ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨ || ಏಕಾದಶಸ್ಕಂಧವು. ೨೪೧ ಬಂದು ಕೆಲವುದಿನವಿದ್ದು ಹೋಗುತಿದ್ದನು. ರಾಜಾ ! ಆ ಮುಕುಂದನ ಪಾದಾರವಿಂದವನ್ನು ಸೇವಿಸತಕ್ಕವರಿಗೆ ಮೃತ್ಯುಭಯವಿಲ್ಲ !'ಇದಕ್ಕಾಗಿಯೇ ದೇವಶ್ರೇಷ್ಠರಾದ ಬ್ರಹ್ಮಾದಿಗಳೂ ಅವನ ಸೇವೆಯನ್ನು ನಿಯತವಾಗಿ ಬಯಸುವರು.ಅಂತಹ ಭಗವಂತನ ಪಾದಾರವಿಂದಗಳನ್ನು ಸೇವಿಸುವುದರಲ್ಲಿ ಯಾವನು ತಾನೇ ವಿಮುಖನಾಗುವನು, ವಿವೇಕವನ್ನು ಬಲ್ಲವನಾಗಿದ್ದರೂ, ಏನೂ ತಿಳಿಯದ ಮೂಢನಾಗಿದ್ದರೂ,ಕಣ್ಣು, ಕಿವಿ, ಮುಂತಾದ ಇಂದ್ರಿಯ ಗಳುಳ್ಳವನೊಬ್ಬನೂ ಒಂದಾವರ್ತಿ ಅದನ್ನು ರುಚಿನೋಡಿದಮೇಲೆ ಎಂದೆಂ ದಿಗೂ ಬಿಡಲಾರನು, ಇನ್ನು ದೇವರ್ಷಿಯಾದ ನಾರದನ ವಿಷಯವನ್ನು ಹೇಳ ಬೇಕಾದುದೇನು?ಆ ನಾರದಮುನಿಯು,ಎಂದಿನಂತೆ ಒಮ್ಮೆ ವಸುದೇವನ ಮ ನೆಗೆ ಬಂದನು. ಆಗ ವಸುದೇವನು ಆ ಮಹರ್ಷಿಯನ್ನು ಯಥೋಚಿತವಾಗಿ ಸತ್ಕರಿಸಿ, ಸುಖಾಸನವನ್ನು ಕೊಟ್ಟು ಕುಳ್ಳಿರಿಸಿ, ನಮಸ್ಕಾರಮಾಡಿ, ಹೀ ಗೆಂದು ವಿಜ್ಞಾಪಿಸುವನು. “ಓ ಮಹಾತ್ಮಾ ! "ಪೂಣ್ಯಶ್ಲೋಕನಾದ ಭಗ ವಂತನ ಸಾನ್ನಿಧ್ಯವನ್ನು ಪಡೆಯುವುದಕ್ಕೆ ನೀವೇ ಮಾರ್ಗಭೂತರು. ತಂದೆಯ ಆಗಮನವು ಮಕ್ಕಳಿಗೆ ಹೇಗೋ ಹಾಗೆ,ನಿಮ್ಮಂತವರು ನಮ್ಮಲ್ಲಿಗೆ ಬರುವುದು, ತಾಪತ್ರಯಪೀಡಿತರಾದ ನಮ್ಮ ಕ್ಷೇಮಕ್ಕಾಗಿಯೋಹೊರತು ಬೇರೆಯಲ್ಲ. (ಪರ್ಜನ್ಯಾದಿ) ದೇವತೆಗಳು ನಡೆಸತಕ್ಕ ಕಾಠ್ಯವು, ಪ್ರಾಣಿಗಳ ಸುಖಕ್ಕೆ ಕಾರಣವೆನಿಸಿದರೂ, ಒಂದೊಂದುಸಮಯದಲ್ಲಿ ಅತಿವೃಷ್ಟಿ ಮೊದಲಾದುವುಗಳಿಂದ) ಅದೇ ದುಃಖಕಾರಣವಾಗಿಯೂ ಪರಿಣಮಿಸುವು ದುಂಟು. ಭಗವದ್ಭಕ್ತರಾದ ನಿಮ್ಮಂತವರ ವ್ಯಾಪಾರವು ಯಾವಾಗಲೂ ಸುಖಕರವಾಗಿಯೇ ಪರಿಣಮಿಸುವುದು. ಇದಲ್ಲದೆ ದೇವತೆಗಳು, ತಮ್ಮನ್ನು ಯಾರುಯಾರು ಯಾವಯಾವ ವಿಧದಿಂದ ಭಜಿಸುವರೋ, ಆಯಾ ಉಪಾ ಸನೆಗೆ ತಕ್ಕಂತೆಯೇ ಫಲವನ್ನು ತೋರಿಸುವರು. ಆ ದೇವತೆಗಳು ತೋರಿಸ ತಕ್ಕ ಅನುಗ್ರಹವು, ಛಾಯೆಯು ಬಿಂಬವನ್ನು ಅನುಸರಿಸಿರುವಂತೆ, ಪ್ರಾಣಿ ಗಳ ಕರಗಳಿಗೆ ತಕ್ಕಂತಿರುವುದು. ನಿಮ್ಮಂತಹ ಸಾಧುಗಳಾದರೋ ದೀನ ಜನರಲ್ಲಿ ನಿಷ್ಕಾರಣವಾದ ವಾತ್ಸಲ್ಯವನ್ನು ತೋರಿಸತಕ್ಕವರು. ಸಹಜದ ಯಾಳುವಾದ ನೀನು, ಈಗ ನನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಬಂದವ