ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೦೫ ಅಧ್ಯಾ. ೨೭.] ಏಕಾದಶಸ್ಕಂಧವು. ಅವನ ದಂಡವನ್ನು ಕಿತ್ತುಕೊಂಡರು! ಕೆಲವರು ಅವನ ಕೈಯಲ್ಲಿದ್ದ ಕ ಮಂಡಲುವನ್ನು ಕಿತ್ತು ಬಿಸಾಡಿದರು ! ಮತ್ತೆ ಕೆಲವರು ಅವನ ಕೃಷ್ಣಾಜಿನ | ವನ್ನೂ ,ಕೆಲವರು 'ಅವನ ಜಪಮಣಿಯನ್ನೂ ,ಕೆಲವರು ಅವನ ಕಂಥೆಯನ್ನೂ ಕೆಲವರು ನಾರುಮಡಿಯನ್ನೂ ಬಲಾತ್ಕಾರದಿಂದ ಕಿತ್ತುಕೊಂಡರು. ಹೀಗೆ ಕಿತ್ತುಕೊಂಡ ವಸ್ತುಗಳನ್ನು ಹಿಂತಿರುಗಿ ಕೊಡುವುದಾಗಿ ಆಸೆ ತೋರಿ ಸಿ, ಅವನನ್ನು ಕರೆದು, ಅವನು ಸಮೀಪಕ್ಕೆ ಬಂದಾಗ ವಂಚಿಸುತ್ತಿದ್ದರು. ಅವನು ಭಿಕ್ಷೆಯೆತ್ತಿತಂದ ಅನ್ನವನ್ನು ನದೀತೀರದಲ್ಲಿ ಕುಳಿತು ಭುಜಿಸುವಕಾ ಲಕ್ಕೆ ಸರಿಯಾಗಿ, ಕೆಲವು ಪಾಪಿಷರು ಬಂದು, ಆ ಅನ್ನ ದಮೇಲೆ ಮೂತ್ರ ವನ್ನು ಸುರಿದು, ಅವನ ತಲೆಯಮೇಲೆ ಎಂಜಲುಗುಳಿ ಹೋಗುತಿದ್ದರು. ಅವ ನು ಮಾತಾಡದೆ ಮೌನವ್ರತದಿಂದಿರುವಾಗ, ಕೆಲವು ದುಷ್ಯರು ಬಲಾತ್ಕಾರ ದಿಂದ ಮಾತಾಡಿಸುವರು. ಮಾತಾಡದಿದ್ದರೆ ತಲೆಯಮೇಲೆ ಹೊಡೆಯುವ ರು. ಕೆಲವರು ಇದೋ ! ಇವನು ಕಳ್ಳನೆಂದು ಹೇಳಿ ಅವನನ್ನು ಬೆದ ರಿಸುವರು. ಕೆಲವರು ಹಗ್ಗಗಳಿಂದ ಅವನ ಕೈಕಾಲುಗಳನ್ನು ಬಿಗಿದುಕಟ್ಟೆ” (ಇವನನ್ನು ಕೊಲ್ಲಂ ! ಬಡಿಯಿರಿ”ಎಂದು ಕೂಗುವರು.ಕೆಲವರು 'ಅವನಮುಂ ದೆ ಗುಂಪುಗೂಡಿ, ಎಲಾ ! ಈತನು ಈಗ ದೊಡ್ಡಧಾರಿ ಕನಂತೆ ವೇಷವ ನ್ನು ಹಾಕಿರುವನು. ಇವನನ್ನು ನಂಬಿದರೆ ಮೋಸವೇ ! ತನ್ನ ಧನವೆಲ್ಲವೂ ನಷ್ಟವಾಗಿ, ತನ್ನ ಸ್ವಜನರೂ ಕೈಬಿಟ್ಟುದರಿಂದ, ಬದುಕುವುದಕ್ಕೆ ದಾರಿಯಿ ಲ್ಲದೆ, ಇವನು ಈ ಕಪಟವೇಷವನ್ನು ತೋರಿಸುವನು” ಎಂದು ಅವಾಚ್ಯವಾ ಗಿ ಬೈದು ಅವಮಾನಿಸುವರು. ಮತ್ತೆ ಕೆಲವರು ಅವನನ್ನು ನೋಡಿ ಅಬ್ಬಾ! ಇವನ ಬಲವೆಷ್ಟು ನೋಡಿರಿ!ಬೆಟ್ಟದಂತೆ ಅತ್ತಿತ್ತ ಕದಲದೆ ಹೇಗೆ ದೃಶ್ಯದಿಂದಿ ರುವನು ! ಏನೋ ಕಪಟಸಾಧನೆಗಾಗಿ ಮೌನವೆಂಬ ನೆವದಿಂದ ಬಕದಂತೆ ಹೊಂಚುಹಾಕುತ್ತ, ಹೀಗೆಯೇ ತನ್ನ ಹೊಟ್ಟೆಹೊರೆಯುತ್ತಿರುವನಲ್ಲಾ! " ಎಂದು ಪರಿಹಾಸ್ಯಮಾಡಿ ನಗುವರು. ಕೆಲವು ನೀಚರು,ಅವನಕಡೆಗೆ ಅಪಾನ ವಾಯುವನ್ನು ಬಿಡುವರು,ಕಲವರು ಅವನ ಕೊರಳಿಗೆ ಹಗ್ಗವನ್ನು ಕಟ್ಟಿ ಕಪಿ ಗಳನ್ನಾಡಿಸುವಂತೆ ಅಡಿಸುವರು. ಆ ಬ್ರಾಹ್ಮಣನಾದರೋ ಹೀಗೆ ಆಗಾಗ ಇತರರಿಂದ ತನಗಾಗುವ ಹಿಂಸೆಗಳನ್ನಾಗಲಿ, ದೈವಿಕಗಳಾದ ಶೀತೋಷ್ಣಾದಿ