ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೭೮ ಶ್ರೀಮದ್ಭಾಗವತವು {ಅಧ್ಯಾ, ೨೦. ಸಾಧಕಗಳಾಗಲಾರವು. ಆದುದರಿಂದ ವಿವೇಕಿಯಾದವನು ನರಕವನ್ನು ಹೇಗೋಹಾಗೆ ಸ್ವರ್ಗವನ್ನೂ ಅಪೇಕ್ಷಿಸಬಾರದು. ಆದರೆ ಮನುಷ್ಯ ದೇಹವು ಇಹಪರಸುಖಗಳಿಗೆ ಸಾಧನವೆಂಬುದಕ್ಕಾಗಿ,ಆ ದೇಹಕ್ಕಾದರೂ ತಿರುಗಿ ಆಸೆ ಪಡಬಾರದು. ದೇಹದಲ್ಲಿ ಆಸೆಯನ್ನಿಡುವುದರಿಂದ ಮನುಷ್ಯನು ಮೋಹನ ಶನಾಗಿ, ಕೊನೆಗೆ ಸ್ಥಾವರಜನ್ಮವನ್ನೇ ಹೊಂದಬೇಕಾಗಿಬರುವುದು. ಆದು ದರಿಂದ ಜೀವನು ಒಮ್ಮೆ ಮನುಷ್ಯ ಶರೀರವನ್ನು ಪಡೆದಿರುವಾಗ, ಸಾಯು ವುದಕ್ಕೆ ಮೊದಲು, ತನ್ನ ದೇಹವು ದೃಢವಾಗಿರುವಾಗಲೇ, ಮರಣಶೀಲವಾ ಗಿದ್ದರೂ ಉತ್ತಮಪುರುಷಾರ್ಥಸಿದ್ದಿಗೆ ಆದೇಹವೇ ಮುಖ್ಯಸಾಧನವಂಬುದ ನ್ನು ತಿಳಿದು, ಎಚ್ಚರಿಕೆಯಿಂದ ಮೋಕ್ಷ ಪ್ರಾಪ್ತಿಗಾಗಿಯೇ ಯತ್ನಿ ಸಬೇಕು. ಅಂತವನೇ ವಿದ್ವಾಂಸನು. ಕಾಡಿನಲ್ಲಿ ವ್ಯಕ್ತಿಯು, ಒಂದು ಮರದಲ್ಲಿ ಗೂಡು ಕಟ್ಟಿಕೊಂಡು ವಾಸಮಾಡುತ್ತಿರುವಾಗ, ಸೌದೆಕಡಿಯುವವರು ಯಮ ದೂತರಂತೆ ನಿರ್ಭಯರಾಗಿ ಬಂದು,ಮರವನ್ನು ಕಡಿಯುವುದಕ್ಕೆ ಯತ್ನಿ ಸುವು ದನ್ನು ಕಂಡೊಡನೆ, ತನ್ನ ಗೂಡಿನಲ್ಲಿ ಆಸೆಯನ್ನು ಬಿಟ್ಟು, ಬೇರೊಂದು ಕಡೆಗೆ ಹೋದರಲ್ಲವೇ ಅದಕ್ಕೆ ಸುಖವುಂಟು ? ಅದರಂತೆಯೇ ಶರೀರವೆಂಬ ವೃಕ್ಷದಲ್ಲಿ, ಹೃದಯವೆಂಬ ಗೂಡಿನೊಳಗೆ ಪಕ್ಷಿಯಂತಿರುವ ಜೀವನು, ತನ್ನ ನಿವಾಸಸ್ಥಾನವಾದ ಶರೀರವು ನಶ್ವರವೆಂಬುದನ್ನು ತಿಳಿದು, ಅದರಲ್ಲಿ ಆಸೆ ಯನ್ನು ತೊರೆದಾಗಲೇ ಕ್ಷೇಮವನ್ನು ಹೊಂದುವನು. ಅಹೋರಾತ್ರಗಳೆಂಬ ಕಾಲವಿಭಾಗಗಳು ಪ್ರತಿಕ್ಷಣವೂ ಮನುಷ್ಯನ ಆಯುಸ್ಸನ್ನು ಕತ್ತರಿಸುತ್ತಿ ರುವುವು. ಇದನ್ನು ತಿಳಿದು ಮರಣಭಯದಿಂದ ನಡುಗುವವನು, ಒಡನೆಯೇ ವಿಷಯಾಸಕ್ತಿಯಿಂದ ವಿಮುಖನಾಗಿ, ಕರ ಫಲಗಳಲ್ಲಿಯೂ ಆಸೆಯನ್ನು ತೊರೆದು, ಪ್ರಕೃತಿಪುರುಷರಿಗಿಂತಲೂ ಪರನಾದ ನನ್ನಲ್ಲಿಯೇ ಮನಸ್ಸಿಟ್ಟು ನನ್ನನ್ನು ಉಪಾಸಿಸಬೇಕು. ಆಗ ಮಾತ್ರವೇ ಅವನಿಗೆ ತಿರುಗಿ ಎಂದೆಂದಿಗೂ ಮರಣಭಯವಿಲ್ಲದಂತೆ ಪ್ರಕೃತಿಸಂಬಂಧವು ಬಿಟ್ಟು ಹೋಗುವುದು. ಉದ ವಾ : ಮನುಷ್ಯ ದೇಹವೇನೋ ಸಮಸ್ತ ಫಲಸಾಧನೆಗೂ ಮೂಲವೆನಿಸಿರುವು ದು.ಇದು ಅನೇಕ ಪ್ರಯತ್ನಗಳಿಂದಲೂ ದುರ್ಲಭವೆನಿಸಿದ್ದರೂ,ದೈವಿಕವಾಗಿ ತನಗೆ ತಾನೇ ಸುಲಭವಾಗಿ ಬರತಕ್ಕದು. ಇದು ಸಂಸಾರಸಮುದ್ರವನ್ನು