ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೯.) ಏಕಾದಶಸ್ಕಂಧತ. ೨೬೩೧ ರನ್ನಾಶ್ರಯಿಸುವನು ? ಇದುವರೆಗೆ ನೀನೇ ನಿನ ಮಾಯೆಯಿಂದ ನನಗೆ, ಕೃತಿಗಳು, ಅಂಧಕರು, ದಾಶಾರ್ಹರು,ಸಾತ್ವತರು ಮುಂತಾದ ಯಾದವ ಕುಲದವರಲ್ಲಿ, ನನ್ನವರೆಂಬ ಅಭಿಮಾನವನ್ನು ಹುಟ್ಟಿಸಿ, ಸಂಸಾರಾಭಿವೃದ್ಧಿ ಗಾಗಿ, ದೃಢವಾದ ಸ್ನೇಹಪಾಶದಿಂದ ನನ್ನನ್ನು ಬಂಧಿಸಿದ್ದರೂ, ಈಗ ಜ್ಞಾ ನೋಪದೇಶವೆಂಬ ಕತ್ತಿಯಿಂದ ಅದನ್ನು ನೀನೇ ಛೇದಿಸಿದೆ.ಓ ಯೋಗೀಶ್ವರಾ! ನಿನಗೆ ವಂದನವು ? ಶರಣಾಗತನಾದ ನನಗೆ ಎಂದೆಂದಿಗೂ ನಿನ್ನ ಪಾದಾರ ಪಂದದಲ್ಲಿ ಅವಿಚ್ಛಿನ್ನವಾದ ಭಕ್ತಿಯ ನೆಲೆಗೊಂಡಿರುವಂತೆ ಅನುಗ್ರಹಿಸಿ ಕಾಪಾಡಬೇಕು” ಎಂದನು. ಆಗ ಕೃಷ್ಣನು ಉದ್ದವನನ್ನು ಕುರಿತು ಉದ್ದವಾ ! ಇನ್ನು ನೀನು ನನ್ನ ಆಜ್ಞಾನುಸಾರವಾಗಿ, ನಾರಾಯಣಾಶ್ರಮವೆಂಬ ಹೆಸರಿನಿಂದ ನನಗೆ ಸ್ಥಾನವಾದ ಬದರಿಕಾಶ್ರಮಕ್ಕೆ ಹೋಗಿ, ಅಲ್ಲಿ ನನ್ನ ಪಾದತೀರವೆನಿಸಿದ ಗಂಗೆಯಲ್ಲಿ ಸ್ನಾ ನಾಚಮನಗಳನ್ನು ಮಾಡಿ ಪರಿಶುದ್ಧನಾಗು ! ಆ ಗಂಗಾ ದರ್ಶನದಿಂದ ನಿನ್ನ ಕಲ್ಮಷಗಳೆಲ್ಲವನ್ನೂ ಸೀಗಿ, ನಾರುಮಡಿಯನ್ನು ಟ್ಯ, ದೇಹಸುಖದಲ್ಲಿ ಆಸೆಯನ್ನು ತೊರೆದು, ಗಡ್ಡೆ ಗೆಣಸುಗಳಿಂದಲೇ ಜೀವಧಾ ರಣವನ್ನು ಮಾಡುತ್ತ, ಆತ್ಮಾನುಭವದಿಂದ ಆನಂದಿಸುತ್ತಿರು ! ಶೀತೋ ಮಾಡಿ ದ್ವಂದ್ವಗಳನ್ನು ಜಯಿಸಿ, ದಂಭಾದಿಗಳನ್ನು ಬಿಟ್ಟು, ಕೇವಲ ಋಜು ಸ್ವಭಾವುಂದ ಜಿತೇಂದ್ರಿಯನಾಗಿರು. ತತ್ವತ್ರಯವಿವೇಚನಾರೂಪ ವಾದ ಜ್ಞಾನದಿಂದಲೂ, ಬ್ರಹೋಪಾಸನಾರೂಪವಾದ ವಿಜ್ಞಾನದಿಂದ ಲೂ, ನಿಶ್ಚಲಮನಸ್ಕನಾಗಿರು! ಇದುವರೆಗೆ ನಾನು ನಿನಗೆ ಬೇರೆಬೇರೆಯಾ ಗಿ ವಿವರಿಸಿ ತಿಳಿಸಿದ ತತ್ವವಿಚಾರಗಳನ್ನೇ ಮನಸ್ಸಿನಲ್ಲಿ ದೃಢವಾಗಿ ಮನನ ಮಾಡುತ್ತ, ಮನೋವಾಕ್ಯಾಯಗಳೆಂಬ ತ್ರಿಕರಣಗಳಿಂದಲೂ ನನ್ನನ್ನೇ ಈ ಪಾಸನೆಮಾಡುತ್ತ, ದೇಹಾವಸಾನದವರೆಗೂ ನಿರೀಕ್ಷಿಸುತ್ತಿರು! ಈ ವಿಧ ವಾಗಿ ನಿನ್ನ ಪ್ರಾರಬ್ಧ ಕರವನ್ನು ಕಳೆದಮೇಲೆ. ನೀನು ಸಾತ್ವಿಕ ರಾಜಸ, ತಾಮಸಗಳೆಂಬ ಮೂರುಗತಿಗಳನ್ನೊಳಗೊಂಡ ಪ್ರಕೃತಿಮಂಡಲಕ್ಕಿಂತಲೂ ಅಜೆಗಿರುವ ನನ್ನ ಸ್ಥಾನವನ್ನು ಸೇರುವೆ” ಎಂದನು.