ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೩೭ ಅಧ್ಯಾ, ೪.] ಏಕಾದಶಸ್ಕಂಧವು. ನೋಡಿ, ಒಮ್ಮೆ ಇಂದ್ರನು, ಈ ತಪೋಬಲದಿಂದ ಆತನು ತನ್ನ ಪದವಿ ಯನ್ನು ಕಿತ್ತುಕೊಳ್ಳಬಹುದೆಂದು ಶಂಕಿಸಿ, ಆ ತಪಸ್ಸನ್ನು ಕೆಡಿಸುವುದ ಕ್ಯಾಗಿ ಮನ್ಮಥನನ್ನು ಅವನ ಪರಿವಾರಗಳೊಡನೆ ಕಳುಹಿಸಿದನು ಮೂಢನಾ ದ ಮನ್ಮಥನು, ಅಪ್ಪರಗಣವನ್ನೂ , ವಸಂತನನ್ನೂ , ಮಂದಮಾರುತನ ನ್ಯೂ , ಇನ್ನೂ ಕಾಮೋಪಕಗಳಾದ ತನ್ನ ಇತರಬಲವೆಲ್ಲವನ್ನೂ , ಸೇರಿಸಿಕೊಂಡು ಬಂದು, ಅರಸಿಯರ ಕಟಾಕ್ಷಗಳೆಂಬ ತೀಕ್ಷ್ಯ ಬಾಣಗಳಂದ ಆ ಮುಸಿಯನ್ನು , ಭೇದಿಸತೊಡಗಿದನು. ಆದರೇನು ? ಆದಿ ದೇವನಾದ ನಾರಾಯಣಮುಸಿಯು, ಸ್ವಲ್ಪ ಮಾತ್ರವೂ ಮನಸ್ಸು ಕದಲದೆ, ಅದು ಇಂದ್ರನ ಚೇಷ್ಟೆಯೆಂಬುದನ್ನು ತಿಳಿದುಕೊಂಡು, ತನ್ನ ಮುಂದೆ ವಿಫಲಪ್ರಯತ್ನ ರಾಗಿ ಶಾಪಭಯದ ನಡುಗುತ್ತಿರುವ ಕಾಮಾದಿಗಳನ್ನು ನೋಡಿ ನಗುತ್ತ ಹೀಗೆಂದು ಹೇಳುವನು, “ಓ ಮನ್ಮಥಾ! ಎಲೈ ದೇವಾಂಗ ನೆಯರೆ : ಓ ಮಂದಮಾರುತಾ ! ಭಯಪಡಬೇಡಿರಿ ! ಅತಿಥಿಗಳಾಗಿ ಬಂದ ನಿಮಗೆ ನಾನು ಪ್ರೀತಿಪೂರೈಕವಾಗಿ ಆತಿಧ್ಯವನ್ನು ಮಾಡುವೆನು. ನನ್ನ ಆತಿಧ್ಯವನ್ನು ಸ್ವೀಕರಿಸಿ, ನೀವು ನಮ್ಮ ಆಶ್ರಮಕ್ಕೆ ಬಂದುದನ್ನು ಸಫಲಗೊಳಿ ಸಿರಿ.” ಎಂದು ಅಭಯಪ್ರದಾನವನ್ನು ಮಾಡಲು, ಆಗ ಮನ್ಮಥನೇ ಮೊದ ಲಾದ ಆ ದೇವತೆಗಳೆಲ್ಲರೂ ನಾಚಿಕೆಯಿಂದ ತಲೆಯನ್ನು ತಗ್ಗಿಸಿ, ದೈನ್ಯ ದಿಂದ ಹೀಗೆಂದು ಪ್ರಾರ್ಥಿಸುವರು. “ಓ ಸ್ವಾಮೀ ! ವಿಕಾರಶೂನ್ಯ ನಾಗಿಯೂ, ಪ್ರಕೃತಿಪುರುಷರಿಗಿಂತಲೂ ಪರನಾಗಿಯೂ ಇರುವ ನಿನಗೆ , ಅಪರಾಧಿಗಳಾದ ನಮ್ಮಲ್ಲಿಯೂ ಹೀಗೆ ವಾತ್ಸಲ್ಯವನ್ನು ತೋರಿಸತಕ್ಕ ಪರಮದಯಾಳುತ್ವವೇನೂ ಆಶ್ರವಲ್ಲ ! ಆತ್ಮ ಧ್ಯಾನದಿಂದ ಆನಂದಿಸ ತಕ್ಕವರಾಗಿಯೂ, ಜಿತೇಂದ್ರಿಯರಾಗಿಯೂ ಇರುವ ಯೋಗಿಗಳೆಲ್ಲರೂ, ನಿನ್ನ ಪಾದಸೇವೆಯಲ್ಲಿ ನಿರತರಾಗಿರುವರು. ನಿನ್ನ ಪಾದಾಶ್ರಿತರೇ ಅಂತಹ ದೃಢಚಿತ್ತರಾಗಿರುವಾಗ, ನೀನು ಈ ಕಾಮಕ್ರೋಧಾದಿವಿಕಾರಗಳಿಗೆ ಈಡಾಗ ದಿರುವುದೇನಾತ್ಮರವು ? ಸ್ವರ್ಗಾದಿಫಲಗಳನ್ನೂ ತಿರಸ್ಕರಿಸಿ, ನಿನ್ನ ಪಾದ ಸೇವಾಸುಖವೊಂದನ್ನೇ ಬಯಸಿ, ತಪೋನಿರತರಾಗಿರತಕ್ಕವರೆಲ್ಲರಿಗೂ ನಾನಾಬಗೆಯ ಉಪದ್ರವಗಳನ್ನು ಕೊಟ್ಟು, ತಪೋವಿಷ್ಣುವನ್ನು ಮಾಡು