ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೧ ಅಧಿ. ೧೦.] ದ್ವಾದಶಸ್ಕಂಧನ. ಶ್ಯಾವಿಯಾಗಿ ನೆಲೆಗೊಂಡು, ಆಯಾ ಜೀವನಲ್ಲಿ ಸತ್ಯಾದಿಗುಣಗಳಿಗನುಸಾರ ವಾಗಿ ನಡೆಯತಕ್ಕೆ ಕಾರೈಗಳಿಗೆ, ತಾನೇ ಕರ್ತನಂತೆ ತೋರುವುದೊಂದೇ ಹೊರತು, ಆ ಕರ್ತೃತ್ವಕ್ಕೆ ತಾನು ಭಾಗಿಯಾಗಲಾರನು, ಕನಸನ್ನು ಕಾಣು 'ವವನು, ಆ ಕನಸಿನಲ್ಲಿ ಕಾಣುವ ವ್ಯಾಪಾರಗಳನ್ನು ತಾನು ನಡೆಸದಿದ್ದರೂ, ಅವುಗಳನ್ನು ತಾನೇ ನಡೆಸುವಂತೆ ತಿಳಿಯುವನಲ್ಲವೆ ? ಪರಮಾತ್ಮನ ವಿಷಯ ದಲ್ಲಿ ಕರ್ತೃತ್ವಭಾಂತಿಯೂ ಈವಿಧವಾದುದೇ!ಹೀಗೆ ಮಹಾತ್ಮನಾಗಿಯೂ, ಸಾರಜಸ್ತಮೋಗುಣಗಳಿಗೆ ಸಿಯಾಮಕನಾಗಿಯೂ, ಕೇವಲನಾಗಿಯೂ, ಅದ್ವಿತೀಯನಾಗಿಯೂ, ಲೋಕಗುರುವಾಗಿಯೂ, ಬ್ರಹ್ಮ ಮೂರ್ತಿಯಾ ಗಿಯೂ ಇರುವ ಭಗವಂತನಿಗೆ ನಮಸ್ಕಾರವು. ಓ ಮಹಾತ್ಮಾ ! ಮನು ವ್ಯನು ತನ್ನ ಕರೆಗಳಿಂದ ಮುಕ್ತನಾಗಿ, ಸ್ಥಿರವಾಗಿಯೂ, ಕೊನೆಯ ದಾಗಿಯೂ ಇರುವ ಉತ್ತಮಪುರಷಾರವನ್ನು (ಮೋಕ್ಷವನ್ನು ) ಹೊರತು, ವರಪ್ರದನಾದ ನಿನ್ನಿಂದ ಬೇರೆ ಯಾವ ವರವನ್ನು ಪ್ರಾರ್ಥಿಸಬಹುದು ? ಬೇರೆ ಯಾವುದೂ ಇಲ್ಲ!ಹಾಗಿದ್ದರೂ ನಾನು ನಿನ್ನಲ್ಲಿ ಇದೊಂದುವರವನ್ನು ಕೇಳಿಕೊಳ್ಳುವೆನು. ಭಗವಂತನಾದ ಶ್ರೀಹರಿಯಲ್ಲಿ ಯೂ, ಹರಿಭಕ್ತರಲ್ಲಿಯೂ, ನಿನ್ನಲ್ಲಿಯೂ ನನಗೆ ಅವಿಚ್ಛಿನ್ನವಾದ ಭಕ್ತಿಯಿರಲಿ !" ಎಂದನು. ಹೀಗೆ ಮಾರ್ಕಂಡೇಯನು ವಿಷ್ಣುವಿನ ಮಹತ್ವವನ್ನು ಕೊಂಡಾಡಿ, ಅವನಲ್ಲಿ ನಿರಂತರವಾದ ಭಕ್ತಿಯನ್ನು ಪ್ರಾರ್ಥಿಸಿದಾಗ, ರುದ್ರನು, ಪಾಶ್ವತೀ ದೇವಿಯ ಅನುಮತಿಪೂರಕವಾಗಿ, ಆ ಋಷಿಯನ್ನು ಕುರಿತು ಹೀಗೆಂದು ಹೇಳುವನು “ಓ ಮಹರ್ಷಿ ! ನೀನು ಕೊರಿದಂತೆ ನಿನಗೆ ಆ ವಿಷ್ಣುವಿನಲ್ಲಿ ನಿರಂತರವಾಗಿ ಭಕ್ತಿಯುಂಟಾಗಲಿ ' ಕಲ್ಪಾಂತದವರೆಗೂ ನಿನ್ನ ಯಶಸ್ಸು ಲೋಕಪಾವನವಾಗಿ ಹರರರಿ ! ನಿನಗೆ ಜರಾಮರಣಗಳಿಲ್ಲದಿರಲಿ! ಮತ್ತು ನಿನಗೆ ಭೂತಭವಿಷ್ಯದ್ವರ್ತಮಾನಗಳೆಂಬ ತ್ರಿಕಾಲಗಳಲ್ಲಿರುವ ವಸ್ತುಗಳನ್ನು ಕುರಿತಜ್ಞಾನವೂ, ಆತ್ಮ ಪರಮಾತ್ಮಸ್ವರೂಪ ವಿವೇಚನಾರೂಪವಾದ ವಿಜ್ಞಾನವೂ, ವೈರಾಗ್ಯವೂ ದೃಢವಾಗಿರಲಿ ! ಮತ್ತು ಬ್ರಹ್ಮ ವರ್ಚಸ್ಸುಳ್ಳ ವರೆಲ್ಲರಿಗೂ ನೀನು ಪುರಾಹಾಚಾರೈನಾಗಿರು ! ” ಎಂದನು. ಓ ತನಕ ಗುಗxt! ರುದ್ರನು ಹೀಗಂದು ಆ ಮಾರ್ಕಂಡೇಯನಿಗೆ ವರಗಳನ್ನು