ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


94fo ಶ್ರೀಮದ್ಭಾಗವತವು (ಅಧ್ಯಾ 2' ರೆಲ್ಲರೂ ಅನೇಕ ವಿಷಯಗಳನ್ನು ಬಲ್ಲವರು! ಮಹಾಶೂರರು' ಯಾರಿಂದಲೂ ಜಯಿಸಲ್ಪಡದವರು! ಹಾಗಿದ್ದರೂ ಮನುಷ್ಯಧರವಾದ ಮರಣವನ್ನು ಮಾತ್ರ ಯಾರೂ ಜಯಿಸಲಾರದೆ ಹೋದರು. ಇವರೆಲ್ಲರೂ ನನ್ನಲ್ಲಿ ವಿಶೇಷಮಮತೆಯನ್ನಿಟ್ಟಿದವರು ! ಆದರೇನು ? ತಮ್ಮ ಭೋಗಾಭಿಲಾ ಪೆಯು ತೀರುವುದಕ್ಕೆ ಮೊದಲೇ ಕಾಲವಶದಿಂದ, ಆಕೃತಾರ್ಥರಾಗಿಯೇ ನನ್ನನ್ನು ಬಿಟ್ಟು ಹೋದರಲ್ಲವೆ ? ” ಎಂದು ಭೂವಿಯು ಅಂತಹ ಪ್ರಸಿದ್ಧ ರಾಜರ ಸ್ಥಿತಿಗಾಗಿಯೇ ನಗುತ್ತಿರುವುದು, ಓ ರಾಜಾ ! ನಾನು ಇದುವರೆಗೆ ಸರ್ ಚಂದ್ರ ವಂಶದಲ್ಲಿ ಹುಟ್ಟಿದ ಅನೇಕರಾಜರ ಚರಿತ್ರಗಳನ್ನು ನಿನಗೆ ಹೇಳಿದ ಉದ್ದೇಶವೇನೆಂದು ಬಲ್ಲೆಯಾ ? ರಾಜ್ಯಭೋಗಗಳೆಲ್ಲವೂ ನಿಸ್ಸಾರಗ ಳೆಂಬುದನ್ನು ತಿಳಿಸಿ ಅದರಲ್ಲಿ,ಸಿನಗೆ ವೈರಾಗ್ಯವನ್ನು ಹುಟ್ಟಿಸುವುದಕ್ಕಾಗಿಯೇ ನಾನು,ಕೀರ್ತಿಶೇಷರಾದ ಆ ರಾಜರ ಕಥೆಗಳನ್ನು ತಿಳಿಸಿದೆನು.ರಾಜ್ಯಭೋಗಗ ಳೆಲ್ಲವೂ ಅಸತ್ಯಗಳು. ಭಗವದ್ದು ಣಾನುಸಂಧಾನವೊಂದೇ ಸಾರವಾ ದುದು. ಅಮಂಗಲವನ್ನು ನೀಗಿಸಿ, ಮನುಷ್ಯನಿಗೆ ಸ್ಥಿರವಾದ ಶ್ರೇಯ ಸ್ಪನ್ನು ಕೈಗೂಡಿಸತಕ್ಕುದೂ ಆ ಭಗವದ್ದು ಣಾನುಸಂಧಾನವೇ ! ಭಕ್ತಿ ಯೋಗದಲ್ಲಿ ಸಿಕ್ಕಿಯನ್ನು ಕೋರುವವನು, ಆ ಶ್ರೀಹರಿಯ ಗುಣಗಳನ್ನು ಆಗಾಗ ಕೇಳುತ್ತಿರಬೇಕು.” ಎಂದನು. ಪರೀಕ್ಷಿದ್ರಾಜನು ತಿರುಗಿ ಪ್ರಶ್ನೆ ಮಾಡುವನು. ಓ ಮುನೀಂದ್ರಾ! ಕಲಿಯುಗದಲ್ಲಿ ಜನರು, ದಿನದಿನಕ್ಕೆ ಹೆಚ್ಚಿ ಬರುತ್ತಿರುವ ಕಲಿದೋಷದಿಂದ ತಪ್ಪಿಸಿಕೊಳ್ಳುವುದಕ್ಕೆ ಉಪಾಯವೇನೆಂಬುದನ್ನು ತಿಳಿಸಬೇಕು. ಮತ್ತು ಚತುರ್ಯುಗಗಳ ಸ್ವರೂಪವನ್ನೂ , ಆಯಾ ಯುಗಧಗಳನ್ನೂ , ಬೇರೆಬೇರೆ ವಿಧವಾದ ಪ್ರಳಯಗಳ ರೀತಿಯನ್ನೂ, ಕಾಲರೂಪಿಯಾದ ಸರೇಶ್ವರನ ಪರಕಮವನೂ ತಿಳಿಸಬೇಕು.” ಎಂದನು. ಆದಕಾ ಶುಕಮುನಿಯು <ಓ ರಾಜೇಂದ್ರಾ! ಕೇಳು ! ಮೊದಲನೆಯದಾದ ಕೃತಯುಗದಲ್ಲಿ ಧರ ವೆಂಬುದು, ಸತ್ಯ, ದಯೆ, ತಪಸ್ಸು, ದಾನಗಳೆಂಬ ನಾಲ್ಕು ಪಾದಗಳಿಂದ ಆ ಕಾಲದ ಜನಗಳಲ್ಲಿ ನೆಲೆಗೊಂಡಿರುವುದು. *ಪ್ರಾಯಕವಾಗಿ ಆಗಿನ ಜನ

  • ಎಲ್ಲರ ಇಂತಹಗುಹವುಳ್ಳವರಾಗಿಯೇ ಇಡ್ಲ್ಲಿ, ಎಲ್ಲರ ಮುಕ್ತರಾಗ