ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೧೮ ಶ್ರೀಮದ್ಭಾಗವತವು ಅಧ್ಯ. ೩. ಇಲ್ಲಿ, ವೈದಿಕಏಧಿಯಿಂದ ಉಪಾಸನೆಮಾಡತಕ್ಕವರಿಗೆ, ಸಮದುಃಖಗ ಧನ್ನೂ, ಪಾಪಕ್ಕೆ ಬೀಜಭೂತವಾದ ಅಜ್ಞಾನವನ್ನೂ ದಹಿಸತಕ್ಕ ತೇಜಸ್ಸಿ ನಿಂದ ಜ್ವಲಿಸುವ ಸವ್ರ ಮಂಡಲವನ್ನು ದೃಢಬುದ್ಧಿಯಿಂದ ಧ್ಯಾನಿಸುವೆವು. ಸ್ಥಾವರಜಂಗಮಾತ್ಮಕಗಳಾದ ಸಮಸ್ಯಭೂತಸಮೂಹಗಳ ಮನಸ್ಸಿಗೂ, ಇಂದ್ರಿಯಗ 'ಗೂ, ಪ್ರಾಣಿಗಳಿಗೂ, ಜೀವನಿಗೂ ಆಧಾರಭೂತನಾಗಿ, ಆವೆ ಆಕೊ ಅಂತಾಮಿಯಾಗಿ ಪ್ರೇರಿಸತಕ್ಕ ಸಿನಗೆ ವಂದನವು. ಓ ದೇವಾ ! ನೀನು ಅತಿಭಯಂಕರಸ್ವರೂಪವುಳ್ಳ ಅ೦ಧರವೆಂಬ ಅಜಗರದಿಂದ ಹಿಡಿ ಯಲ್ಪಟ್ಟು, ಪ್ರಜ್ಞೆಯಿಲ್ಲದೆ ಮೃತರಾಯವಾದ ಈ ಕವನ್ನು , ಆಸಾ ಧಾರಣವಾದ ಕೃಪಾದೃಷ್ಟಿಯಿಂದ ಎಚ್ಚರಗೊಳಿಸಿ, ಅವರಿಗೆ ಪ್ರತಿ ದಿನವೂ, ತ್ರಿಸಂಧ್ಯಾಕಾಲಗಳಲ್ಲಿ ನಿನ್ನ ಗಾಥಸಿಗೆ ಉಪಯುಕ್ತವಾದ ಚಿತ್ರಸಮಾಧಾನವನ್ನು ಂಟ ಬಾಡುವೆ' ಮತ್ತು ಸೀನು ದೇವಾಧಿಪತಿ ಯೆನಿಸಿ, ಊರ್ಧ್ವಲೋಕದಲ್ಲಿರುವವನಾದರೂ, ಪ್ರಣಾಧಿಪತಿಯಂತೆ ದುಷ್ಟ ಜಂತುಗಳಿಗೆ ಭಯವನ್ನು ಹುಟ್ಟಿಸುತ್ತ, ಅಲ್ಲಲ್ಲಿ ಏಲಕರೆಲ್ಲರೂ ಅಂಜಲಿ ಬಂಧಪೂರಕವಾಗಿ ನಿನ್ನ ಮು ಾಸನೆ ಮಾಡುತ್ತಿದ್ದು, ಅವರ ಪೂಜೆಗಳನ್ನು ಕೈಕೊಳ್ಳುತ್ತ, ನಾನಾಕಡೆ ಯಲ್ಲಿ ಸಂಚುಸುತ್ತಿರುವೆ. ಓ ಭಗವಂತಾ ! ತ್ರೈಲೋಕ್ಯ ಗುರುಗಳೆ ಸಿಸದ ಬ್ರಹ್ಮಾದಿಗಳಿಂದ ಅಭಿವಂದಿತವಾದ ನಿನ್ನ ಪಾದಾರವಿಂದವನ್ನು ಭಜಿಸುವೆನು ಹಿಂದೆ ನಾನು ಅಧಿಕರಿಸಿದ ಯಜುರೈವವು ಸಾರಹಿತವಾಗದೆ, ಮೊದಲಿನಂತೆಯೇ ನನಗೆ ಕೈಸೇರು ವಂತೆ ಮಾಡಬೇಕು ಎಂದು ಪ್ರಾರ್ಥಿಸುತ್ತ, ಸ ಪಸ್ಥಾನವನ್ನು ಮಾ ಇದನು.ಆದಿತ್ಯರೂಪಿಯಾದ ಭಗವಂತನು, ಈ ಸ್ತೋತ್ರದಿಂದ ಪ್ರಸನ್ನ ನಾ ಗಿ, ಅಶ್ವರೂಪದಿಂದ ಬಂದು, ತಿರುಗಿ ಆ ಯಾಜ್ಞವಲ್ಕನಿಗೆ ಸಾರವು ಕೆಡ ದಂತೆಯೇ ಯಜುಸ್ಸುಗಳನ್ನು ಅನುಗ್ರಹಿಸಿಕೊಟ್ಟನು. ಯಾಜ್ಞವಲ್ಕನು ಅಪರಿಮಿತವಾದ ಆ ಯಜುಸ್ಸುಗಳಿಂದ ಹದಿನೈದುಶಾಖೆಗಳನ್ನು ಬೇರ್ಪ ಡಿಸಿದನು. ಕಾರೆಂದೂ, ಮಾಧ್ಯಂದಿನರೆಂದೂ ಹೆಸರುಗೊಂಡ ಮಹರ್ಷಿ ಗಳು ಇವನಿಂದ ಆ ಶಾಖೆಗಳನ್ನು ಅಧ್ಯಯನಮಾಡಿದರು.