ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪o ಶ್ರೀಮದ್ಭಾಗವತವು [ಅಧ್ಯಾ ೧೬. ನನ್ನ ಸಂಕಲ್ಪ ಮಾತ್ರದಿಂದಲೇ ಉಂಟಾದುವುಗಳೆಂಬುದು ವೇದವಾಕ್ಯಗಳಿಂ ದ ವ್ಯಕ್ತವಾಗುವುದು. ಉದ್ದವಾ ! ಇಂತಹ ಅನಂತವಿಭೂತಿವಿಶಿಷ್ಯನಾದ ನನ್ನನ್ನು ನೀನು ಉಪಾಸನೆ ಮಾಡಬೇಕಾದರೆ, ಮೊದಲು ದುರ್ಭಾಷೆಗಳಿಗೆ ಹೋಗದಂತೆ ವಾಕ್ಕನ್ನು ನಿಗ್ರಹಿಸಬೇಕು. ದುರಾಲೋಚನೆಗೆ ಹೋಗದಂತೆ ಮನಸ್ಸನ್ನು ನಿಗ್ರಹಿಸಬೇಕು. ದುರ್ವಿಷಯಗಳಲ್ಲಿ ಬೀಳದಂತೆ ಇಂದ್ರಿಯಗ ಳನ್ನು ನಿಗ್ರಹಿಸಬೇಕು. ಅಪಾಯಕ್ಕೆ ಪ್ರವರ್ತಿಸದಂತೆ ನಿನ್ನ ಆತ್ಮವನ್ನು ನಿ ೩ಂದ ನೀನೇ ನಿಗ್ರಹಿಸಬೇಕು. ಈ ವಿಧವಾಗಿ ನನ್ನನ್ನು ಉಪಾಸನೆಮಾಡಿದ ರೆ,ತಿರುಗಿ ನೀನು ಸಂಸಾರಮಾರ್ಗವನ್ನು ಸೇರಲಾರೆ ! ಮನಸ್ಸನ್ನೂ, ವಾಕ್ಕ ನ್ಯೂ ಚೆನ್ನಾಗಿ ನಿಗ್ರಹಿಸಲಾರದವನು,ಎಷ್ಮೆ ಬುದ್ಧಿವಂತನಾದರೂ,ಯತಿ ಯಾಗಿದ್ದರೂ, ಅವನು ಕಷ್ಟಪಟ್ಟು ಗಳಿಸಿದ ತಪಸ್ಸು, ದಾನ, ವ್ರತ ಮೊದ ಲಾದುವುಗಳೆಲ್ಲವೂ, ಹಕೀಮಣ್ಣಿನ ಮಡಕೆಯಲ್ಲಿ ತುಂಬಿದ ನೀರಿನಂತೆ ನಿಷ್ಟ ಲವಾಗಿ ಹೋಗಿಬಿಡುವುವು. ಆದುದರಿಂದ, ಮೋಕ್ಷಾರ್ಥಿಯು ನನ್ನಲ್ಲಿ ದೃಢ ಭಕ್ತಿಯುಳ್ಳವನಾಗಿ ಮನೋವಾಕ್ಷಾಣಗಳನ್ನು ನಿಗ್ರಹಿಸಿಟ್ಟರೆ, ಅವನ ಉದ್ದೇಶವು ಪೂರ್ಣ ಸಾಫಲ್ಯವನ್ನು ಹೊಂದುವುದು. ಇದು ಹದಿನಾರನೆಯ ಅಧ್ಯಾಯವು.

  • ವರ್ಣಾಶ್ರಮಸಿಯಮಗಳು, ww ಉದ್ಯವನ್ನು ತಿರುಗಿ ಕೃಷ್ಣನನ್ನು ಕುರಿತು (ಕೃಷ್ಣಾ ! ವರ್ಣಾಶ್ರ ಮಧರಗಳುಳ್ಳ ಎಲ್ಲಾ ಮನುಷ್ಯರೂ, ಅವರವರ ವರ್ಣಾಶ್ರಮಧಮ್ಮಗ ಇನ್ನು ಭಕ್ತಿಯೋಗಕ್ಕೆ ಅಂಗವಾಗಿ ನಡೆಸಬೇಕೆಂದು ಹೇಳಿದೆಯಲ್ಲವೆ ? ಓ ಪುಂಡರೀಕಾಕ್ಷಾ! ಆ ಧ್ಯಗಳನ್ನು ಯಾವವಿಧದಿಂದ ಅನುಷ್ಠಿಸಿದರೆ ಭ ಕಿಗೆ ಸಾಧಕವಾಗುವುದು ? ಈ ವಿಚಾರವನ್ನು ನನಗೆ ತಿಳಿಸಬೇಕು. ಬಹಳ ಕಾಲಕ್ಕೆ ಹಿಂದಯೇ ನೀನು ಹಂಸರೂಪಿಯಾಗಿ ಬಂದು, ಬ್ರಹ್ಮನಿಗೂ, ಸನ ಕಾದಿಗಳಿಗೂ ಆಧರಗಳನ್ನು ಪದೇತಿಸಿದ್ದರೂ, ಅದು ನಡೆದು ಬಹುಕಾಲವಾ ದುದರಿಂದ, ಈಗೀಗೆ ಮನುಷ್ಯಲೋಕದಲ್ಲಿ ಅದರ ಪ್ರಚಾರವೇ ಬಹಳ ಕ ಡಿಮೆಯಾಗುತ್ತ ಬಂದಿರುವುದು. ಈಗ ಭೂಲೋಕದಲ್ಲಿ ಆ ಧಮ್ಮ