ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೩೪ ಶ್ರೀಮದ್ಭಾಗವತವು ಅಧ್ಯಾ. ೭. ಪಗಳನ್ನು ಪಾಂಚರಾತ್ರವಿಧಿಯಿಂದ ಆರಾಧಿಸುವುದೇ ! ಯಾವನು ತನಗೆ ಪ್ರಕೃತಿಸಂಬಂಧದಿಂದುಂಟಾದ ಅಹಂಕಾರಮಮಕಾರಾದಿ ರೂಪವಾದ ಹೈ ದಯಗ್ರಂಥಿಯನ್ನು ನೀಗಿಸಬೇಕೆಂದು ಅಪೇಕ್ಷಿಸುವನೋ, ಅವನು ಮೇಲೆ ಹೇಳಿದ ತಂತೊಆವಿಧಿಯಿಂದ ಭಗವಂತನನ್ನು ಪೂಜಿಸಬೇಕು. ಆ ವಿಥಿಗ ಇನ್ನೂ ಸೂಕ್ಷ್ಮವಾಗಿ ತಿಳಿಸುವೆನು ಕೇಳು. ಈ ಕರ ದಲ್ಲಿ ಪ್ರವರ್ತಿಸತಕ್ಕ ವನು, ಆಚಾರಾನುಗ್ರಹವನ್ನು ಸಂಪಾದಿಸಿ, ಅವನಿಂದ ಪೂಜಾವಿಧಿಗಳೆಲ್ಲ ವನ್ನೂ ಉಪದೇಶಹೊಂದಿ, ಆ ಪ್ರದೇಶಕ್ರಮದಂತೆ ಭಗವಂತನ ಆರ್ಚಾ ಮೂರ್ತಿಯಲ್ಲಿ ತನಗೆ ಇಷ್ಟವಾದುದನ್ನು ಅರ್ಚಿಸಬೇಕು. ಈ ಪೂಜೆ ಯನ್ನು ನಡೆಸತಕ್ಕವನು, `ಅರ್ಚವಿಗ್ರಹದಮುಂದೆ ಕುಳಿತು, ಮೊದಲು ಪ್ರಾಣಾಯಾಮಾದಿಗಳಿಂದ ದೇಹಶುದ್ಧಿಯನ್ನು ಮಾಡಿಕೊಂಡು, ಅಂಗ ನ್ಯಾಸಕರನ್ಯಾಸಗಳಿಂದ ರಕ್ಷೆಯನ್ನು ನಡೆಸಬೇಕು. ದೇವತಾ ಪ್ರತಿಮೆಗಳ ಕ್ಲಿಯಾಗಲಿ, ತನ್ನ ಹೃದಯದಲ್ಲಿಯಾಗಲಿ,ಆ ಭಗವತೃರೂಪವನ್ನು ಭಾವಿಸಿ ತಾಂತ್ರಿಕವಿಧಿಯಿಂದ ಪೂಜಿಸಬಹುದು. ಈ ಪೂಜೆಗೆ ಮೊದಲು ತುಲಸಿ, ಚಂದನ, ಮೊದಲಾದ ಪೂಜಾಸಾಮಗ್ರಿಗಳನ್ನು ಮಂತ್ರ ಜಲಪ್ರೋಕ್ಷಣ ದಿಂದಲೂ, ಪೂಜಾಸ್ಥಳವನ್ನು ಸಮಾರ್ಜನಾದಿಗಳಿಂದಲೂ, ತನ್ನ ದೇಹವ ನ್ನು ಅಂಗನ್ಯಾಸಮಂತ್ರಗಳಿಂದಲೂ, ದೇವತಾಪ್ರತಿಮೆಯನ್ನು ಜಲದಿಂ ದಲೂ ಶುದ್ದೀಕರಿಸಿಡಬೇಕು ಅರ್ತ್ಯಪಾದ್ಯಾದಿ ಪಾತ್ರೆಗಳನ್ನು ತೊಳೆದು ಸಿದ್ಧವಾಗಿಟ್ಟುಕೊಂಡು, ಆ ಪ್ರತಿಮಾದಿಗಳಲ್ಲಿ ಧ್ಯಾನಯೋಗದಿಂದ ಭಗವಂ ತನನ್ನು ಆವಾಹನೆ ಮಾಡಿ, ಹೃದಯಾದಿಮಂತ್ರಗಳಿಂದಲೂ, ಮೂಲಮಂ ತ್ರದಿಂದಲೂ ನ್ಯಾಸಗಳನ್ನು ಮಾಡಿ, ಆ ಮೂಲಮಂತ್ರದಿಂದಲೇ ಮೂ ರ್ತಿಯನ್ನು ಪೂಜಿಸಬೇಕು. ಮತ್ತು ಆ ಮೂರ್ತಿಯ ಅಂಗಗಳನ್ನೂ, ಸು ದರ್ಶನವೇ ಮೊದಲಾದ ಉಪಾಂಗಗಳನೂ, ಅನಂತ ಗರುಡಾದಿಸುವಾ ರಗಳನ್ನೂ, ಆ ಯಾಮೂರ್ತಿ ಮಂತ್ರದಿಂದ ಅರ್ಚಿಸಬೇಕು. ಅರ್ತ್ಯು, ಪಾದ್ಯ, ಆಚಮನೀಯ, ಸ್ನಾನ, ವಸ್ತ್ರ, ಭಾಷಣ, ಹೂ, ಗಂಧ ಅಕ್ಷತೆ, ಧೂಪ, ದೀಪ, ನೈವೇದ್ಯ, ಮೊದಲಾದ ಸಪಚಾರಳಿಂದಲೂ ಕ್ರಮ ವಾಗಿ ಪೂಜಿಸಬೇಕು. ಅದರಂತೆಯೇ ಭಗವಂತನ ಪರಿವಾರಗಳಿಗೂ ಯಧಾ