ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಶ್ರೀಮದ್ಭಾಗವತವ [ಅಧ್ಯಾ. ೩ ಹೀಗಿರುವುದರಿಂದ, ಅವುಗಳಲ್ಲಿ ಆಸೆಯನ್ನು ಬಿಟ್ಟು, ಉತ್ತಮವಾದ ಶ್ರೇಯಸ್ಸನ್ನೂ, ಅದಕ್ಕೆ ಸಾಧನವನ್ನೂ ತಿಳಿಯುವುದಕ್ಕಾಗಿ, ವೇದಪಾರಂ ಗತನಾಗಿಯೂ, ಬ್ರಹ್ಮಜ್ಞಾನಿಯಾಗಿಯೂ, ರಾಗದ್ವೇಷಾದಿದೋಷಗಳಿಲ್ಲ ದವನಾಗಿಯೂ ಇರುವ ಆಚಾರೈನಲ್ಲಿ ಶರಣಾಗತಿಯನ್ನು ಮಾಡಬೇಕು. ಆ ಗುರುವನ್ನೇ ಪರದೈವವೆಂದು ಭಾವಿಸಿ, ನಿಷ್ಕಪಟವಾದ ಸೇವೆಯಿಂದ ಅವನನ್ನು ಸಂತೋಷಪಡಿಸುತ್ತ, ಅವನಿಂದ ಭಾಗವತಧರ್ಮಗಳನ್ನು ಅಭ್ಯ ಸಿಸಬೇಕು. ಈ ದೃಶ್ಯಗಳಿಂದ ಭಗವಂತನು, ಭಕ್ತರಿಗೆ ತನ್ನ ಸ್ನೇ ಕೊಟ್ಟು ಬಿಡುವಷ್ಟು ಪ್ರಸನ್ನ ನಾಗುವನು. ರಾಜಾ ! ಆ ಭಾಗವತಧರಗಳನ್ನೇ ನಿನಗೆ ವಿವರಿಸಿ ತಿಳಿಸುವೆನು ಕೇಳು ! ಮೊದಲು ತನ್ನ ದೇಹದಲ್ಲಿಯೂ, ದೇಹಾನುಬಂಧಿಗಳಲ್ಲಿಯೂ ವಿಶೇಷಸಂಗವನ್ನು ತ್ಯಜಿಸಿ, ಹೆಚ್ಚಾಗಿ ಸಾಧುಗ ಛ ಸಹವಾಸದಲ್ಲಿರುವುದು! ಸಮಸ್ತಭೂತಗಳಲ್ಲಿಯೂ, ವಿಶೇಷವಾಗಿ ದೀನರಲ್ಲಿ ಯೂ ದಯೆ, ಸಮಾನರಲ್ಲಿ ಮೈತ್ರಿ, ಹಿರಿಯರಲ್ಲಿ ನಮ್ರತೆ, ಬಾಹ್ಯಾಭ್ಯಂತರ ಶುದ್ಧ ! ತಮ್ಮ ವರ್ಣಾಶ್ರಮಧಮ್ಮಗಳನ್ನು ಬಿಡದೆ ನಡೆಸುವುದು! ತಪಸ್ಸು! ಶೀತೋಷ್ಣ ಸುಖದುಃಖಾದಿಧ್ವಂದ್ವಗಳನ್ನು ಸಮಾನಬುದ್ಧಿಯಿಂದ ಸಹಿಸಿ ಕೊಳ್ಳುವುದು ! ವೇದಾಧ್ಯಯನಮಾಡುವುದು! ಮನೋವಾಕ್ಕಾಯಗಳೆಂಬ ತ್ರಿಕರಣಗಳಲ್ಲಿಯೂ ಒಂದೇ ವಿಧವಾಗಿರತಕ್ಕ ಅರ್ಜವಗುಣ, ಋತುಕಾಲ ದಲ್ಲಹೊರತು ಇತರಕಾಲದಲ್ಲಿ ಸಂಗವಿಲ್ಲದ ಬ್ರಹ್ಮಚರ್ಯೆ, ಅಹಿಂಸೆ, ಸಮಸ್ಯಚರಾಚರಗಳಲ್ಲಿಯೂ ಪರಮಾತ್ಮನು ಅಂತರ್ಗತನಾಗಿರುವನೆಂಬ ತಿಳಿವಳಿಕೆ, ಪರಿಗ್ರಹಗಳೊಂದೂ ಇಲ್ಲದೆ ತಾನೊಬ್ಬನೇ ಏಕಾಕಿಯಾಗಿರುವು ದಕ್ಕೆ ಯತ್ನಿ ಸುವುದು, ಗೃಹಾದಿಗಳಲ್ಲಿ ಮೋಹವನ್ನು ಬಿಡುವುದು, ಶುದ್ಧ ವಾದ ವಲ್ಕಲಗಳನ್ನು ಡುವುದು, ಜೈಲಲಬ್ಬವಾದುದರಲ್ಲಿ ತೃಪ್ತಿ, ಭಗವಂ ತನವಿಷಯವಾದ ಗ್ರಂಥಗಳಲ್ಲಿ ಆಸಕ್ತಿ, ದೇವತಾಂತರಗಳಲ್ಲಿ ವಿಮುಖತೆಮ ನೋವಾಕ್ಕಾಯಗಳೆಂಬ ತ್ರಿಕರಣಗಳನ್ನೂ ದಂಡಿಸಿ,ತನ್ನ ಸ್ವಾಧೀನದಲ್ಲಿಟ್ಟು ಕೊಳ್ಳುವುದು, ಸಮಸ್ತ ಭೂತಗಳಿಗೂ ಹಿತವನ್ನೇ ನುಡಿಯುವುದು, ಆಂತರಿಂ ದ್ರಿಯವನ್ನು ನಿಗ್ರಹಿಸತಕ್ಕ ಶಮೆ, ಬಾಹ್ಯಂದ್ರಿಯಗಳನ್ನು ನಿಗ್ರಹಿಸುವ ದ ಮೆ, ಭಗವಂತನಾದ ಶ್ರೀಹರಿಯ ಜನ್ಮ ಕರಗುಣಾದಿಗಳನ್ನು ಅನವರತವೂ