ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೪ ಶ್ರೀಮದ್ಭಾಗವತವು [ಅಧ್ಯಾ, ೨೯. ಭ್ಯಾಸವನ್ನು ಬಿಟ್ಟು, ದೇಹದಾರ್ಡ್ಯಕ್ಕಾಗಿ ಕಾಲವನ್ನು ವ್ಯರ್ಥಮಾಡು ವುದು ಯುಕ್ತವಲ್ಲ! ಆಕಾಲವನ್ನೂ ಕೂಡ, ಯೋಗಕ್ಕಾಗಿಯೇ ಉಪಯೋ ಗಿಸಬೇಕು. ಸ್ಥಿರವಾದ ಗಿಡದಲ್ಲಿ, ಆಗಾಗ ಹಣ್ಣುಗಳು ಬಿಟ್ಟು ಉದಿರಿ ಹೋಗುವಂತೆ, ಆತ್ಮವೊಂದೇ ಸ್ಥಿರವಾಗಿ ನಿಂತು, ದೇಹವು ಆಗಾಗ ಬಿದ್ದು ಹೋಗತಕ್ಕದು. ಇದಲ್ಲದೆ ಸಮಾಧಿಗೆ ಅಂಗವಾಗಿಯೇ ಪ್ರಾಣಾಯಾ ಮವೇ ಮೊದಲಾದುವುಗಳನ್ನು ನಡೆಸುತ್ತಿದ್ದರೂ, ಅದರಿಂದ ಜರಾರೋ ಗಾಡಿಗಳು ಬಿಟ್ಟು ಹೋಗಿ ದೇಹವು ದೃಢವಾಗುವುದುಂಟು. ಹಾಗಿದ್ದರೂ ಬುದ್ದಿಶಾಲಿಯಾದವನು ಆ ದೇಹದಾರ್ಡ್ಯವನ್ನು ನಂಬಿ ಸಮಾಧಿಯನ್ನು ಬಿ ಟ್ಟು ಕಾಲವನ್ನು ಕಳೆಯಬಾರದು. ಹೀಗೆ ದೇಹಾಭಿಮಾನವನ್ನು ಬಿಟ್ಟು ನನ್ನ ನ್ನೇ ನಂಬಿ ಯೋಗಚಕ್ಕೆಯನ್ನು ನಡೆಸತಕ್ಕವನುನಡುನಡುವೆ ಲಭಿಸತಕ್ಕೆ ಆ ಣಿಮಾಡಿಸಿದ್ದಿಗಳಿಗೂ ಆಸೆಪಡದೆ,ಆ ಸಮಾಧಿಯನ್ನು ಪೂರ್ಣವಾಗುವವರೆಗೆ ಸಾಧಿಸಬೇಕು. ಅಂತವನು ಹೊರಗಿನ ವ್ಯಾಪಾರವನ್ನೇ ತಿಳಿಯದೆ,ಆತ್ಮಾನು ಭವವೆಂಬ ಆನಂದವೊಂದರಲ್ಲಿಯೇ ಮಗ್ನನಾಗಿರುವುದರಿಂದ, ಎಂತಹ ವಿಷ್ಣುಗಳೂ ಅವನಿಗೆ ಭಂಗವನ್ನುಂಟುಮಾಡಲಾರವು. ” ಎಂದನು ಇದು ಇಪ್ಪತ್ತೆಂಟನೆಯ ಅಧ್ಯಾಯವು ... ( ಶ್ರೀಕೃಷ್ಣನು ಉದ್ದವನಿಗೆ ತಿರುಗಿ ಭಕ್ತಿಯೋಗ | w+ ಶ್ರೀಕೃಷ್ಣನ * ವನ್ನು ಸಂಗ್ರಹಿಸಿ ಹೇಳಿದುದು ೧೧ ಉದ್ಧವನು ಪ್ರಶ್ನೆ ಮಾಡುವನು ಓ ಅಚ್ಯುತಾ ! ಕೃಷ್ಣಾ ! ಇಂದ್ರಿಯಜಯವಿಲ್ಲದವನಿಗೆ, ನೀನು ಇದುವರೆಗೆ ಹೇಳಿದ ಯೋಗಚರೆಯು ಬಹಳ ದುಷ್ಕರವೆಂದು ನನಗೆ ತೋರುವುದು. ಇದನ್ನು ಬಿಟ್ಟು ಬೇರೆ ಸುಲ ಭೋಪಾಯದಿಂದ, ಅನಾಯಾಸವಾಗಿ ಮೋಕ್ಷ ಸಿದ್ದಿಯನ್ನು ಹೊಂದುವು ದಕ್ಕೆ ಉಪಾಯವೇನಾದರೂ ಇದ್ದರೆ, ಅದನ್ನು ನನಗೆ ತಿಳಿಸಬೇಕು. ಓ ಪುಂಡರೀಕಾಕ್ಷಾ' ಯೋಗಾಭ್ಯಾಸದಲ್ಲಿ ಪ್ರವರ್ತಿಸತಕ್ಕವರು, ಮನಸ್ಸನ್ನು ವಶೀಕರಿಸುವುದಕ್ಕಾಗಿ ಉಪವಾಸಾದಿವ್ರತಗಳನ್ನು ಹಿಡಿದು, ದೇಹವನ್ನು ದಂಡಿಸಬೇಕಾಗುವುದು. ದೇಹದಂಡನೆಯಿಂದ ಮನಸ್ಸು ದುರ್ಬಲವಾಗಿ,