ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೨೨.] ಏಕಾದಶಸ್ಕಂಧವು. ೨೫೯೧ ಶರೀರವು ಅಧಿದೈವವು. ದೇಹದೊಳಗಣ ನೇತ್ರರಂಧ್ರದಮೂಲಕವಾಗಿ ಇವು ಮೂರೂ ಒಂದನ್ನೊಂದು ಸಹಕರಿಸುವುದರಿಂದ ಜ್ಞಾನವನ್ನು ಹು ಟೈಸುವುದು. ಎಂದರೆ, ಸೂರಕಿರಣಸಹಾಯದಿಂದ ನೇತ್ರಂದ್ರಿಯ ರೂಪಕ್ಕೂ ಸಂಬಂಧವಿದ್ದಾಗಲೇ ರೂಪಗ್ರಹಣವೇ ಹೊರತು, ಇವುಗಳಲ್ಲಿ ಯಾವುದೊಂದರ ಸಹಾಯವಿಲ್ಲದಿದ್ದರೂ ತಿಳಿವಳಿಕೆಯುಂಟಾಗಲಾರದು. (ಆದರೆ ಈ ಅಧ್ಯಾತ್ಯಾದಿಗಳ ಪರಸ್ಪರಸಹಾಯದಿಂದಲೇ ರೂಪಾಯಿಗಳ ಪ್ರಕಾಶವುಂಟಾಗಬೇಕಾದರೆ, ಆತ್ಮಕ್ಕೆ ಯಾವುದರಿಂದ ಪ್ರಕಾಶವ”ಎಂದು ಕೇಳಬಹುದು. ಉದ್ಯವಾ ! ಆತ್ಮವು ಸ್ವಯಂಪ್ರಕಾಶವುಳ್ಳದಾಗಿ ಹೃದ ಯಾಕಾಶದಲ್ಲಿರುವುದು. ಏಕೆಂದರೆ, ಆತ್ಮವೆಂಬುದು ದೃಕ್ಕು ಮೊದಲಾದ ಆ ಮೂರಕ್ಕಿಂತಲೂ ಮೊದಲೆ? ಇರತಕ್ಕದು. ನೇತಾಯಿಗಳನ್ನು ಪ್ರ ಕಾಶಗೊಳಿಸುವುದಕ್ಕೂ ಆ ಆತ್ಮವೆಂಬುದು ತಾನೇ ಕಾರಣವೆನಿಸಿರುವುದು. ದೃಕ್ಕು ಮೊದಲಾದ ಇಂದ್ರಿಯಗಳು ಹೋದಮೇಲೆಯೂ ಕೂಡ, ಆತ್ಮವು ಸ್ಥಿರವಾದುದರಿಂದ, ಆ ಇಂದ್ರಿಯಗಳಿಗಿಂತಲೂ ವಿಲಕ್ಷಣವೆನಿಸಿರುವುದು ತನ್ನ ಅಸಾಧಾರಣವಾದ ಜ್ಞಾನದಿಂದ ಇತರ ವಸ್ತುಗಳಗೆ ಪ್ರಕಾಶವನ್ನು ಕೊಡತಕ್ಕುದೂ, ಅದೇ! ನೇತೇಂದ್ರಿಯವ, ರೂಪ ಸೂರಪ್ರಕಾಶಾದಿಗಳ ಅನ್ಯೂನ್ಯಸಹಾಯದಿಂದ ಕಾರ್ ಕಾರಿಯಾಗುವಂತೆಯೇ, * ಕಿವಿ, ಮೂಗು, ನಾಲಗೆ, ತ್ವಕ್ಕು, ಎಂಬ ಇತರೇಂದ್ರಿಯಗಳೂ ಕೂಡ, ಶಬ್ದ ಮೊದಲಾದ ಆಧಿಭೂತಗಳಿಂದಲ, ದಿಕ್ಕು ಮೊದಲಾದ ಅಧಿದೈವಗಳಿಂದಲೂ ಕೂಡಿ, ಕಾರೈಸಿದ್ಧಿಯನ್ನು ಹೊಂದುವವು. ಆದರೆ, ಈ ಇಂದ್ರಿಯಗಳಲ್ಲಕ್ಕೂ ಮನ ಸ್ಸಿನ ಸಹಾಯವಿದ್ದೇ ಇರಬೇಕು. ಈ ಮನಸ್ಸಿಗೂಕೂಡ ಧೈಯ ವಸ್ತುವೇ ಅಧಿಭೂತವು. ಚಂದ್ರನೇ ಆಧಿದೈವವು. ಈ ಇಂದ್ರಿಯಾದಿಗಳೆ ಲ್ಲವೂ ಅಹಂಕಾರತತ್ವದ ಸೃಷ್ಟಿಯಾಗಿರುವುದು. ದೇಹಾತ್ಮಗಳೆರಡೂ ಒಂದೇ ಎಂಬ ಅಭೇದಭ್ರಾಂತಿಯನ್ನುಂಟುಮಾಡುವುದಕ್ಕೂ ಆಅಹಂಕಾರವೇ

  • ಕಿವಿ, ಮೂಗು, ತ್ವಕ್ಕು, ನಾಲಗೆ ಎಂಬೀ ಇಂದ್ರಿಯಗಳಿಗೆ ಕ್ರಮವಾಗಿ, ದಿಕ್ಕು, ಅಶ್ವಿನೀದೇವತೆಗಳು, ವಾಯು, ವರುಣರೆಂಬವರು ಅಧಿದೈವಗಳೆಂದು ಗ್ರಾಹನ.

-- ~ -