ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೨೬ ಅಧ್ಯಾ, ೧೪.] ಏಕಾದಶಸ್ಕಂಧನು. ಸಮಪ್ರದೇಶವನ್ನು ನೋಡಿ, ಅಲ್ಲಿ ದರ್ಭೆಗಳಿಂದಾಗಲಿ, ಕೃಷ್ಣಾಜಿನದಿಂದಾ ಗಲಿ, ಆಸ್ತರಣವನ್ನು ಕಲ್ಪಿಸಿ, ಸ್ವಸ್ತಿಕಾಸನ, ಪದ್ಮಾಸನ ಮೊದಲಾದ ಯಾವುದಾದರೂ ಒಂದಾಸನಕ್ರಮದಿಂದ ನಿಶ್ಚಲನಾಗಿ ಮೈಯನ್ನು ನೆಟ್ಟ ಗೆ ನಿಲ್ಲಿಸಿ ಕುಳ್ಳಿರಬೇಕು. ತೊಡೆಯಮೇಲೆ ಕೈಗಳನ್ನಿಟ್ಟು, ಬೇರೊಂದ ನ್ಯೂ ನೋಡದ ಹಾಗೆ ದೃಷ್ಟಿಯನ್ನು ಮೂಗಿನ ತುದಿಯಲ್ಲಿ ನಿಲ್ಲಿಸಿಡಬೇಕು. ಪೂರಕ, ಕುಂಭಕ, ರೇಚಕಗಳೆಂಬ ಪ್ರಾಣಾಯಾಮಕಾರಗಳನ್ನು ಕ್ರಮ ವಾಗಿಯೂ, ವಿಲೋಮವಾಗಿಯೂ ನಡೆಸುತ್ತ, ಅದರಿಂದ ಪ್ರಾಣವಾಯು ವಿನ ಸಂಚಾರಮಾರ್ಗಗಳಾದ ಇಡೆ ಮತ್ತು ಪಿಂಗಳೆಯೆಂಬ ನಾಡೀರಂಧ ಗಳನ್ನು ಶುದ್ದೀಕರಿಸಬೇಕು, ಧ್ಯಾನಕಾರವು ಸರಿಯಾಗಿಯೂ ಸುಲಭವಾ ಗಿಯೂ ನಡೆಯುವುದಕ್ಕೆ ಮನೋಜಯವು ಅತ್ಯವಶ್ಯವು. ಆ ಮನಸ್ಸನ್ನು ಜ ಯಿಸಬೇಕಾದರೆ ಮೊದಲು ಪ್ರಾಣವನ್ನು ಜಯಿಸಬೇಕು.ಆದುದರಿಂದ ಮೊ ದಲು ಪ್ರಾಣಾಯಾಮಗಳನ್ನು ಅಭ್ಯಸಿಸುವುದರಿಂದಲೇ ಇಂದ್ರಿಯಗಳನ್ನು ಜಯಿಸಬೇಕು. ಒಂದೊಂದಾವರ್ತಿಯೂ ಈ ಪ್ರಾಣಾಯಾಮವನ್ನು ಓಂ ಕಾರೋಚ್ಛಾರಣಪೂಕವಾಗಿಯೇ ನಡೆಸಬೇಕು. ಆ ಓಂಕಾರವು ಹೃದ ಯದಲ್ಲಿ ಘಂಟಾನಾದದಂತೆ ಅವಿಚ್ಛಿನ್ನವಾಗಿ ಧ್ವನಿಮಾಡುತ್ತ, ತಾವರೆ ದಂಟಿನ ನೂಲಿನಂತೆ ಅತಿಸೂಕ್ಷ್ಮವಾಗಿರುವುದೆಂದೂ, ಉಚ್ಚಾರಣ ಕಾಲ ದಲ್ಲಿ ಅದನ್ನು ಪ್ರಾಣವಾಯುವಿನೊಡನೆ ಮೇಲಕ್ಕೆ ತಂದು, ತಿರುಗಿ ಆದ ನ್ನು ಹೃದಯದಲ್ಲಿಯೇ ಅಡಗಿಸಿಟ್ಟಂತೆಯೂ ಭಾವಿಸುತ್ತ ಬರಬೇಕು. ಈ ವಿಧವಾದ ಪ್ರಣವಾನುಸಂಧಾನದೊಡನೆ ತ್ರಿಸಂಧ್ಯಾಕಾಲಗಳಲ್ಲಿಯೂ ಹತ್ರಾವರ್ತಿಯಂತೆ ಪ್ರಾಣಾಯಾಮವನ್ನು ಅಭ್ಯಸಿಸುತ್ತ ಬರಬೇಕು, ಹೀಗೆ ಮಾಡುತ್ತ ಬಂದರೆ, ಒಂದು ತಿಂಗಳೊಳಗಾಗಿಯೇ ಪ್ರಾಣವಾಯು ವನ್ನು ಜಯಿಸಬಹುದು. ಉದ್ಯವಾ! ಇದುವರೆಗೆ ಹೇಳಿದುದೆಲ್ಲವೂ ಧ್ಯಾ ನಕ್ಕೆ ಪೂರೈಾಂಗಗಳು. ಇನ್ನು ಧ್ಯಾನಪ್ರಕಾರವನ್ನೂ, ಧೈಯವಸ್ತುವಿನ ಸ್ಥಾನವೇನೆಂಬುದನ್ನೂ ತಿಳಿಸುವೆನು ಕೇಳು, ಧ್ಯಾನಕ್ಕೆ ಕುಳಿತವನು, ತನ್ನ ಶರೀರದೊಳಗಿನ ಹೃದಯಕಮಲವು, ಬಾಳೆಯ ಮೊಗ್ಗಿನಂತೆ ಮುಕುಳಿತ ವಾಗಿ, ಪತ್ನವು ಕೆಳಮುಖವಾಗಿಯೂ, ಕಾವು ಮೇಲಾಗಿಯೂ ಈಗಾ