ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಶ್ರೀಮದ್ಭಾಗವತರ [ಅಧ್ಯಾ, ೨೨. ವೃಕ್ಷಗಳೂ ಕದಲುವಂತೆ ಕಾಣುವುವು. ಮನುಷ್ಯನು ಗಿರಗಿರನೆ ಸುತ್ತಿದಾಗ ಅವನ ಕಣ್ಣುಗಳು ತಿರುಗುವುದರಿಂದ ಭೂಮಿಯೆಲ್ಲವೂ ಸುತ್ತುತ್ತಿರುವಂತೆ ಕಾಣುವುದು. ಹೀಗೆಯೇ ದೇಹವನ್ನೇ ಅತ್ಯವೆಂದು ತಿಳಿದವನಿಗೆ, ಆದೇಹಗು ಣಗಳೇ ಆತ್ಮನಲ್ಲಿ ತೋರುವುವು.ಓ ಯಹೂತ್ತಮಾ! ಮನಸ್ಸಿನಲ್ಲಿ ಹುಟ್ಟುವ ಕೋರಿಕೆಗಳೂ, ಸ್ವಪ್ರ ದಲ್ಲಿ ಅನುಭವಿಸಿದ ಸುಖದುಃಖಗಳೂ ಹೇಗೆ ತಾತ್ಕಾ ಲಿಕವಾಗಿದ್ದು, ಆಮೇಲೆ ಏನೂ ಇಲ್ಲದಂತಾಗುವುವೋ, ಹಾಗೆಯೇ ಆತ್ಮ ಸಿಗೆ ದೇಹಧರಗಳ ಸಂಬಂಧವೆಂಬ ಸಂಸಾರವೂ ಮಿಥೈಯೆನಿಸುವುದು. ಆಯಾಶರೀರವಿಯೋಗಗಳಲ್ಲಿ ಅವೂ ಬಿಟ್ಟು ಹೋಗುವುವು. ಶಬ್ದಾದಿವಿಷಯ ಗಳು ಸನ್ನಿಹಿತವಾಗಿಲ್ಲದಿದ್ದರೂ, ಅವುಗಳನ್ನು ಚಿಂತಿಸುತ್ತಿರುವುದರಿಂದ ಜೀವನಿಗೆ ಆ ಸಂಸಾರವು ಬಿಟ್ಟು ಹೋಗದೆ ಅನುವರ್ತಿಸಿಬರುತ್ತಲೇ ಇರು ವುದು. ಸ್ವಷ್ಟವು ನಡೆಯುತ್ತಿರುವವರೆಗೂ, ಅದರಲ್ಲಿ ಅನುಭವಕ್ಕೆ ಬರುವ ದೇಶಾಂತರಗಮನ, ಶಿರಚ್ಛೇದವೇ ಮೊದಲಾದ ಅನರ ಪರಂಪರೆಗಳು ಅನು ವರ್ತಿಸುತ್ತಲೇ ಇದ್ದು, ಆಸ್ವಪ್ನವು ನಿಂತುಹೋದಮೇಲಲ್ಲವೇ ಆ ಅನುಭವ ಗಳೂ ತಪ್ಪವುವು. ಆದುದರಿಂದ ಉದ್ಯವಾ! ವಿಷಯಚಿಂತೆಯಿರುವವರೆ ಗೂ ಸಂಸಾರವು ಬಿಟ್ಟು ಹೋಗದೆ ಹೆಚ್ಚುತ್ತಲೇ ಬರುವುದೆಂಬುದನ್ನು ನೀನೂಕೂಡ ಯೋಚಿಸಿ, ಅಸದ್ವಿಷಯಗಳನ್ನೇ ಬಯಸುತ್ತಿರುವ ಇಂದ್ರಿ ಯಗಳನ್ನು ಆಕಡೆಗೆ ಬಿಡದಂತೆ ತಡೆಬಿಡಬೇಕು. ಸನ್ನಿಹಿತವಾದ ವಿಷಯ ಗಳನ್ನನುಭವಿಸುವುದಕ್ಕೂ ಆಸೆಪಡಬಾರದು. ಒಂದಾವರ್ತಿ ಅನುಭವಿಸಿ ದರೆ ಅದರ ಚಿಂತೆಯು ಬಿಟ್ಟುಹೋಗದೆ ಅನುವರ್ತಿಸಿಬರುವುದು.ಆ ವಿಷಯ ಚಿಂತೆಯೆ? ಸಂಸಾರಾನುವೃತ್ತಿಗೆ ಕಾರಣವಾಗುವುದು. ಆತ್ಮನಲ್ಲಿ ಜನನ ರಣಾಭ್ಯವಸ್ಥೆಗಳನ್ನು ಕಲ್ಪಿಸತಕ್ಕ ಭ್ರಮವು, ಆತ್ಮವು ದೇಹಕ್ಕಿಂತಲೂ ವಿಲಕ್ಷಣವೆಂಬ ತಿಳಿವಳಿಕೆಯಿಲ್ಲದುದರಿಂದಲೇ ಉಂಟಾಗತಕ್ಕುದೆಂದು ತಿಳಿ ! ಆತ್ಮಸ್ವರೂಪವನ್ನು ಪರಿಶೀಲಿಸಿ ತಿಳಿದು ಶರೀರದಲ್ಲಿ ಅಭಿಮಾನವನ್ನು ಬಿಟ್ಟ ವನಿಗೆ ಯಾವಭಯವೂ ಇರದು. ಆದುದರಿಂದ ಉದ್ಯವಾ ! ದುರ್ಜನರು ನಿನ್ನನ್ನು ಆಕ್ಷೇಪಿಸಿದರೂ, ನಿಂದಿಸಿದರೂ, ವಂಚಿಸಿದರೂ, ದೋಷಾರೋಪ ಕಮಾಡಿದರೂ, ಹೊಡೆದರೂ, ಸೆರೆಹಿಡಿದರೂ, ನಿನ್ನ ಜೀವನವನ್ನೇ ಹೋಗ