ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9409 ಶ್ರೀಮದ್ಭಾಗವತವು [ಅಧ್ಯಾ, ೨೦ ಮೊದಲು ಹಣವನ್ನು ಸಂಪಾದಿಸುವುದೇ ಎಷ್ಟೋ ಕಷ್ಯವು ! ಸಂಪಾ ದಿಸಿದ ಹಣವನ್ನು ಬಡ್ಡಿಗೆ ಕೊಟ್ಟು ವೃದ್ಧಿಗೊಳಿಸುವುದು ಮತ್ತೊಂದು ಕಷ್ಯವು ! ಅದನ್ನು ವೆಚ್ಚ ಮಾಡುವಾಗಲೂ, ನಮ್ಮಬಂದಾಗಲೂ ದುಸ್ಸಹ ವಾದ ಚಿಂತೆ ! ಅದನ್ನು ಕಾಪಾಡುವಾಗ ಅಹೋರಾತ್ರವೂ ಭಯದಿಂದ ಕಳವಳಿಸಬೇಕು ಅದನ್ನು ತನ್ನ ಭೋಗಕ್ಕಾಗಿ ಉಪಯೋಗಿಸುವಾ ಗಲೂ ಅದನ್ನು ಕೈಬಿಡಲಾರದ ಸಂಕಟವು ಅಪರಿಮಿತವಾಗಿರುವುದು. ಇದ್ದ ಹಣವು ನಷ್ಟವಾದರಂತೂ ವ್ಯಸನದಿಂದ ಹುಚ್ಚು ಹಿಡಿದಂತಾಗಿ, ಕೊನೆಗೆ ಆ ದುಃಖದಿಂದಲೇ ಸಾವೂ ಸಂಭವಿಸಬಹುದು. ಇದಲ್ಲದೆ ಹಣವನ್ನು ಸಂಪಾದಿಸುವಾಗ ಎಷ್ಟೋ ಪಾಪಕೃತ್ಯಗಳನ್ನು ಮಾಡಿ ಅದನ್ನು ಸಂಗ್ರ ಹಿಸಬೇಕಾಗುವುದು. ಈ ಧನಸಂಪಾದನೆಗಾಗಿ, ಕಳವು, ದೋಹ, ಸುಳ್ಳು ದಂಭ, ಕಾಮ, ಕ್ರೋಧಗಳೆಂಬ ಆರುಬಗೆಯ ಪಾಪಕೃತ್ಯಗಳಲ್ಲಿಯೂ ಪ್ರವ ರ್ತಿಸಬೇಕು. ಹಣವನ್ನು ಸಂಪಾದಿಸಿದಮೇಲೆ, ಗತ್ವ, ಮದ, ದೇಹಾನುಬಂ ಥಿಗಳಲ್ಲಿಯೂ ಭೇದಬುದ್ಧಿ, ನಿಷ್ಕಾರಣದೋಷ, ಎಲ್ಲರಲ್ಲಿಯೂ ಅಪನಂಬಿಕೆ, ಕಲಹ,ಸೀ ದೂತ ಮದ್ಯಪಾನಗಳೆಂಬ ದುರ್ವ್ಯಸನಗಳಲ್ಲಿ ಆಸಕ್ತಿ,ಈ ಒಂ ಭತ್ತುಬಗೆಯ ದುರ್ಗುಣಗಳೂ ತಲೆದೋರವವು. ಈ ಹದಿನೈದುಬಗೆಯ ಅನರಗಳಿಗೂ ಆಧ್ಯವೇ ಮೂಲವಾದುದರಿಂದ, ಶ್ರೇಯಃಕಾಂಕ್ಷಿಯಾದವನು ಅದರ ಆಸೆಯನ್ನೆ ದೂರಮಾಡಬೇಕು. ಈ ಧನದ ವಿಷಯದಲ್ಲಿ ಇಪ್ಪತ್ತು ಕವಡೆಗಳಷ್ಟು (ಎಂದರೆ ಒಂದು ಕಾಸಿನಷ್ಟು ಕಡಿಮೆಯಾದರೂ, ತನ್ನ ಸುಖ ದುಃಖಗಳಲ್ಲಿ ಸಮಭಾಗಿಗಳಾಗಿಯೂ, ತನ್ನಲ್ಲಿ ವಿಶೇಷಪ್ರೇಮವುಳ್ಳವರಾಗಿ ಯೂ ಇದ್ದ ಅಣ್ಣತಮ್ಮಂದಿರು, ಹೆಂಡಿರು, ಮಕ್ಕಳು, ತಂದೆತಾಯಿಗಳು, ಆ ಹೃಮಿತ್ರರು,ಮೊದಲಾಗಿ ಸ್ವಜನವೆಲ್ಲವೂ ಪೂರೈಪ್ರೇಮವನ್ನು ಬಿಟ್ಟು ವೈ ರಿಗಳಾಗುವರು.ಅತ್ಯಲ್ಪವಾದಹಣಕ್ಕಾಗಿ ಪ್ರಿಯಬಂಧುಗಳೆಲ್ಲರೂ ಮಹಾದ್ದೇ ಹವನ್ನಿಟ್ಟು ಕೊಲೆಮಾಡುವುದಕ್ಕೂ ಯತ್ನಿ ಸುವರು.ಆಥವಾ ತಮ್ಮ ಪ್ರಾಣ ವನ್ನಾದರೂ ಕಳೆದುಕೊಳ್ಳುವರು. ದೇವತೆಗಳೂ ಆಸೆಪಡತಕ್ಕ ಮನುಷ್ಯ ಜನ್ಮವನ್ನು ಪಡೆದು, ಅದರಲ್ಲಿಯೂ ಉತ್ತಮವಾದ ಬ್ರಾಹ್ಮಣಜನ್ಮದಲ್ಲಿ ಹು ಟಿರುವಾಗಲೂ,ಯಾವನು ಅದರಿಂದ ತಾನು ಪಡೆಯಬಹುದಾದ ಉತ್ತಮ