ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ. ೨೨.] ಏಕಾದಶಸ್ಕಂಧವು ೨೫೯ ಯನ್ನೂ ನನಗೆ ತಿಳಿಸಬೇಕು. ಒಂದು ದೇಹವನ್ನು ಬಿಡುವಾಗ, ಆ ದೇಹ ದೊಡನೆ ಇಂದ್ರಿಯಗಳೂ ಬಿಟ್ಟು ಹೋಗಿ, ದೇಹಾಂತರಪ್ರಾಪ್ತಿಯಲ್ಲಿ ಇಂದ್ರಿಯಗಳೂ ಬೇರೆಯಾಗಿ ಬರುವುವೆ ? ಅಥವಾ ಮೊದಲಿನ ಇಂದ್ರಿಯ ಗಳು ಆತ್ಮದೊಡನೆ ಸೇರಿದ್ದ ಹಾಗೆಯೇ ದೇಹವು ಮಾತ್ರ ಹೊಸದಾಗಿ ಬರುವುದೆ?” ಎಂಬುದನ್ನು ತಿಳಿಸಬೇಕು. ಗೋವಿಂದಾ! ಅಲ್ಪಬುದ್ದಿಯುಳ್ಳ ವರಿಗೆ ಈ ವಿಚಾರವು ತಿಳಿಯಲಾರದು. ಲೋಕದಲ್ಲಿ ಪ್ರಾಯಕವಾಗಿ ಈ ಮರ್ಮವನ್ನು ತಿಳಿದವರೇ ಬಹಳ ವಿರಳರು. ನಿನ್ನ ಮಾಯೆಯಿಂದ ವಿದ್ವಾಂಸರೂ ವಂಚಿತರಾಗಿ ಭ್ರವಿಸುವರು ಆದುದರಿಂದ ನೀನೇ ನನಗೆ ಈ ತತ್ವವನ್ನು ನಿಶ್ಚಯಿಸಿ ತಿಳಿಸಬೇಕು” ಎಂದನು. ಅದಕ್ಕಾ ಕೃಷ್ಣನು. 4 ಉದ್ದವಾ ! ಕೇಳು! ಕರ ವಾಸನೆಯಿಂದ ಕೂಡಿದ ಮನಸ್ಸೇ ಆತ್ಮವನ್ನು ದೇಹದಿಂದ ದೇಹಕ್ಕೆ ಸೇರಿಸುವುದು. ಎಂ ದರೆ, ಮನಸ್ಸೆಂಬುದು, ಕಣ್ಣು, ಕಿವಿ, ಮೊದಲಾದ ಐದು ಜ್ಞಾನೇಂದ್ರಿಯ ಗಳೊಡನೆ ಸೇರಿಯೇ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಪ್ರವೇ ಶಿಸುವುದು. ಆತ್ಮವೆಂಬುದು ಅವುಗಳಿಗಿಂತಲೂ ಭಿನ್ನವಾಗಿದ್ದರೂ, ತಾನೂ ಅ ಮನಸ್ಸನ್ನು ಹಿಂಬಾಲಿಸಿ ಹೋಗುವುದು. ಹಾಗೆ ಒಂದುದೇ ಹದಲ್ಲಿದ್ದ ಜ್ಞಾನೇಂದ್ರಿಯಗಳೊಡಗೂಡಿಯೇ ಅತ್ಯವು ಮತ್ತೊಂದುದೇಹ ಕ್ಕೆ ಪ್ರವೇಶಿಸುವುದಾದರೆ, ಪೂಜನ್ಮ ಸ್ಮತಿಯು ತಪ್ಪಿ ಹೋಗುವುದೇಕೆ ? ಎಂದು ನೀವು ಕೇಳಬಹುದು. ಉದ್ದವಾ ! ಕರ ವಾಸನೆಗೊಳಗಾದ ಮನ ಸ್ಸು,ಹಿಂದೆ ತಾನು ಕಂಡ, ಅಧವಾ ಕೇಳಿದ ವಿಷಯಗಳನ್ನೆ ಆಗಾಗ ಚಿಂತಿ ಸುತ್ತಿದ್ದು, ಆ ವಿಷಯಗಳು ಲಭಿಸಿದಾಗ ಸಂತೋಷಿಸುವುದು. ಅವು ಕೈತಪ್ಪಿ ಹೋದಾಗ ದುಖಿಸುವದು. ಸ್ವಲ್ಪ ಕಾಲದಮೇಲೆ ಅವುಗಳ ಸ್ಮರಣೆಯನ್ನೇ ಮರೆತುಹೋಗುವುದು. ಒಂದೇದೇಹದಲ್ಲಿಯೇ ಈ ವಿಧವಾದ ವಿಸ್ಕೃತಿ ಯುಂಟಾಗುವಾಗ,ಆ ದೇಹವೇ ಹೋಗಿ ಮತ್ತೊಂದು ದೇಹವುಂಟಾದಮೇ ಲೆ, ಹಿಂದಿನ ದೇಹಸ್ಕೃತಿಯು ತಪ್ಪಿಹೋಗುವುದೊಂದಾಶ್ಚದ್ಯವೆ ! ಯಾವ ನ ಮನಸ್ಸು ವಿಷಯಾಸಕ್ತಿಯಲ್ಲಿರುವುದರಿಂದ, ಆತ್ಮವು ದೇಹಕ್ಕಿಂತಲೂ ವಿಲಕ್ಷಣವೆಂಬುದನ್ನೇ ತಿಳಿಯದಿರುವುದೋ, ಆ ದೇಹಿಗೆ ದೇಹಾವಸಾನದಲ್ಲಿ