ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೧F ಅಧ್ಯಾ, ೨] ಏಕಾದಶಸ್ಕಂಧವು. ಯನ್ನು ತಪ್ಪಿಸಿಕೊಳ್ಳಬೇಕಾದರೆ, ಗುರುವನ್ನೇ ದೈವವೆಂದೆಣಿಸಿ, ಅವನಿಂದ ವೇದಾಂತಜ್ಞಾನವನ್ನು ಸಂಪಾದಿಸಿ, ಅನನ್ಯ ಪ್ರಯೋಜನವಾದ ಭಕ್ತಿ ಯಿಂದ ಭಗವಂತನೇ ಸರಾತ್ಮಕವೆಂಬುದನ್ನು ತಿಳಿದು ಭಜಿಸಬೇಕು.ರಾಜಾ! ದೇಹವು ಆತ್ಮವಲ್ಲ ! ಆತ್ಮವೂ ಸ್ವತಂತ್ರವಲ್ಲ ! ಹಾಗಿದ್ದರೂ ಸ್ವಪ್ತಮ ನೋರಥಗಳೆಲ್ಲವೂ ಸ್ಥಿರವಾಗಿ ತೋರುವಂತೆ, ದೇಹವೇ ಆತ್ಮವೆಂದೂ, ಆ ತ್ಯವು ಸ್ವತಂತ್ರವೆಂದೂ ಮನಸ್ಸಿಗೆ ತೋರುವುದುಂಟು. ಹೀಗೆ ಆಯಾ ಚೇತನನ ಮನಸ್ಸನ್ನೂ, ಅನಾದಿಕರ ವಾಸನೆಯನ್ನೂ ಅನುಸರಿಸಿ ಹು ಟ್ಟುವ ಈ ದೇಹಾತ್ಮಭಮಗಳೆಲ್ಲವನ್ನೂ ನೀಗಿಸುವಂತೆ, ವಿವೇಕಿಯಾದ ವನು,ತನ್ನ ಮನಸ್ಸನ್ನು ಸ್ವಾಧೀನದಲ್ಲಿರಿಸಬೇಕು. ಈ ಮನೋನಿಗ್ರಹದಿಂದ ಲೇ ನಿರ್ಭಯವಾದ ಮೋಕ್ಷವು ಲಭಿಸುವುದು. ಹಾಗೆ ಮನಸ್ಸನ್ನು ನಿಗ್ರಹಿ ಸುವುದಕ್ಕೆ ಉಪಾಯವನ್ನೂ ತಿಳಿಸುವೆನು ಕೇಳು, ಆ ಪರಮಪುರುಷನು ಈ ಲೋಕದಲ್ಲಿ ಕೈಕೊಂಡ ಬಗೆಬಗೆಯ ಅವತಾರಗಳನ್ನೂ, ಆಯಾ ಅವತಾರ ಗಳಲ್ಲಿ ನಡೆಸಿದ ಅದ್ಭುತಕಗಳನ್ನೂ; ಯಾವಾಗಲೂ ಕಿವಿಯಿಂದ ಕೇಳು ತಲೂ, ಬಾಯಿಂದ ಹಾಡುತ್ತಲೂ ಇರಬೇಕು. ಅವನ ನಾಮಗಳು ಸಮ ಸ್ತಲೋಕಕ್ಕೂ ಮಂಗಳಕರಗಳು. ದೇಹಾಭಿಮಾನವನ್ನೂ, ಲಜ್ಜೆಯನ್ನೂ , ಭಯವನ್ನೂ ಬಿಟ್ಟು, ಆ ಭಗವಂತನ ನಾಮಗಳನ್ನೂ, ಚರಿತ್ರಗಳನ್ನೂ, ಕೊಂಡಾಡುತ್ತ ಕಾಲವನ್ನು ಕಳೆಯಬೇಕು. ಹೀಗೆ ಮಾಡುತ್ತ ಬಂದರೆ, ಮನಸ್ಸು ಆ ಭಗವಂತನಲ್ಲಿ ಸುಸ್ಥಿರವಾಗಿ ನಿಲ್ಲುವುದು. ಆತನಲ್ಲಿ ಭಕ್ತಿ ರೂಪವಾದ ಅನುರಾಗವೂ ಹೆಚ್ಚು ತ ಬರುವುದು. ಈ ಹರಿನಾಮಕೀರ್ತನ ವೆಂಬ ವ್ರತದಿಂದ ಭಗವಂತನು ಬಹುಸುಲಭವಾಗಿ ಪ್ರಸನ್ನನಾಗುವನು, ಹಿಂದೆ ಹೇಳಿದಂತೆ ಭಗವರ್ತನಪರನಾದವನಿಗೆ, ದೇಹದಮೇಲೆಯೇ ಸ್ಮತಿ ತಪ್ಪುವುದು.ಯಾವಾಗಲೂ ಭಗವಂತನ ಲೀಲೆಗಳನ್ನು ನೆನೆಸಿಕೊಂಡು ಒಮ್ಮೆ ನಗುವನು ! ಒಮ್ಮೆ ಅಳುವನು ! ಮತ್ತೊಮ್ಮೆ ಕೂಗಿಕೊಳ್ಳುವನು. ಒಮ್ಮೆ ಹಾಡುವನು! ಹುಚ್ಚನಂತೆ ಕುಣಿಯುವನು! ಭೂತಾವಿಷ್ಟನಾದಂತೆ ಲೋಕವಿಲಕ್ಷಣವಾದ ವ್ಯಾಪಾರಗಳನ್ನು ನಡೆಸುವನು. ಓ ರಾಜಾ ! ಹೀಗೆ ಶ್ರೇಯಸ್ಸಾಧನೆಗೆ ನಿತ್ಯವೂ ಹರಿಕಥಾಶ್ರವಣಕೀರ್ತನವೊಂದಲ್ಲದೆ ಬೇರೊಂ