ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨too ಶ್ರೀಮದ್ಭಾಗವತರ (ಅಧ್ಯಾ. ೪. ಭೇದಗಳು ಪ್ರಕೃತಿಸಂಬಂಧದಿಂದುಂಟಾಗತಕ್ಕವುಗಳೇಹೊರತು ಸಹಜ ವಲ್ಲ! ಆಕಾಶದಲ್ಲಿ ಮೇಘಗಳು ಒಮ್ಮೊಮ್ಮೆ ದೃಶ್ಯವಾಗಿಯೂ, ಮತ್ತೊಮ್ಮೆ ಅದೃಶ್ಯವಾಗಿಯೂ ಇರುವಂತೆ, ಈ ದೃಶ್ಯಪ್ರಪಂಚವೆಲ್ಲವೂ, ಆ ಬಹ್ಮ ನಲ್ಲಿಯೇ ಸೃಷ್ಟಿದಶೆಯಲ್ಲಿ ಹೊರಕ್ಕೆ ಕಾಣುತ್ತಲೂ, ಲಯದಶೆಯಲ್ಲಿ ಅವ ನಲ್ಲಿಯೇ ಉಯಿಸಿ ಅಗೋಚರವಾಗುತ್ತಲೂ ಇರುವುದು. ಆದರೆ ಜಗತ್ತನ್ನು ಅಸತ್ಯವೆಂದು ಕೆಲವರು ಭ್ರವಿಸುವದು. ಹಾಗೆ ತಿಳಿಯಬಾರದು. ಏಕೆಂ ದರೆ, ಅವಯವವಿಶಿಷ್ಟವಾದ ಸಮಸ್ಯವಸ್ತುಗಳಿಗೂ ಅವಯವಗಳು ಸತ್ಯವೆಂದೇ ಗ್ರಹಿಸಲ್ಪಡಬೇಕು. ಅವಯವಗಳನ್ನು ಬಿಟ್ಟು ಅವಯವಿಯು ಬೇರೆಯಾಗಿರಲಾರದು. ಮೂಲೆಳೆಗಳನ್ನು ಬಿಟ್ಟು ವಸವೆಸಿಸಲಾರದಲ್ಲವೆ ? ಹಾಗೆಯೇ ಜಗದ್ರೂಪವಾದ ಕಾರವು, ಅದಕ್ಕೆ ಕಾರಣನೆನಿಸಿಕೊಂಡ ಬ್ರಹ್ಮನಿಗಿಂತಲೂ ಬೇರೆಯಾಗಿರಲಾರದು. ಆದುದರಿಂದ, ಚಿತ್ತು, ಅಚಿತ್ತು, ಈಶ್ವರರೆಂಬ ಈ ಮೂರರ ಸಂಘಾತವೇ ಜಗದೂಪವಾದ ಪರಿಣಾಮವಿಶೇಷವನ್ನು ಹೊಂದಿ, ಕಾರಪ್ರಪಂಚವೆನಿಸಿಕೊಳ್ಳುವುದು. ಸನಿಸಿದ ಕಾರಣದ್ರವ್ಯಗಳ ಸಮುದಾಯವೇ ಕಾರವಾದುದರಿಂದ,ಕಾರ ವಸ್ತುವೂ ಸತ್ಯಸಿಸುವುದೇ ಹೊರತು ಅಸತ್ಯಸಿಸದು. ಕಾರಣವೆನಿಸಿದ ಮಣ್ಣು ಕಲ್ಯಾವಸ್ಥೆಯಲ್ಲಿ ಗಡಿಗೆಯೆನಿಸುವುದು. ಆಗ ಆ ಕಾಠ್ಯಕಾರಣ ವಸ್ತುಗಳಿಗೆ ಫುಟವೆಂದೂ, ಮಣ್ಣೆಂದೂ ಮನೋಭಾವನೆಯಲ್ಲಿಯೂ, ವ್ಯವಹಾರದಲ್ಲಿಯೂ ಭೇದವು ಏರ್ಪ್ಪಟ್ಟರೂ, ಈ ಆಕಾರಭೇದಕ್ಕೇ ದ್ರವ್ಯಾಂತರತ್ವವನ್ನು ತಿಳಿಯುವುದು ಕೇವಲಭ್ರಮವಲ್ಲವೆ? ಏಕೆಂದರೆ, ಸಾಮಾನ್ಯವೆನಿಸಿಕೊಂಡ ಮಣ್ಣೂ, ಅದರ ಆಕಾರವಿಶೇಷವೆನಿಸಿಕೊಂಡ ಗಡಿಗೆಯೂ, ಆಧಾರಾಥೇಯಭಾವದಿಂದ ಒಂದನ್ನೊಂದು ಆಶ್ರಯಿಸಿಯೇ ಇರುವುವೇಹೊರತು,ಅವು ಒಂದನ್ನೊಂದು ಬಿಟ್ಟು ಪ್ರತ್ಯೇಕವಾಗಿ ದ್ರವ್ಯಾಂ ತರವೆನಿಸಲಾರದು. ಹೀಗೆಯೇ ಚಿದಚಿರೀಶ್ವರಸಮುದಾಯವೇ ಕಾರ್ ಕಾರಣಗಳೆಂಬ ಎರಡವಸ್ಥೆಗಳನ್ನೂ ಹೊಂದುವುದರಿಂದ, ಅವುಗಳಿಗೆ ಭೇದ ವಿಲ್ಲ! ಅವುಗಳ ಕಾರರೂಪವಾದ ಜಗತ್ತನ್ನು ಅಸತ್ತೆಂದೂ ತಿಳಿಯಬಾರದು. ಮೇಲೆ ಹೇಳಿದ ಮೂರುಶತ್ವಗಳೂ, ಕಾವ್ಯಾವಸ್ಥೆಯನ್ನು ಹೊಂದಿದಾಗ