ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೪೬ ಶ್ರೀಮದ್ಭಾಗವತವು [ಅಧ್ಯಾ, ೨೨. ಬೆಂಕಿಯ,ಅರಣಕಾಸದಲ್ಲಿ ಅಂತರ್ಗತವಾಗಿರುವಾಗ ಹೊರಕ್ಕೆ ಕಾಣಿಸದಿ ದ್ದು ಆಕಾಷ್ಟ್ರವನ್ನು ಜಿದಾಗ ವ್ಯಕ್ತವಾಗಿ ಕಾಣುವುದು ಇಷ್ಟೇ ಹೊರತು ಆ ದಾರುವಿನೊಡನೆ ಬೆಂಕಿಗೂ ಉತ್ಪತ್ತಿ ವಿನಾಶಗಳಿಲ್ಲವಲ್ಲವೆ ? ಅದರಂತೆಯೇ ಆತ್ಮವೆಂಬುದು ಬೇಹದೊಡನೆ ಸೇರಿದಂತೆ ತೋರುತ್ತಿದ್ದರೂ, ಆ ದೇಹದ ಉತ್ಪತಿವಿನಾಶಗಳಿಗೆ ಅದು ಈಡಾಗತಕ್ಕುದಲ್ಲ. ಆಶರೀರದ ಉತ್ಪತಿವಿನಾ ಶಗಳನ್ನು ಆತ್ಮನಿಗೆಂದು ತಿಳಿಯುವುದು ಕೇವಲಭಾಂತಿಯೇ ! ಉದ್ದವಾ ! ಪ್ರಾಣಿಶರೀರದಲ್ಲಿ ಕ್ಷಣಕ್ಷಣಕ್ಕೂ ವಿಕಾರಗಳುಂಟಾಗುತ್ತಿರುವುವೆಂದು ಹೇಳಿ ದನಲ್ಲವೆ? ಅವುಗಳಲ್ಲಿ ಮುಖ್ಯವಾದ ಕೆಲವನ್ನು ತಿಳಿಸುವೆನು ಕೇಳು! ಮೊದಲು ಗರ್ಭಾಧಾನವೆಂದರೆ ಪುರುಷರ ಸಂದ ಗರ್ಭಕ್ಕೆ ಪ್ರವೇಶಿಸುವುದು ಆ ಗರ್ಭ ದಲ್ಲಿ ಶಿಶುರೂಪವಾಗಿ ಬೆಳೆಯುವುದು, ಅಲ್ಲಿಂದ ಹುಟ್ಟುವುದು, ಹುಟ್ಟಿ ದಮೇಲೆ ಬಾಲ್ಯ, ಕೌಮಾರ, ಯೌವನ, ಮಧ್ಯವಯಸ್ಸು, ತುಪ್ಪ, ಸಾ ವು, ಎಂಬೀ ವಯೋಭೇದಗಳು, ಹೀಗೆ ಶರೀರಕ್ಕೆ ಒಂಭತ್ತುಬಗೆಯ ಅವಸ್ಥಾ ಭೇದಗಳುಂಟಾಗುವುವು. ಈ ವಯೋವಸೆಗಳೇ ಅಲ್ಲದೆ, ಜಿ: ವಸಿಗೆ ಇದೇಶ ರೀರಸಂಬಂಧದಿಂದ, ಶಯನ, ಆಸನ, ಭೋಜನಗಳೇ ಮೊದಲಾದ ಇನ್ನೂ ನಾನಾಬಗೆಯ ಅವಸ್ಥೆಗಳುಂಟು. ಇವೆಲ್ಲವೂ ಬದ್ಧಜೀವನಿಗೆ ಮಾತ್ರ,ಒಮ್ಮೆ ಬಂದು ತಗುಲುಕಟ್ಟುವುವು.ಮತ್ತೊಮ್ಮೆ ಬಿಟ್ಟು ಹೋಗುವುವು. ಗುಣಪರಿಣಾ ಮಾತ್ಮಕಗಳಾದ ಶಬ್ದಾದಿವಿಷಯಗಳನ್ನು ಮನಸ್ಸಿನಲ್ಲಿಟ್ಟು ಚಿಂತಿಸುತ್ತಿರುವು ದೇ ಮೇಲೆ ಹೇಳಿದ ಸಂಯೋಗವಿಯೋಗಗಳಿಗೆ ಮೂಲಕಾರಣವ್ರ, ಆತ್ಮನಿ ಗಂಟಾಗತಕ್ಕ ಶರೀರಸಂಯೋಗವೂ, ವಿಯೋಗವೂ ಅವನ ಕಣ್ಣಿಗೆ ಕಾಣತಕ್ಕುದಲ್ಲ. ಆದುದರಿಂದ ಪ್ರತಿಯೊಬ್ಬನೂ ತನ್ನ ತಂದೆಯ ಸಾವನ್ನು ನೋಡಿ ತನಗೂ ಹಾಗಯೇ ಸಾವೆಂಬುದನ್ನೂ , ತನಗೆ,ಂಟಾಗುವ ಪತ್ರಜನ ನವನ್ನು ನೋಡಿ, ತನಗೂ ಹಾಗೆಯೇ ಜನನವೆಂಬುದನ್ನೂ ಅನುಮಾನದಿಂದ ಲೇ ತಿಳಿದುಕೊಳ್ಳಬೇಕಾಗಿರುವುದು. ಒಬ್ಬೊಬ್ಬನೂ ಶರೀರಸಂಬಂಧವಿ ದ್ದಾಗ ಮೋಹಗ್ರಸ್ತನಾಗಿಯೇ ಇರುವುದರಿಂದ, ತನ್ನ ಜನನಮರಣಗಳನ್ನು ತಾನು ತಿಳಿಯಲಾರನು. ಆದರೆ, ಈ ಜನನಮರಣಗಳು ದೇಹಕ್ಕಮಾತ್ರವೇ ಹೊರತು ತನಗಲ್ಲವೆಂಬುದನ್ನು ಮಾತ್ರ ತಿಳಿದಿರಬೇಕು.ಒಂದು ಗಿಡವನ್ನು ಬೆ