ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೮೧ ಅಧ್ಯಾ. ೨೧.] ಏಕಾದಶಸ್ಕಂಧನು. ವಿಭಾಗಗಳನ್ನೊಳಗೊಂಡಿದ್ದರೂ, ಆ ವೇದಗಳೆಲ್ಲವೂ ಸಾಕಲ್ಯವಾಗಿ ಸರಾಂತರಾತ್ಮನಾದ ಪರಬ್ರಹ್ಮನನ್ನೇ ವಿಷಯೀಕರಿಸುತ್ತಿರುವೆಂದು ತಿಳಿಯ ಬೇಕು. ಹೇಗೆಂದರೆ, ಅವು ಮುಖ್ಯವಾಗಿ ಪರಬ್ರಹ್ಮನನ್ನು ಮಾತ್ರವೇ ಅಲ್ಲದೆ, ಅವನ ಗುಣಗಳನ್ನೂ, ಅವನ ವಿಭೂತಿಗಳನ್ನೂ, ಆ ಬ್ರಹ್ಮಪ್ರಾಪ್ತಿಗೆ ಉಪಾಯಗಳನ್ನೂ , ಉಪೇಯಸ್ವರೂಪವನ್ನೂ , ಉಪೇತೃಸ್ವರೂಪವನ್ನೂ ವಿವರಿಸುವುವು. ಅದರಿಂದ ಆ ವೇದವಾಕ್ಯಗಳೆಲ್ಲವೂ ಬಹ್ಮ ವಿಷಯವಾದುದೆಂ ದೇಗ್ರಾಹ್ಯವು, ಆದರೆ ಆ ವೇದಗಳ ಮುಖ್ಯಾಭಿಪ್ರಾಯಗಳು ಸುಲಭವಾಗಿ, ಎಲ್ಲರಿಗೂ ತಿಳಿಯಲಾರದು ಹಾಗೆ ವೇದಾರಗಳು ಗೂಢವಾಗಿರಬೇಕೆಂಬುದೇ ನನಗೂ ಅಭಿಮತವು. ಏಕೆಂದರೆ, ಶುದ್ಧಾಂತಃಕರಣರಾದ ಸಜ್ಜನರಿಗೆಮಾತ್ರ ಅದು ತಿಳಿಯತಕ್ಕು ದೇಹೊರತು ಅಧಿಕಾರಿಗಳಿಗಲ್ಲ. ಅನಧಿಕಾರಿಗಳು ಅದನ್ನು ತಿಳಿದುಕೊಳ್ಳುವುದರಿಂದ, ಅವರು, ಅದನ್ನೆ ಪ್ರಮಾಣವಾಗಿಟ್ಟುಕೊಂಡು ಮನಶುದ್ಧಿಯಿಲ್ಲದೆ,ಕರತ್ಯಾಗವನ್ನು ಮಾಡಿ ಕರಭಷ್ಟರಾಗುವರು. ಶಬ್ದ ಬ್ರಹ್ಮವೆನಿಸಿಕೊಂಡ ವೇದಸ್ವರೂಪವು ಸಮುದ್ರದಂತೆ ದುರವಗಾಹವಾ ಗಿಯೂ, ಅಪಾರವಾಗಿಯೂ ಇರುವುದು. ಮನಃಪ್ರಾಣಗಳಿಂದ ಸಹಕರಿ ಸಲ್ಪಟ್ಟ ವಾಗಿಂದ್ರಿಯದ ಉಚ್ಛಾರಣರೂಪವಾದುದು. ಯುಕ್ತಿಗಳಿಂದ ನಿರೂಪಿಸಲಸಾಧ್ಯವಾದುದು. ಅನಂತಶಕ್ತಿಯುಳ್ಳ ಪರಬ್ರಹ್ಮನಾದ ನನ್ನಿ೦ದಲೇ ಲೋಕಕ್ಕೆ ವಿಸ್ತರಿಸಲ್ಪಟ್ಟಿರುವುದು. ತಾವರೆದಂಟಿನಲ್ಲಿ ನೂಲೆಳ ಗಳು ಹೇಗೋಹಾಗೆ, ಶಬ್ಬವೆಂಬುದು ಪ್ರಾಣಿಗಳಲ್ಲಿ ಪ್ರಾಣವಾಯುವಿನ ಘೋಷರೂಪದಿಂದ ಅತಿಸೂಕ್ಷ್ಮವಾಗಿ ತೋರುತ್ತಿರುವುದು, ಕಿವಿಗಳೆರಡ ನ್ಯೂ ಮುಚ್ಚಿ ಕೊಂಡು ಗಮನಿಸಿದಾಗ ಆ ಪ್ರಾಣಘೋಷವು ಅವರವರಿಗೇ ವ್ಯಕ್ತವಾಗುವುದು. ಜೇಡರ ಹುಳುಗಳು, ತಮ್ಮ ಹೃದಯದಿಂದ ಮುಖದ್ರಾ ರದಮೂಲಕವಾಗಿ ನೂಲನ್ನು ಹೊರಕ್ಕೆ ಬಿಡುವಂತೆ ಮನುಷ್ಯನು ಶಬ್ಬೊ ಚಾರಣಮಾಡುವಾಗ, ಘೋಷವಿಶಿಷ್ಟವಾದ ಆ ಪ್ರಾಣವಾಯುವು, ನಾಭಿ ಯಿಂದ ಎದೆಯವರೆಗಿರುವ ರಂಧ್ರದಿಂದ, ಮನಸ್ಸಿನೊಡನೆ ಮೇಲೆ ಹೊರಟು, ಎದೆ, ಕಂಠ, ಮುಂತಾದ ಸ್ಥಾನಗಳನ್ನು ಮುಟ್ಟುತ್ತ ಬಂದು ವಾಗ್ರೂಪದಿಂದ ವ್ಯಕ್ತವಾಗುವುದು. ಹೀಗೆ ದೇಹೇಂದ್ರಿಯಾದಿಗಳನ್ನು