ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಅಧ್ಯಾ. ೧೬.) . ಏಕಾದಶಸ್ಕಂಧವ. ಳೆಂದು ತೋರಿಬಂದಾಗ, ಬ್ರಾಹ್ಮಣನು, ಯಾಜನ, ಮತ್ತು ಅಧ್ಯಾಪನಕಾ ರಗಳಿಂದ ಜೀವಿಸಬಹುದು. ಅದರಲ್ಲಿಯೂ ದೋಷವು ಕಂಡುಬಂದರೆ, ಕಣ ಗಳಲ್ಲಿ ಚೆಲ್ಲಿಹೋದ ಧಾನ್ಯಗಳನ್ನು ಆಯ್ದು ತಂದು ಅವುಗಳಿಂದಲೇ ಜೀವಿಸ ಬೇಕು. ಉದ್ಯವಾ! ಇಂತಹ ಜೀವನವು ಬಹಳ ಕಷ್ಟವಲ್ಲವೆ”ಎಂದರೆ,ಬ್ರಾ ಹ್ಮಣ್ಯವೆಂಬುದೇ ಕಷ್ಟಜೀವನವು. ಬಾಹ್ಮಣಜನ್ಮವು ಲಭಿಸಿದಾಗ, ಅತ್ಯಲ್ಪ ಗಳಾದ ಐಹಿಕ ಸುಖಗಳಿಗಾಗಿ ಆಸೆಪಡಲೇಬಾರದು. ಇಲ್ಲಿ ಕಠಿನವಾದ ತಪ ಸ್ತುಗಳಿಂದ ದೇಹವನ್ನು ದಂಡಿಸಿದಾಗಲೇ, ಮುಂದೆ ದೇಹಾವಸಾನ ದಲ್ಲಿ ಮೋಕ್ಷರೂಪವಾದ ಅನಂತಸುಖವನ್ನು ಹೊಂದಬಹುದು. ಆದುದರಿಂ ದ ಗೃಹಸ್ಥಾಶ್ರಮವನ್ನು ಹಿಡಿದ ಬ್ರಾಹ್ಮಣನು, ವಿಶೇಷವಾಗಿ ತನ್ನ ದೇಹ ಸೌಖ್ಯವನ್ನ ಪೇಕ್ಷಿಸದೆ, ಭಿಕ್ಷಾಟನದಿಂದಲೋ,ಇಲ್ಲವೇ ಕಣಗಳಲ್ಲಿ ಚೆಲ್ಲಿಹೋ ದಧಾನ್ಯಗಳನ್ನು ಆಯ್ದು ತರುವುದರಿಂದಲೋ, ತನ್ನ ಜೀವನವನ್ನು ನಡೆಸುತ್ತ, ಅದರಿಂದಲೇ ತೃಪ್ತನಾಗಿ, ತನ್ನ ವರ್ಣಾಶ್ರಮಧರೆಗಳನ್ನು ಲೋಪವಿಲ್ಲ ದೆ ನಡೆಸುತ್ತ, ನನ್ನಲ್ಲಿ ನಮ್ಮ ಮನಸ್ಸುಳ್ಳವನಾಗಿದ್ದರೆ, ಅದರಿಂದ ಮುಕ್ತಿಯನ್ನು ಹೊಂದಬಹುದು. ಉದ್ಯವಾ ! ಹೀಗೆ ದೇಹಸೌಖ್ಯದಲ್ಲಿ ಯೂ, ಹಣದಲ್ಲಿಯೂ ಆಸೆಯನ್ನು ಬಿಟ್ಟು, ಸ್ವಧುವೊಂದನ್ನೇ ಹಿಡಿದು, ನನ್ನಲ್ಲಿ ಭಕ್ತಿಯುಳ್ಳವನಾಗಿರುವ ಬ್ರಾಹ್ಮಣನು, ಮೇಲೆ ಹೇಳಿದ ಭಿಕ್ಷಾದಿ ವೃತ್ತಿಗಳಿಂದ ಜೀವನಕ್ಕೆ ಸಾಲದೆ ಕಷ್ಟಪಡುತ್ತಿದ್ದಾಗ, ಅವನಿಗೆ ಯಾರು ಯಾರು ಸಹಾಯಮಾಡುವರೋ ಅಂತವರನ್ನು ನಾನು, ಹಡಗು ಸಮುದ್ರ ದಿಂದ ಹೇಗೋಹಾಗೆ ವಿಪತ್ತುಗಳಿಂದ ದಾಟಿಸುವೆನು. ಪ್ರಜೆಗಳನ್ನು ಪಾಲಿಸತಕ್ಕ ರಾಜನೂಕೂಡ, ತನ್ನ ಪ್ರಜೆಗಳನ್ನೂ, ವಿಶೇಷವಾಗಿ ಬ್ರಾಹ್ಮ ರನ್ನೂ ವ್ಯಸನದಿಂದ ತಪ್ಪಿಸುತ್ತ, ತಂದೆಯ ಮಕ್ಕಳನ್ನು ಹೇಗೋಹಾಗೆ ಪ್ರೀತಿಯಿಂದ ಕಾಪಾಡಬೇಕು. ರಾಜನು ಪ್ರಜೆಗಳನ್ನು ವಿಪತ್ತಿನಿಂದ ತಪ್ಪಿ ಸುವುದಲ್ಲದೆ,ಆನೆಯ ಸಲಗವು ಇತರಗಜಗಳನ್ನು ಕಾಪಾಡುತ್ತ ಆತ್ಮರಕ್ಷಣ ವನ್ನೂ ಮಾಡಿಕೊಳ್ಳುವಂತೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕು. ಇಂ ತಹ ಧೀರನಾದ ರಾಜನು, ಈ ಲೋಕದಲ್ಲಿ ಸಂಭವಿಸಬಹುದಾದ ಅಶುಭಗ ಬೆಲ್ಲವನ್ನೂ ದಾಟಿ, ಕೊನೆಗೆ ಸೂರತೇಜಸ್ಸುಳ್ಳ ವಿಮಾನದಿಂದ ಇಂದ್ರ