ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೮೦ ಶ್ರೀಮದ್ಭಾಗವತವು ಅಧ್ಯಾ೧. ಸಣ್ಣ ರಾಜ್ಯಗಳ ರ್ಪಡಿಸಿ ಆಯಾದೇಶದ ಹೆಸರಿಸಿಂದಲೇ ಖ್ಯಾತರಾಗಿ ರಾಜ್ಯಭಾರ ಮಾಡುವರು ಹೆಚ್ಚು ಕಡಿಮೆಯಾಗಿ ಇವರೆಲ್ಲರೂ ಸಮಾನ ಕಾಲಿಕರು. ಮತ್ತು ಎಲ್ಲರೂ ಬಾಕಸಂತತಿಯವರು. ಇವರಲ್ಲಿ ಮಗಧ ರಾಜರಲ್ಲಿ ವಿಶ್ವಸೂರ್ಜಿಯೆಂಬವನು,ಹಿಂದೆ ಹೇಳಿದ ಪುರಂಜಯಸಿಗಿಂತಲೂ ಬಲದಲ್ಲಿ ಮೇಲೆಸಿಸುವನು. ಆದರೆ ಇವನ ಬಾಹ್ಮಣಾದಿವರ್ಣಗಳೆಲ್ಲ ವನ್ನೂ ಕೆಡಿಸಿ, ತನ್ನ ರಾಜ್ಯವನ್ನೆಲ್ಲಾ ಪಲಿಂದ ಯದು ಮದ್ರಕಗಳೆಂಬ ಹೆಸರಿನಿಂದ ಮೇಫ್ಟಿಪ್ರಾಯಗಳನ್ನಾಗಿ ಮಾಡುತ್ತ, ತನ್ನ ಪ್ರಜೆಗಳೆಲ್ಲರೂ ವರ್ಣಾಶ್ರಮಧರ್ಮಗಳನ್ನು ಬಿಟ್ಟುಬಿಡುವಹಾಗೆ ನಿರ್ಬಂಧಿಸಿ ರಾಜ್ಯ ವನ್ನು ನಡೆಸುವನು. ಈತನು ಬಹಳ ಪರಾಕ್ರಮಿಯಾಗಿ, ಪದ್ಮವತಿ ಯೆಂಬ ಪಟ್ಟಣದಲ್ಲಿ ವಾಸಮಾಡುತ್ತಾ, ಕತ್ರವಂಶವನ್ನೆ ನಿರ್ಮೂಲವಾಗಿ ಕೆಡಿಸುವನು. ಗಂಗಾ ವಹಿಂದ ಪ್ರಯಾಗದವರೆಗಿನ ಸಮಸ್ತ ದೇಶವೂ ಇವನ ಕೈವಶವಾಗುವುದ. ಇವನ ಕಾಲದಲ್ಲಿ ಸೌರಾಷ್ಟ್ರ, ಆವಂತಿ, ಅಭಿರ, ಅರ್ಬುದ, ಮಾಲವ, ಮೊದಲಾದ ದೇಶದಲ್ಲಿರುವ ಬ್ರಾಹ್ಮಣ ರೆಲ್ಲರೂ. ಉಪನಯನವಾದಿ ಸಂಸ್ಕಾರಗಳನ್ನು ಬಿಟ್ಟು, ಶೂದ್ರಪ್ರಾಯರಾಗು ವರು. ಕೊನೆಕೊನೆಗೆ ಸಮಸ್ತ ಪ್ರದೇಶಗಳೂ ಶೂದ್ರಪ್ರಚುರವಾಗುವುವು. ಸಿಂಧುವಾಯ, ಮತ್ತು ಚಂದ್ರಭಾಗಾ ಯ ತಿರದೇಶಗಳೂ, ಕುಂತಿ ಕಾಶ್ಮೀರಮಂಡಲಗಳೂ ಪತಿತರಾದ ಬಾಹ್ಮಣರಿಗೂ, ಶೂದ್ರರಿಗೂ, ಮೈಕೃರಿಗೂ,ಬ್ರಹ್ಮ ವರ್ಚಸ್ಸಿಲ್ಲದ ಇತರ ನೀಚಜಾತಿಯವರಿಗೂ ಆಶ್ರಯ ಗಳಾಗಿ ಅವರಿಂದಲೇ ಆಳಲ್ಪಡುವವು ಓ ಪರೀಕ್ಷಿದ್ರಾಜಾ! ಹಿಂದೆ ಹೇಳಿ ದಂತಿ ಮೇಷ್ಟ್ರಪ್ರಾಯರಾದ ಈ ರಾಜರೆಲ್ಲರೂ ಒಂದೇ ಕಾಲದಲ್ಲಿರುವರು. ಇವರೆಲ್ಲರೂ ಆಧರ್ಮದಲ್ಲಿಯೂ, ಅವೃತದಲ್ಲಿಯೂ, ನಿರತರಾಗುವರು. ಇವರಿಗೆ ಔದಾರ್ಯಬುದ್ಧಿಯಿರದು. ಇವರು ಬಹಳ ತೀವ್ರ ಕೋಪವುಳ್ಳವ ರಾಗಿ, ಸೀಹತ್ಯೆ, ಗೋಹತ್ಯೆ, ಶಿಶುಹತ್ಯೆ, ಬ್ರಹ್ಮಹತ್ಯೆ, ಮುಂತಾದ ಪಾಪ ಕಾರ್ಯಗಳಿಗೆ ಹಿಂಜರಿಯಲಾರರು. ಪರಸ್ತ್ರೀಯರನ್ನೂ, ಪರದ್ರವ್ಯವನ್ನೂ, ಅಪಹರಿಸುವುದರಲ್ಲಿಯೇ ನಿರತರಾಗುವರು. ಇವರ ಕೋಶಪ್ರಸಾದಗಳು ಕ್ಷಣಿಕಗಳು! ಇವರಿಗೆ ಆಯುಕ್ಕೂ, ದೇಹಬಲವೂಕೂಡ ಬಹಳ ಸ್ವಲ್ಪವಾ