ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪ ಶ್ರೀಮದ್ಭಾಗವತರ [ಅಧ್ಯಾ, ೨೮ ಉಪೇಕ್ಷಿಸಬಹುದು ? ಈ ನಿಂದೆ, ಸ್ತುತಿ, ಉಪೇಕ್ಷೆಯೆಂಬಿವು ಮೂರೂ ಪ್ರಮಾಣಶೂನ್ಯಗಳಾಗಿ, ಕೇವಲಭಮವೆನಿಸುವುವಲ್ಲವೆ ? ಹಾಗೆ ಪರಮ ಪುರುಷನೇ ಪ್ರಪಂಚಕ್ಕೆ ಉಪಾದಾನಕಾರಣನಾಗಿ, ತಾನೇ ಪ್ರಪಂಚ ರೂಪದಿಂದ ಕಾಣಿಸುವಪಕ್ಷಕ್ಕೆ, ಅವನಿಗೂ ಆಕಾರಭೇದಗಳನ್ನು ಹೇಳ ಬೇಕಾಗುವುದಲ್ಲವೆ ? ಆಗ ಪರಮಪುರುಷನು ನಿರ್ವಿಕಾರನೆಂಬುದು ಹೇಗೆ?” ಎಂದು ಕೇಳುವೆಯ? ಈ ಜಗತ್ತೆಂಬುದು ಸತ್ಯಾದಿಗುಣಗಳ ವಿಕಾರವೇ ಆಗಿರುವುದರಿಂದ, ಆ ವಿಕಾರಗಳು ಆ ಗುಣಗಳಿಗೇ ಸೇರುವುವೇಹೊರತು ಪರಮಾತ್ಮನಿಗಲ್ಲ ! ಪರಮಾತ್ಮನು ತನ್ನ ಸಂಕಲ್ಪ ರೂಪದಿಂದ ಗುಣಗಳಲ್ಲಿ ಪ್ರವೇಶಿಸಿ ವಿಕಾರವನ್ನು ಹುಟ್ಟಿಸುವುದರಿಂದಲೇ ಅವನಿಗೆ ಉಪಾದಾನ ಕಾರಣತ್ವವಲ್ಲದೆ ಬೇರೆಯಲ್ಲ ? ಮತ್ತು ಆತನು ಸಮಸ್ತಜಗತ್ತಿಗೂ ಆಂತಯ್ಯಾಮಿಯಾಗಿರುವುದರಿಂದ, ಆ ಗುಣಗಳಲ್ಲಿಯೂ ತಾನೇ ಸೇರಿರುವನು. ಹೀಗೆ ಗುಣಮಯವಾದ ಜಗತ್ತೆಲ್ಲವೂ, ಬ್ರಹ್ಮಮಯವಾಗಿಯೇ ಇರು ವುದರಿಂದ, ಅವನಿಗೆ ಉಪಾದಾನಕಾರಣತ್ವವನ್ನು ಹೇಳುವುದರಲ್ಲಿ ವಿರೋ ಧವೇನೂ ಬಾರದು. ಹೀಗೆ ಪರಮಾತ್ಮ ಮಯವಾದ ಜಗತ್ತಿನಲ್ಲಿ, ಪ್ರಕೃತಿ ಪುರುಷರಿಗಿರುವ ವೈಲಕ್ಷಣ್ಯವನ್ನೂ, ಇವೆರಡಕ್ಕಿಂತಲೂ ಪರಮಪುರುಷನು ವಿಲಕ್ಷಣನೆಂಬುದನ್ನೂ, ಸಮಸ್ತ ಜಗತ್ತೂ ಈ ತತ್ವತ್ರಯದಿಂದಲೇ ಕೂಡಿ ರುವುದೆಂಬುದನ್ನೂ ಚೆನ್ನಾಗಿ ತಿಳಿದ ವಿದ್ವಾಂಸನು, ಬೇರೆಯಾವುದನ್ನೂ ನಿಂದಿಸದೆ, ಯಾವುದನ್ನೂ ಸ್ತುತಿಸದೆ, ಸೂ‌ನಂತೆ ಸತ್ವವಸ್ತುವಿ ನಲ್ಲಿಯೂ ಗುಣದೋಷಭಾವನೆಯಿಲ್ಲದೆ ಸಮಭಾವದಿಂದ ವರ್ತಿಸುವನು, ಆದುದರಿಂದ ವಿವೇಕಿಯಾದವನು, ಚತುರುಖಬ್ರಹ್ಮನಿಂದ ಹಿಡಿದು, ಸಣ್ಣ ಕ್ರಿಮಿಗಳವರೆಗಿನ ಎಲ್ಲಾ ದೇಹಸಮೂಹವೂ ಜನನಮರಣಗಳನ್ನು ಹೊಂದತಕ್ಕುದೆಂದೂ, ಆತ್ಮನಿಗಿಂತಲೂ ಭಿನ್ನವಾದುದೆಂದೂ, ಪ್ರತ್ಯಕ್ಷ ದಿಂದಲೂ, ಅನುಮಾನದಿಂದಲೂ, ಶಾಸ್ತ್ರ ಪ್ರಮಾಣದಿಂದಲೂ, ಬುದ್ಧಿ ಕೌಶಲದಿಂದಲೂ ತಿಳಿದುಕೊಂಡು, ಯಾವುದರಲ್ಲಿಯೂ ಸಂಗವಿಲ್ಲದೆ ವರ್ತಿ ಸುತ್ತಿರಬೇಕು” ಎಂದನು.