೨೫
ಅಧ್ಯಾ, ೧೫.]
ಏಕಾದಶಸ್ಕಂಧನು. ಡನೆ ಸೇರಿ, ಭಮರವು ಹೂವಿನಿಂದ ಹೂವಿಗೆ ಹಾರುವಂತೆ, ಈ ದೇಹವ ನ್ನು ಬಿಟ್ಟು ಇತರದೇಹದಲ್ಲಿ ವಾಯುರೂಪವಾಗಿ ಪ್ರವೇಶಿಸುವುದು. ಸ್ವ ಶೃಂದಮರಣವನ್ನ ಸೇಕ್ಷಿಸುವವನು, ನನ್ನನ್ನೇ ಧ್ಯಾನಿಸುತ್ತ, ತನ್ನ ಹಿಮ್ಮ ಡಿಯಿಂದ ಗುದಸ್ಥಾನವನ್ನು ಬಲವಾಗಿ ಒತ್ತಿ ಹಿಡಿದು, ತನ್ನ ಪ್ರಾಣವಾ ಯುವನ್ನು ಕ್ರಮವಾಗಿ ಮೇಲೇರಿಸಿ, ಹೃದಯ, ಎದೆ, ಕಂಠ, ಮೂರ್ಧ ವೆಂಬ ಸ್ಥಾನಗಳಲ್ಲಿ ನಿಲ್ಲಿಸುತ್ತ ಬಂದು, ಕೊನೆಗೆ ನಡುನೆತ್ತಿಯು ಸೀಳಿ ಹೋ ಗುವುದರಿಂದುಂಟಾಗುವ ಬ್ರಹ್ಮರಂಧ್ರದಮೂಲಕವಾಗಿ, ಆತ್ಮವನ್ನು ಬ್ರಹ್ಮದಲ್ಲಿ ಸೇರಿಸಿ ದೇಹತ್ಯಾಗವನ್ನು ಮಾಡಬೇಕು. ದೇವತೆಗಳೊಡನೆ ಸೇರಿ ದೇವೋದ್ಯಾನಗಳಲ್ಲಿ ವಿಹರಿಸಬೇಕೆಂದು ಕೋರುವವನು, ಶುದ್ಧಸತ್ವ ಮಯವಾದ ನನ್ನ ಮೂರ್ತಿಯನ್ನು ಧ್ಯಾನಿಸುತ್ತಿರಬೇಕು. ಈ ಧಾರಣಾ ಬಲದಿಂದ ಆತನ ಸಮೀಪಕ್ಕೆ ದೇವಸಿಯರೇ ವಿಮಾನಾರೂಢರಾಗಿ ಬರು ವರು. ಧ್ಯಾನಯೋಗದಿಂದ ನನ್ನಲ್ಲಿಯೇ ನಮ್ಮ ಮನಸ್ಸುಳ್ಳವನು, ಯಾ ವಾಗ, ಯಾವವಿಧವಾಗಿ ತನ್ನ ಬುದ್ಧಿಯಿಂದ ಸಂಕಲ್ಪಿಸುವನೋ, ಆಗಾ ಗಲೇ ಆಯಾಸಂಕಲ್ಪಾನುಸಾರವಾದ ಅಭೀಷ್ಟಗಳನ್ನು ಹೊಂದುವರು, ಸಧ್ವನಿಯಾಮಕನೂ, ಸಸ್ವತಂತ್ರನೂ ಆದ ನನ್ನನ್ನು ಧ್ಯಾನಿಸುತ್ತ. ಆಧಾರಣಾಬಲದಿಂದ ತನ್ನ ಕ್ಲಿಯೂ ಅದೇಗುಣವನ್ನು ಹೊಂದಿದವನಿಗೆ ಯಾವುದರಿಂದಲೂ ವಿಪತ್ತು ಸಂಭವಿಸದು.ಮತ್ತು ನನ್ನ ಆಜ್ಞೆಗೂ ಗತಿಗೂ ಹೇಗೆ ತಡೆಯಿಲ್ಲವೋ, ಹಾಗೆಯೇ ಅವನ ಆಜ್ಞೆಗೂ ಗತಿಗೂ ಎಲ್ಲಿಯೂ ತಡೆಯಿರದು. ನನ್ನಲ್ಲಿ ದೃಢಭಕ್ತಿಯಿಂದ ಶುದ್ಧ ಮನಸ್ಕನಾಗಿ ಧಾರಣಾ ಯೋಗವನ್ನು ಚೆನ್ನಾಗಿ ಬಲ್ಲಯೋಗಿಗೆ, ಆ ಭಕ್ತಿಪ್ರಭಾವದಿಂದ, ತ್ರಿಕಾ ಲಜ್ಞಾನವುಂಟಾಗುವುದು, ನನ್ನೆ ಧ್ಯಾನದಿಂದ ಶಾಂತಚಿತ್ತನಾದವನ ಶರೀರವು ಯೋಗಮಯವೆನಿಸಿರುವುದರಿಂದ, ಅದು, ಬೆಂಕಿ, ನೀರು ಮೊ ದುವುಗಳಿಂದ ಹಾನಿಯನ್ನು ಹೊಂದಲಾರದು. ಆ ದೇಹವು ಅಗ್ನಿ ಜಲಾದಿ ಗಳನ್ನೇ ಸೃಂಭಿಸುವುದು. ಅಂತಹ ಯೋಗಿಗೆ, ಜಲಜಂತುಗಳಿಗೆ ಸಮು ದ್ರವು ಹೇಗೋಹಾಗೆ, ಆ ಅಗ್ನಿ ಜಲಾದಿಗಳೇ ವಿಹಾರಸ್ಥಾನವಾಗುವುವು. ಶ್ರೀವತೃವೆಂಬ ಅಸಾಧಾರಣಚಿಹ್ನದಿಂದಲೂ, ಶಂಖಚಕ್ರಾದಿದಿವ್ಯಾಯು
ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೯
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
