ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೯ ಶ್ರೀಮದ್ಭಾಗವತವು [ಅನ್ಯಾ. ೪ ಸಿರುವೆನು.ಇನ್ನು *ಕಲ್ಪಭೇದಗಳನ್ನೂ ಪ್ರಳಯಗಳನ್ನೂ ತಿಳಿಸುವೆನು ಕೇಳು! ಮನುಷ್ಯರ ಲೆಕ್ಕದಲ್ಲಿ ಒಂದು ಸಹ ಚತುರ್ಯುಗಗಳು ಬ್ರಹ್ಮನಿಗೆ ಒಂದು ಹಗಲೆನಿಸುವುದು. ಈ ಒಂದುಹಗಲಲ್ಲಿಯೇ ಕ್ರಮವಾಗಿ + ಚತು ರ್ದಶಮನಗಳ ಕಾಲವೂ ಕ ದುಹೋಗುವುದು ಅದಾದಮೇಲೆ ಎಂದರೆ, # ಈ ಸಹಸ್ರಚತುರ್ಯುಗಗಳು ಕೊನೆಗೆ, ಪ್ರಳಯವು ನಡೆಯುವುದು. ಈ ಪ್ರ ಳಯಕಾಲವೂ ಅದೇ ಪರಿಮಾಣವುಳ್ಳದು ಎಂದರೆ ಒಂದು ಸಹಸ್ರ ಚತು ರ್ಯುಗಗಳವರೆಗೆ ಸ್ಥಿವುದು ಇದು ಒಕ್ಕಸಿಗೆ ಒಂದು ರಾತ್ರಿಯಾಗಿರುವು ದು. ಆ ರಾತ್ರಿಯಲ್ಲಿ ಭೂಮಿ ಮೊದಲಾದ ಮೂರುಲೋಕಗಳೂ ಭಯ ಹೊಂದುವುವು. ಇದಕ್ಕೆ ಪಿಕಪ್ರಳಯವೆಂದು ಹೆಸರು. ಈ ಪ್ರಳಯ ದಲ್ಲಿ ಸೃಷ್ಟಿಕರ್ತನಾದ ಚತುರಖಬ್ರಹ್ಮನು, ತಾನು ಸೃಷ್ಟಿಸಿದ ಪ್ರಪಂಚವನ್ನೆಲ್ಲಾ ಉಪಸಂಹರಿಸಿಕೊಂಡು, ಶೇಷಣ ಯಿಯಾದ ಭಗವಂ ಈ ನಾಭಿಪದ್ಯದಲ್ಲಿ ಶಯನಿಸಿರುವನು. ಈ ಬ್ರಹ್ಮನಿಗೆ ಎರಡಪಾರ್ಥ ಕಾಲವು ಕಳೆದಮೇಲೆ, ಮಹತ್ತು, ಅಹಂಕಾರ, ಪಂಚಭೂತಗಳಿಂಬ ಏಳುಪ್ರಕೃತಿಗಳೂ ಲಯಹೊಂದುವವ ಇದಕ್ಕೆ ಪ್ರಾಕೃತಪ್ರಳೆಯ ವೆಂದು ಹೆಸರು. ಈ ವಿಧವಾದ ನಾಶಕ್ಕೆ ಆರಂಭಿಸಿದಾಗ, ಮೊದಲು, ಮಹ ತ್ತು ಮೊದಲಾದ ಏಳಪ್ರಕೃತಿಗಳ ಸಮುದಾಯರೂಪವಾದ ಅಂಡಕೋ ಶವು ಲಯಿಸುವುದು.ಅದರ ನಾಶಕ್ರಮವೇನೆಂದರೆ;ಆಗ ಪರ್ಜನ್ಯನು ನೂರು

  • ಕಲ್ಪಗಳಲ್ಲಿ ದೈನಂದಿನಕವೆಂದೂ, ಮಹಾ ಕಲ್ಪವೆಂದೂ ಎರಡು ಭೇದ ಗಳು ಇಲ್ಲಿ ದೈನಂದಿನಕಲ್ಪವು ಹೇಳಲ್ಪಡುವುದು,

+ ಮನುಗಳ ಕಾಲವೆಂದರೆ ಮನ್ವಂತರಗಳು. ಒಬ್ಬೊಬ್ಬ ಮನುಜನ ಆಳ್ವಿಕೆ ಯು ಎಪ್ಪತಂದು ಚತುರ್ಯುಗಗಳ ಕಲವು ಇದು ಹಿಂದೆ ತೃತೀಯಸ್ಕಂಧ ದಲ್ಲಿ ವಿವರಿಸಲ್ಪಟ್ಟಿದೆ.

  1. ಪ್ರಳಯಗಳಲ್ಲಿ, ನಿತ್ಯ, ನೈಮಿತ್ತಿಕ, ಪ್ರಾಕೃತಿಕ, ಅತ್ಯ೦ತಿಕಗಳೆಂದು ನಾ ಲ್ಕುಭೇದಗಳು. ಒಂದು ಸಾವಿರ ಚತುರ್ಯುಗಪರಿಮಾಣವುಳ್ಳ ತನ್ನ ಒಂದು ಹಗಲು ಕಳೆದಮೇಲೆ, ಬ್ರಹ್ಮನು, ಜಗಹ್ಯಾಪಾರವನ್ನು ಬಿಟ್ಟು ಶಮನಿಸುವನು, ಇದೇ ನೈಮಿ ೩ಳಪ್ರಳಯವು,

೩ . G