ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೩೧ ಅಧ್ಯಾ, ೧೫.] ಏಕಾದಶಸ್ಕಂಧನು. ಸಿದ್ದಿಗಳು. ಇವಲ್ಲದೆ ಭೂತಭವಿಷ್ಯದ್ವರ್ತಮಾನಗಳನ್ನು ಸಾಕ್ಷಾತ್ಕರಿಸತಕ್ಕ ಶಕ್ತಿ, ಶೀತೋಷ್ಟಾದ್ವಂದ್ವಗಳನ್ನು ಜಯಿಸುವುದು. ಇತರರ ಮನಸ್ಸನ್ನು ಕಂಡುಕೊಳ್ಳುವ ಶಕ್ತಿ, ಬೆಂಕಿ, ಬಿಸಿಲು, ಮಳೆ, ಗಾಳಿ, ನೀರು, ವಿಷ, ಮುಂ ತಾದುವುಗಳನ್ನು ತಡೆಯತಕ್ಕ (ಅಗ್ನಿ ಸ್ತಂಭ, ಜಲಸ್ತಂಭ) ಮುಂತಾದುವು, ಎಲ್ಲಿಯೂ ಪರಾಜಯವಿಲ್ಲದಿರುವುದು, ಇವೂಕೂಡ ಆ ಯೋಗಧಾರಣ ದಿಂದಲೇ ಉಂಟಾಗುವ ಸಿದ್ಧಿಗಳಾಗಿರುವುವು. ಯಾವವಿಧವಾದ ಮನೋ ಧಾರಣೆಯಿಂದ ಯಾವ ಸಿದ್ಧಿಯುಂಟಾಗುವುದೆಂಬುದನ್ನೂ ತಿಳಿಸುವೆನು ಕೇಳು ! ಭೂತಸೂಕ್ಷ್ಮಶರೀರಕನಾದ ನನ್ನನ್ನು ಆದೇಭಾವದಿಂದ ಮನ ಸ್ಸಿನಲ್ಲಿ ಧಾರಣಮಾಡಿ ಉಪಾಸಿಸತಕ್ಕವನು, ಅಣಿಮಾ ಸಿದ್ಧಿಯನ್ನು ಹೊಂ ದುವನು. ಮಹತ್ತೆಂಬ ತತ್ವವನ್ನು ಶರೀರವಾಗಿ ಉಳ್ಳ ನನ್ನನ್ನು ಆ ಮಹ ತತ್ವರೂಪದಿಂದಲೇ ಮನಸ್ಸಿನಲ್ಲಿ ಧಾರಣಮಾಡತಕ್ಕವನು, ಆಕಾಶಾದಿ ಭೂತಗಳಿಗೆ ಬೇರೆಬೇರೆಯಾದ ಯಾವ ಮಹತ್ವವುಂಟೋ ಅದನ್ನು ಪಡೆಯ ತಕ್ಕ ಮಹಿಮಾಸಿದ್ಧಿಯನ್ನು ಹೊಂದುವನು. ಪರಮಾಣುಗಳೆನಿಸಿದ ಭೂತ ಗಳ ಸೂಕ್ಷಾವಯವಗಳಲ್ಲಿಯೂ, ಸೂಕ್ಷ್ಮ ಕಾಲದಲ್ಲಿಯೂ ವ್ಯಾಪಿಸಿದ ನ ಇನ್ನು ಅದೇ ಪರಮಾಣುಶರೀರಕನೆಂಬ ಭಾವದಿಂದ ಮನಸ್ಸಿನಲ್ಲಿ ಧಾರಣ ಮಾಡುವವನು ಲಘಿಮಾಸಿದ್ಧಿಯನ್ನು ಹೊಂದುವನು. ವೈ ಕಾರಿಕವೆಂಬ ಅಹಂಕಾರತತ್ವವೇ ಶರೀರವಾಗಿ ಉಳ್ಳ ನನ್ನ ನ್ನು ಅದೇ ಭಾವದಿಂದ ಮನಸ್ಸಿ ನಲ್ಲಿಟ್ಟು ದೃಢವಾಗಿ ಧ್ಯಾನಿಸಿದವನು, ಎಲ್ಲಾ ಪ್ರಾಣಿಗಳ ಇಂದ್ರಿಯಗಳಲ್ಲಿ ಆಥಿಷ್ಠಾನಶಕ್ತಿಯನ್ನು ಹೊಂದುವನು. ಅವ್ಯಕ್ತವೆನಿಸಿದ ಪ್ರಧಾನದಿಂದ ಹುಟ್ಟಿದ ಮಹತ್ತತ್ವವು ಸಮಸ್ಯಕಾರಗಳಿಗೂ ಸೂತ್ರರೂಪವಾಗಿರುವು ದೆಂದೂ, ಆ ಮಹತ್ವವು ನನಗೆ ಶರೀರವೆಂದೂ ತಿಳಿದು, ಅದೇಭಾವದಿಂದ ನನ್ನಲ್ಲಿ ಮನಸ್ಸನ್ನಿಟ್ಟು ಧಾರಣಮಾಡುವವನು, ಸಕಲವ್ಯಾಪಾರೋಪ ಯುಕ್ತವಾದ ಜ್ಞಾನಾತಿಶಯವನ್ನೂ, ಬ್ರಹ್ಮನಂತೆ ಸರೋತ್ತಮನಾಮ ಕೃವನ್ನೂ ಪಡೆಯುವನು. ನಾನು ಸತ್ವವ್ಯಾಪಕನೆಂದೂ, ಸೃಷ್ಟಿ ಸ್ಥಿತಿ ಸಂಹಾರಗಳೆಂಬ ವ್ಯಾಪಾರತ್ರಯಕ್ಕ ನಿರ್ವಾಹಕನೆಂದೂ, ಕಾಲಶರೀರಕ ನೆಂದೂ ಮನಸ್ಸಿನಲ್ಲಿಟ್ಟು ಧಾರಣಮಾಡುವವನು, ಸಮಸ್ತ ದೇಹಗಳ ಮ