿಳಿದುಕೊಂಡವನಿಗೆ ಶರೀರಾದ್ಯಾಕಾರಭೇದಗಳು ಆತ್ಮನಿಗೆ ಸಹಜವೆಂಬ ಭಾಂತಿಯೂ ಬಿಟ್ಟು ಹೋಗುವುದು. ಆದುದರಿಂದ ವಿವೇಕಿಯಾದವನು, ಶಬ್ದಾದಿವಿಷಯ ಗಳ ಕಡೆಗೆ ಕಣ್ಣೆತ್ತಿಯೂ ನೋಡದೆ, ಆ ವಿಷಯಗಳನ್ನು ಮನಸ್ಸಿನಿಂದಲೂ ಸ್ಮರಿಸದೆ, ನಿರಾಹಾರನಾಗಿ, ಆತ್ಮಾನುಭವವೆಂಬ ಸಮಾಧಿಯನ್ನು ಹಿಡಿದು, ತನ್ನ ದೇಹಸ್ಕೃತಿಯೂ ಇಲ್ಲದಿರಬೇಕು. ಹೀಗೆ ಸಮಾಧಿಯನು 159 B