ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೨೪.] ಏಕಾದಶಸ್ಕಂಧರ, ೨೬೧ ಮತ್ತು ಫಲ (ಪುರುಷನು) ಎಂಬಿವೆರಡೂ ವಿಶೇಷಣಭೂತಗಳಾಗಿ ಎಂದರೆ, ಶರೀರಗಳಾಗಿದ್ದುವು. ಆ ಎರಡುವಿಶೇಷಣಗಳಲ್ಲಿ, ಮಾಯೆಯಂಬ ಪ್ರಕೃತಿ ರೂಪದಿಂದ,ಎರಡು ಬಗೆಯೆನಿಸಿರುವುದು. *ಫಲವೆಂದು ಹೇಳಿಸಿಕೊಳ್ಳುವ ಎರಡನೆಯ ವಿಶೇಷಣವೇ ಪುರುಷನು : ಈ ಪುರುಷನಿಗೆ ಪ್ರತ್ಯಗಾತ್ಮನೆಂದೂ ಹೆಸರು. • ಸೃಷ್ಟಿಲಯಕ್ರಮಗಳು. ww ಪ್ರಕೃತಿಯಲ್ಲಿ ಸತ್ವ, ರಜಸ್ಸು, ತಮಸ್ಸು ಗಳೆಂಬ ಮೂರುಗು ಣಗಳುಂಟು. ನಾನು ನನ್ನ ಆರಾಧನೆಗೆ ಬೇಕಾದ ದೇಹೇಂದ್ರಿಯಾಗಿ ಗಳನ್ನು ಜೀವನಿಗೆ ಕೊಟ್ಟು, ಆ ಮೂಲಕವಾಗಿ ಅವನನ್ನು ಅನುಗ್ರಹಿ ಸಬೇಕೆಂಬ ಕೋರಿಕೆಯಿಂದ, ಪ್ರಕೃತಿಯಲ್ಲಿ ಸಾಮ್ಯಾವಸ್ಥೆಯಿಂದಿದ್ದ ಆ ಸತ್ಕಾರಿಗುಣಗಳನ್ನು ಕಲಗಿಸಿದಾಗ, ಅದರಿಂದ ಮಹತ್ತೆಂಬ ತತ್ವ, ವ್ರ ಹುಟ್ಟಿತು.ಇದು ಸೂತ್ರವೆಂದೂ ಕರೆಯಲ್ಪಡುವುದು. ಏಕೆಂದರೆ, ಅನೇಕ ರತ್ನಗಳನ್ನು ತನ್ನಲ್ಲಿ ಧರಿಸಿರುವ ಸೂತ್ರದಂತೆ, ಆ ಮಹತ್ತತ್ವವು, ಪ್ರಾಪಂ ಚಿಕಗಳಾದ ಅನೇಕಕಾರಿಗಳಿಗೆ ಮೂಲಾಧಾರವೆನಿಸಿರುವುದು.ಆ ಮಹತ್ವ ವು ವಿಕಾರವನ್ನು ಹೊಂದುತ್ತಬಂತೋ,ಅದರಿಂದ ಅಹಂಕಾರತತ್ವವು ಜನಿಸಿತು. ಈ ಅಹಂಕಾರವೇ ಪುರುಷನಿಗೆ ದೇಹಾತೃಭ ಮಾದಿಗಳಿಂದ ಮೋಹವ ನುಂಟುಮಾಡತಕ್ಕದು. ಈ ಅಹಂಕಾರತತ್ವವು ವೈ ಕಾರಿಕ, ತೈಜಸ, ತಾಮಸಗಳೆಂಬ ಮೂರು ವಿಭಾಗಗಳನ್ನೊಳಗೊಂಡಿರುವುದು. ಈ ಮೂರು ಬಗೆಯುಳ್ಳ ಅಹಂಕಾರವೇ ಶಬ್ದಾದಿತನ್ಮಾತ್ರಗಳಿಗೂ, ಕಣ್ಣು ಮೊದಲಾದ ಇಂದ್ರಿಯಗಳಿಗೂ, ಮನಸ್ಸಿಗೂ ಕಾರಣವಾಗಿ, ಚೇತನಾಚೇತನರ ಯವೆನಿಸಿರುವುದು (ಎಳ್ಳಿನಲ್ಲಿ ಎಣ್ಣೆಯು ಹೇಗೋಹಾಗೆ, ಚಿತ್ತು ಅಚೇತನ ಗಳಲ್ಲಿ ಅಂತರ್ಗತವಾಗಿಯೇ ಕಾಣಿಸುವುದರಿಂದ, ಅಹಂಕಾರವು ಚೇತ

  • ಪ್ರಾಪಂಚಿಕವಾದ ವಿಚಿತ್ರಕಾರಗಳನ್ನುಂಟುಮಾಡುವುದರಿಂದ ಪ್ರಕೃತಿಗೆ ಮಾಯೆಯೆಂದು ಹೆಸರು. ಜೀವನು ಜ್ಞಾನಾತ್ಮಕವಾದ ಆನಂದವೇ ಸ್ವರೂಪತಳ್ಳವ ನಾದುದರಿಂದಲೂ, ಆ ಆನಂದವೇ ಶರಣಾರ ಎನಿಸಿಕೊಳ್ಳುವುದರಿಂದಲೂ ಫಲ ಜನಿಸುವನು.

165 B