ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೧ ಅಧ್ಯಾ, ೨೩.] ಏಕಾದಶಸ್ಮಂಥವು. ಇತರಭೂತಗಳಿಂದ ತನಗೆ ಎಷ್ಮೆ ಉಪದ್ರವವುಂಟಾದರೂ ಅವುಗಳಿಗಾಗಿ ಸ್ವಲ್ಪವೂ ಭಯಪಡಲಾರನು. ಆಹಾ ! ನಿಜಾಂಶವು ಹೀಗಿರುವಾಗಲೂ ಮೂ ಢನಾದ ನಾನು, ಮೊದಲೇ ಅದನ್ನು ಪಾಲೋಚಿಸದೆ ಮೋಸಹೋದೆ ನಲ್ಲಾ ! . ಇನ್ನು ಮೇಲಾದರೂ ನಾನು, ಸುಖದುಃಖಕಾರಣ ನಿಶ್ಚಯ ಪೂರಕವಾಗಿ ಪೂರೈಕರಾದ ವಿದ್ವಾಂಸರು ಪರಿಗ್ರಹಿಸಿರುವ ಪರಮಾತ್ಮ ನಿಷ್ಠೆಯನ್ನೇ ಹಿಡಿದು, ಆ ಭಗವಂತನ ಪಾದಸೇವೆಯಿಂದ ದುರಂತವಾದ ಸಂಸಾರವೆಂಬ ತಮಸ್ಸನ್ನು ದಾಟುವೆನು” ಎಂದು ನಿಶ್ಚಯಿಸಿಕೊಂಡನು. ಹೀಗೆ ಆ ಬ್ರಾಹ್ಮಣನು, ತನ್ನ ಧನವೆಲ್ಲವನ್ನೂ ಕಳೆದುಕೊಂಡಮೇಲೆ, ತನ್ನ ಸ್ಥಿತಿಗಾಗಿ ಪಶ್ಚಾತಾಪಪಡುತ್ತ, ಅರ್ಥಕಾಮಗಳಲ್ಲಿ ನಿರೋದವನ್ನು ಹೊಂದಿ, ಆಗಲೇ ತನ್ನ ಗ್ರಾಮವನ್ನು ಬಿಟ್ಟು ಹೊರಟು, ಭೂಸಂಚಾರ ವನ್ನು ಮಾಡುತ್ತ, ಅಲ್ಲಲ್ಲಿ ದುಷ್ಟರು ತನ್ನನ್ನು ನಾನಾವಿಧವಾಗಿ ನಿಂದಿಸಿ ದರೂ, ಭಾಧಿಸಿದರೂ, ಅವಮಾನಪಡಿಸಿದರೂ ತನ್ನ ಸ್ವಭರದಿಂದ ಸಲ್ಪ ಮಾತ್ರವೂ ಚಲಿಸದೆ, ಹಿಂದೆ ಹೇಳಿದ ಗಾಥೆಯನ್ನು ಹೇಳಿದನು. ಆದುದರಿಂದ ಉದ್ಯವಾ! ಪುರುಷನಿಗೆ ಮನಸ್ಸಿನಲ್ಲಿ ದೇಹವೇ ಆತ್ಮವೆಂದೂ, ತಾನೇ ಸ್ವತಂತ್ರನೆಂದೂ ಹುಟ್ಟುವ ಅಭಿಮಾನಗಳೇ ಅವನವನ ಸುಖದುಃಖಗಳಿಗೆ ಮೂಲವೇ ಹೊರತು, ಮತ್ತೊಬ್ಬರನ್ನು ಸುಖದುಃಖಗಳಿಗೆ ಕಾರಣವೆಂದು ತಿಳಿಯಬಾರದು. ಮುಖ್ಯವಾಗಿ ದೇಹಾತ್ಮಭ್ರಮವುಳ್ಳ ಮನಸ್ಸೇ ಮನುಷ್ಯ ನಿಗೆ ಸುಖದುಃಖಕಾರಣವು. ಈ ಸುಖದುಃಖಗಳಿಗೆ ಅವಕಾಶವನ್ನು ಕೊಡು ವುದರಿಂದ ಬೇರೆಯವರಲ್ಲಿ ಮಿತ್ರರೆಂದೂ, ಶತ್ರುಗಳೆಂದೂ, ಉದಾಸೀನ ರೆಂದೂ ಭೇದಬುದ್ಧಿಯು ಹುಟ್ಟುವುದು, ಈ ಭೇದಬುದ್ಧಿಯೇ ಸಂಸಾರಕ್ಕೆ ಮೂಲವು. ಆದುದರಿಂದ ಉದ್ಯವಾ! ನೀನೂಕೂಡ, ಇದುಮೊದಲು, ಆಯಾಮನುಷ್ಯನ ಸುಖದುಃಖಗಳಿಗೆ ಅವನವನ ಮನಸ್ಸೇ ಕಾರಣವೆಂಬ ತತ್ವವನ್ನು ತಿಳಿದು, ನಿನ್ನ ವಿವೇಕಬುದ್ಧಿಯಿಂದ ಆ ಮನಸ್ಸನ್ನು ನಿಗ್ರಹಿಸಿ, ಆ ಬುದ್ಧಿಯನ್ನು ನನ್ನಲ್ಲಿಯೇ ದೃಢವಾಗಿ ನಿಲ್ಲಿಸಿಡು ! ಶಾಸ್ತ್ರಗಳೊಳಗೆಲ್ಲಾ ಮುಖ್ಯವಾಗಿ ಪ್ರತಿಪಾದಿಸಲ್ಪಡುವ ಯೋಗಗಳ ಸಾರವೆಲ್ಲವೂ ಇಷ್ಟೆ! ನನ್ನ (ಪರಮಾತ್ಮನಲ್ಲಿ) ಸ್ಥಿರಬುದ್ಧಿಯನ್ನಿಟ್ಟು, ಆ ಬುದ್ಧಿಯಿಂದ ಮನಸ್ಸಿನ