ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೧೦ ಶ್ರೀಮದ್ಭಾಗವತವು [ಅಧ್ಯಾ, ೨೩. ರವುಳ್ಳವುಗಳಿಗೇ ಆ ಸುಖದುಃಖಾದಿಗಳನ್ನು ಹೇಳಬಹುದೇಹೊರತು, ನಿರ್ವಿ ಕಾರನಾದ ಪರಮಾತ್ಮನಿಗೆ ಅವುಗಳ ಸಂಬಂಧವನ್ನೂ ಹೇಳುವುದಕ್ಕಿಲ್ಲ. ಇದಲ್ಲದೆ ಪರಮಪುರುಷನಿಗೆ ಪ್ರಕೃತಿಪುರುಷರೆಂಬಿವೆರಡೂ ಶರೀರವೆನಿಸಿರು ವುವು. ಅವುಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಬಾಧೆಯುಂಟಾಯಿತೆಂದರೆ, ತನ್ನ ಶರೀರವನ್ನು ತನ್ನ ಶರೀರದಿಂದಲೇ ನೋಯಿಸಿಕೊಂಡಂತಾಗುವುದಲ್ಲವೆ? ಒಬ್ಬ ಮನುಷ್ಯನ ದೇಹದಲ್ಲಿ ಒಂದವಯವದಿಂದ ಮತ್ತೊಂದವಯವಕ್ಕೆ ಪೆಟ್ಟು ತಗುಲಿದಾಗ, ಅವನು ಯಾವುದರಮೇಲೆ ಕೋಪಿಸಿಕೊಳ್ಳಬಹುದು? ತನ್ನನ್ನೇ ತಾನು ಕೋಪಿಸಿಕೊಳ್ಳಬೇಕು! ತನ್ನನ್ನೇ ತಾನು ನೋಯಿಸಿಕೊಂ ಡು, ಅದಕ್ಕಾಗಿ ತನ್ನ ಮೇಲೆಯೇ ಕೋಪಿಸುವವರು ಹುಚ್ಚರಲ್ಲವೆ? ಆದುದ ರಿಂದ ಅಂತರಾತ್ಮನಾದ ಪರಮಪುರುಷನನ್ನಾದರೂ ಸುಖದುಃಖಕಾರಣನೆಂ ದು ಹೇಳುವುದು ಯುಕ್ತವಲ್ಲ”ನಿರ್ವಿಕಾರನಾದ ಪರಮಪುರುಷನಿಗೆ ಸುಖದುಃ ಖ ಕಾರಣತ್ವವನ್ನು ಹೇಳದಿದ್ದರೆ ಹೋಗಲಿ ! ದೇಹಸಂಬಂಧದಿಂದ ವಿಕಾರಿ ಯಾದ ಪ್ರತ್ಯಗಾತ್ಮನೇ ಅವುಗಳಿಗೆ ಹೇತುವೆಂದು ತಿಳಿಯಬಾರದೆ? ಎಂದರೆ, ಆಗ ವಿಕಾರಾಶ್ರಯತ್ನವು ದೇಹಿಗೆ ಸಹಜವೇ ಆಯಿತು. ಹೀಗೆ ತನಗೆ ಸ್ವಭಾ ವಪ್ರಯುಕ್ತವಾದ ವಿಕಾರಗಳಿಗಾಗಿ ಮತ್ತೊಬ್ಬರನ್ನು ಕಾರಣವಾಗಿ ತಿಳಿದು ಪರಿತಪಿಸುವುದೇಕೆ ? ಇದರಮೇಲೆ ಆತ್ಮಕ್ಕಿಂತಲೂ ಬೇರೆ ಯಾವುದಕ್ಕೂ ಕಾರಣತ್ವವನ್ನು ಹೇಳದೆ, ಕೇವಲಪ್ರತ್ಯಗಾತ್ಮವೇ.ಸುಖದುಃಖಕಾರಣವೆಂ ದೂ, ಆ ಸುಖದುಃಖಗಳನ್ನನುಭವಿಸತಕ್ಕದೆಂದೂ ಹೇಳುವಪಕ್ಷದಲ್ಲಿ, ಅದು ಮೊದಲೇ ಸುಳ್ಳಾಗುವುದು. ಕೇವಲಜ್ಞಾನಾನಂದೈಕರಸನಾಗಿಯೂ, ನಿ ರ್ವಿಕಾರನಾಗಿಯೂ ಇರುವ ಶುದ್ಧಾತ್ಮಸ್ವರೂಪಕ್ಕೆ ಸುಖದುಃಖಾದಿವಿಕಾ ರಗಳೇ ಅಸಂಭವವು, ಜನ್ಯಾ ದಿಸ್ಥಾನಗಳಲ್ಲಿರುವ ಸೂತ್ಯಾದಿಗ್ರಹಗಳನ್ನು ಸುಖದುಃಖಾರಣಗಳೆಂದು ತಿಳಿಯಬಾರದೆ ? ಎಂದರೆ, ಆತ್ಮನಿಗೆ ಅವುಗಳ ಸಂಬಂಧವೆಲ್ಲಿಯದು ? ಜನ್ಮವೆಂಬುದು ಶರೀರಕ್ಕೇ ಹೊರತು ಆತ್ಮನಿಗಲ್ಲ. ಹೀಗೆ ಆತ್ಮನಿಗೆ ಜನ್ಮವೇ ಇಲ್ಲದಿರುವಾಗ, ಗ್ರಹಗತಿಯನ್ನೆಣಿಸುವುದು ಹೇಗೆ? ಜನ್ಮಾಶ್ರಯವಾದ ದೇಹಕ್ಕೇಗ್ರಹಗಳು ಗತಿಭೇದದಿಂದ ಸುಖದುಃಖಕಾರ ಣಗಳೆಂದು ತಿಳಿಯಬಾರದೆ?ಎಂದರೆ, ಆಗಲೂ ಅದರಿಂದ ಆತ್ಮನಿಗೇನು? ಗ್ರ