ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೬ .] ಏಕಾದಶಸ್ಕಂಧನು. ೨೩೨ ಲಂಬಿಸುವನೋ, ಅವನು ನಿತ್ಯಾನಂದಮಯನಾಗಿಯೂ, ಜೀವಾಂತರಾಮಿ ಯಾಗಿಯೂ ಇರುವ ನನ್ನನ್ನು ಹೊಂದುವನು. ಯಾವನು, ಆತ್ಮ ಪರಮಾ ತೃಸ್ವರೂಪವಿವೇಚನೆಯಿಂದ ತ್ರಿಗುಣಾತ್ಮಕವಾದ ಪ್ರಕೃತಿಯ ಕಾರ್ ಭೂತಗಳೆನಿಸಿಕೊಂಡ ದೇವಮನುಷ್ಯಾದಿ ಶರೀರಗಳಲ್ಲಿ ನಾನು ನನ್ನ "ದೆಂಬ ಅಹಂಕಾರಮಮಕಾರಗಳನ್ನು ನೀಗುವನೋ, ಅವನು ನಿಷಿದ್ಧಗಳಲ್ಲದ ಶಬ್ಬಾ ಡಿವಿಷಯಗಳನ್ನ ನುಭವಿಸುತ್ತಿದ್ದರೂ, ದೇಹಾನುಬಂಧಿಗಳಲ್ಲಿ ತನ್ನ ವರೆಂಬ ಅಭಿಮಾನವನ್ನಿಟ್ಟಿದ್ದರೂ, ಆ ವಸ್ತುಗಳಿಂದಾಗಲಿ, ಗುಣಗಳಿಂದಾಗಲಿ ಬಂಧಿಸಲ್ಪಡಲಾರನು. ಮುಖ್ಯವಾಗಿ ಇಂತವನು ಶಿಶೋದರಪರಾಯಣ ರಾದ ಅಸಜ್ಜನರೊಡನೆ ಸಹವಾಸವಿಲ್ಲದಿರಬೇಕು. ಅಂತವರನ್ನು ಅನುಸರಿ ಸುವವನು, ಕುರುಡನ ಕೈಯನ್ನು ಹಿಡಿದು ನಡೆಯುವ ಕುರುಡನಂತೆ, ಎಂದಾ ದರೂ ಒಮ್ಮೆ ಆಂಧತಮಸ್ಸಿನಲ್ಲಿ ಬಿಳುವುದೇ ನಿಶ್ಚಯವು. ಇದಕ್ಕೊಂದು ನಿದರ್ಶನವನ್ನು ಹೇಳುವೆನು ಕೇಳು. ಪೂರೈಕಾಲದಲ್ಲಿ ಪುರೂರವನೆಂಬ ರಾ ಜನು ದೊಡ್ಡ ಚಕ್ರವರ್ತಿಯೆನಿಸಿಕೊಂಡು, ಅಪಾರವಾದ ಕೀರ್ತಿಯನ್ನು " ಸಂಪಾದಿಸಿದ್ದನು. ಅಂತವನೂ ಕೂಡ, ಊರೂಕಿಯಲ್ಲಿ ಮೋಹಾಕುಲನಾ ಗಿದ್ದು, ಅವಳ ಪಿಯೋಗಕಾಲದಲ್ಲಿ ಸಹಿಸಲಾರದ ದುಃಖದಿಂದ ವಿವೇಕ ಹೀನನಾಗಿದ್ದನು. ಈ ರಾಜನು ಆ ವೇಶೈಯೊಡನೆ ರಮಿಸುತ್ತಿದ್ದಾಗ, ಅವಳ ಮೇಲಿನ ಮೋಹದಿಂದ, ಹಗಲುರಾತ್ರಿಗಳನ್ನೇ ತಿಳಿಯದೆ ತುಚ್ಛಭೋಗರ ಇಲ್ಲಿ ಮೈಮರೆತು, ಅನೇಕ ವರ್ಷಗಳವರೆಗೆ ತೃಪ್ತಿಯಿಲ್ಲದೆ ವಿಷಯಸುಖದ ಲ್ಲಿಯೇ ಮುಳುಗಿದ್ದನು. ಹೀಗಿರುವಾಗ ಒಮ್ಮೆ ಆ ವೇಶೈಯು, ಆತನನ್ನು ವಂಚಿಸಿ ಬಿಟ್ಟುಹೋದಾಗ, ಅವಳ ವಿಯೋಗವನ್ನು ಸಹಿಸಲಾರದೆ, ಹುಚ್ಚು ಹಿಡಿದವನಂತಾಗಿ, ತನ್ನ ಮೈಮೇಲೆ ಬಟ್ಟೆಯಿಲ್ಲದಿರುವುದನ್ನೂ ತಿಳಿ ಯದೆ, ಅವಳನ್ನು ಹಿಂಬಾಲಿಸುತ್ತ ಪ್ರಿಯೆ ! ನೀನು ಎಂತಹ ಕಠಿನಕ್ಕ ದಯಳು. ನನ್ನನ್ನು ಬಿಟ್ಟು ಹೋಗಬೇಡ! ನಿಲ್ಲು!” ಎಂದು ಬುದ್ಧಿವಿಕಲ ನಾಗಿ ವಿಲಪಿಸುತ್ತ ಹೋದನು. ಹೀಗೆ ಆ ವೇಶೈಯಲ್ಲಿ ಮೋಹಪರವಶ ನಾಗಿದ್ದ ಐಲನು (ಪುರೂರವನು), ಕೊನೆಗೆ ಕುರುಕ್ಷೇತ್ರದಲ್ಲಿ ಅವಳನ್ನು ಸಂಧಿಸಿ, ಅಲ್ಲಿ ಗಂಧಾನುಗ್ರಹದಿಂದ ತನಗೆ ಲಭಿಸಿದ ಅಗ್ನಿ ಯಲ್ಲಿ ಒಂದು