ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ [ಅಧ್ಯಾ, ೬ ಶ್ರೀಮದ್ಭಾಗವತರ ಲಾರದು. ಏಕೆಂದರೆ, ಜೀವನ ಜ್ಞಾನವು ಇಂದ್ರಿಯಾಥೀನವಾದುದು. ಪರ ಮಾತ್ಮನ ಜ್ಞಾನವೋ ಇಂದ್ರಿಯಾಥೀನವಲ್ಲ! ಈಪ್ರಣವದಿಂದಲೇ, ಲೌಕಿಕ ವೈದಿಕ ಶಬ್ದರಾಶಿಗಳೆಲ್ಲವೂ ವ್ಯಕ್ತವಾಗುವುವು. ಇದಕ್ಕೆ ಹೃದಯಾಕಾಶವೇ ಉತ್ಸಸ್ಥಾನವು.ಇದು ಸ್ವಯಂಪ್ರಕಾಶನಾದ ಪರಬ್ರಹ್ಮನಿಗೆ ವಾಚಕವಾ ಗಿರುವುದು. ಸಮಸ್ತ ಮಂತ್ರಗಳಿಗೂ, ವೇದಗಳಿಗೂ, ಉಪನಿಷತ್ತುಗಳಿಗೂ ಇದೇ ಬೀಜವು, ಇದು ಸನಾತನವಾದುದು. (ಇದಕ್ಕೆ ಹೃದಯಾಕಾಶದಲ್ಲಿ ಉತ್ಪತ್ತಿಯೆಂದರೆ ತೋರಿಕೆಯೇಹೊರತು ಹೊಸದಾಗಿ ಹುಟ್ಟುವುದಲ್ಲ.) ಈ ಪ್ರಣವಕ್ಕೆ, ಆಕಾರ, ಉಕಾರ ಮಕಾರಗಳೆಂಬ ಮೂರು ಅವಯವಗಳು ಏರ್ಪಟ್ಟು, ಈ ಮೂರು ವರ್ಣಗಳಿಂದ (ಅನನ್ಯಾರ್ಹಶೇಷತ್ವ, ಅನನ್ಯಶರ ಅಶ್ವ, ಅನನ್ಯಭೋಗ್ಯತ್ವಗಳೆಂಬ) ಮೂರು ಅರ್ಥಗಳು ವ್ಯಕ್ತವಾಗುವುವು. ಮತ್ತು ಭಗವಂತನಿಗೆ, ಪ್ರಾತ್ಯತ್ವ,ಪ್ರಾಪಕತ್ವ ಮೊದಲಾದ ಗುಣಗಳನ್ನು ಪ್ರತಿಪಾದಿಸುವ ನಾರಾಯಣಾದಿನಾಮಗಳ ಆರ್ಥವೂ ಇದರಿಂದ ಪ್ರಕಾಶಿ ವಾಗುವುದು. ಚತುರ್ಮುಖಶರೀರಿಯಾದ ಭಗವಂತನು, ಈ ಪ್ರಣವದಿಂದ ಲೇ ಪ್ರಸ್ವದೀರ್ಘ ಲಕ್ಷಣಗಳುಳ್ಳ ಅಂತಸ್ಯ, ಊಷ್ಮ, ಸ್ವರ, ಸ್ವರ್ಶಗ ಕೆಂಬ ಭೇದಗಳೊಡನೆ ವರ್ಣ ಸಮುದಾಯವನ್ನು ಸೃಷ್ಟಿಸಿದನು. ಆಮೇಲೆ ಚತುರ್ಮುಖನು ಆ ವರ್ಣಸಮುದಾಯದಿಂದಲೇ ಯಜ್ಞಾದಿಕರ್ಮಗಳನ್ನು ಪ್ರತಿಪಾದಿಸಬೇಕೆಂಬ ಉದ್ದೇಶದಿಂದ, ವ್ಯಾಹೃತಿಮಂತ್ರಗಳೊಡನೆಯೂ, ಪ್ರಣವಮಂತ್ರದೊಡನೆಯೂ, ನಾಲ್ಕು ವೇದಗಳನ್ನೂ ನಾಲ್ಕು ಮುಖಗಳಿಂದ ಉತ್ತರಿಸಿದನು. ಆಮೇಲೆ ಆ ವೇದಗಳನ್ನು ತನ್ನ ಮಕ್ಕಳಾದ ಬ್ರಹ್ಮರ್ಷಿ ಗಳಿಗೆ ಉಪದೇಶಿಸಿದರು. ಆ ಮರೀಚಿ ಮೊದಲಾದವರು ಕಶ್ಯಪನೇ ಮೊದ ಲಾದ ತನ್ನ ಮಕ್ಕಳಿಗೆ ಉಪದೇಶಿಸಿದರು. ಹೀಗೆ ವೇದಗಳು ಶಿಷ್ಯಪರಂ ಪರೆಯಿಂದ ಪ್ರಚಾರಗೊಂಡು ಹರಡುತ್ತ ಬಂದುವು. ಪ್ರತಿಹರುರ್ಯುಗ ದಲ್ಲಿಯೂ, ವೇದಗಳ ಪ್ರಚಾರವು ಇದೇರೀತಿಯಾದುದು. ಪ್ರತಿಬಾಪರ ಯುಗಕ್ಕೆ ಮೊದಲು ಯುಗಸಂಧಿಕಾಲದಲ್ಲಿ, ಯುಗಧರ್ಮದಿಂದ ಜನಗಳ ಆಯುಕ್ಕೂ, ಬಲವು, ಬುಕ್ಕಿಯೂ, ಕ್ಷೀಣಿಸುತ್ತ ಬರುವುದನ್ನು ನೋಡಿ, evಖಂಡವೇದವನ್ನು ಮಹರ್ಷಿಗಳು ತಮ್ಮ ಹೃದಯಾನಂಮಿಯಾದ