ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೩ ಅಧ್ಯಾ, ೪.೨ | ಏಕಾದಶಸ್ಕಂಧವು. ಇವಳಲ್ಲಿ ನಿಮಗೆ ಉತ್ತಮವಾಗಿ ತೋರಿದವಳೊಬ್ಬಳನ್ನು ನಿಮ್ಮ ಸ್ವರ್ಗ ಲೋಕಕ್ಕೆ ಅಲಂಕಾರಾರ್ಥವಾಗಿ ನಿಮ್ಮೊಡನೆ ಕರೆದುಕೊಂಡು ಹೋಗ ಬಹುದು” ಎಂದನು. ಆಗ ಅಲ್ಲಿದ್ದ ದೇವಭತ್ಯರೆಲ್ಲರೂ ( ಹಾಗೆಯೇ ಆಗಲಿ” ಎಂದು ಭಗವದಾಜ್ಞೆಯನ್ನು ಶಿರಶಾವಹಿಸಿ, ಅವನಿಗೆ ತಲೆಬಗ್ಗಿ ನಮಸ್ಕ ರಿಸಿ, ಆ ಸ್ತ್ರೀಯರಲ್ಲಿ ಆತ್ಯುತ್ತಮ ರೂಪ ಲಾವಣ್ಯ ಶೋಭಿತೆಯಾದ ಊರಶಿಯೆಂಬವಳನ್ನು ತನ್ನೊಡನೆ ಕರೆದುಕೊಂಡು ದೇವಲೋಕಕ್ಕೆ ಹಿಂತಿರುಗಿ ಬಂದರು. ಅಲ್ಲಿ ದೇವೇಂದ್ರನು ಅನೇಕದೇವತೆಗಳೊಡಪಿ ಸಭಾ ಸ್ಥಾನದಲ್ಲಿದ್ದಾಗ, ಮನ್ಮಥಾದಿಗಳೆಲ್ಲರೂ ಊಧ್ವತಿಯನ್ನು ಮುಂದಿಟ್ಟು ಕೊಂಡು ಬಂದು ನಮಸ್ಕರಿಸಿ, ನಾರಾಯಣಮಹರ್ಷಿಯ ಪ್ರಭಾವವೆಲ್ಲ ವನ್ನೂ ವಿವರಿಸಿ ತಿಳಿಸಿದರು. ಇಂದ್ರನು ಅದನ್ನು ಕೇಳಿ ಭಯದಿಂದಲೂ, ಆಶ್ಚರದಿಂದಲೂ ಸ್ತಬ್ಬನಾದನು. ರಾಜೇಂದ್ರಾ: ಇದೇ ನರನಾರಾಯ ಣಾವತಾರವು. ಆಮೇಲೆ ವಿಷ್ಣುವು ಹಂಸಸ್ವರೂಪನಾಗಿಯೂ, ಅತ್ಯಾ ಶ್ರೇಯನಾಗಿಯೂ, ಸನಕಾದಿಕುಮಾರರೂಪನಾಗಿಯೂ, ರಸಘನೆಂಬ ಹೆಸರಿನಿಂದ ನಮ್ಮ ತಂದೆಯಾಗಿಯೂ ಅವತರಿಸಿ, ಲೋಕಕ್ಷಮ ಕಾಗಿ ಜೀವಪರಮಾತ್ಮ ತತ್ವವನ್ನು ಪದೇತಿಸಿದನು. ಹಯಗ್ರೀವಾವತಾರದಲ್ಲಿ ವೇದಗಳನ್ನು ಆರಿಸಿದನು. ಆಮೇಲೆ ಮತ್ಯಾವತಾರವನ್ನೆತ್ತಿ, ಸತ್ಯವ್ರತ ನೆಂಬ ಮನುವನ್ನೂ , ಭೂಮಿಯನ್ನೂ , ಓಷಧಿಗಳನ್ನೂ ರಕ್ಷಿಸಿದನು. ಆಮೇಲೆ ವರಾಹರೂಪದಲ್ಲಿ ಪ್ರಳಯಜಲದಿಂದ ಭೂಮಿಯನ್ನು ದರಿಸಿ, ಹಿರಣ್ಯಾಕ್ಷನೆಂಬ ದೈತ್ಯನನ್ನು ಸಂಹರಿಸಿದನು. ಕೂಗ್ಯಾವತಾರದಲ್ಲಿ ಅಮೃತ ಮಥನಕ್ಕಾಗಿ ಮಂದರಪರತವನ್ನು ಬೆನ್ನ ಮೇಲೆ ಧರಿಸಿ, ದೇವತೆಗಳಿಗೆ ಕೈ ಮವನ್ನುಂಟುಮಾಡಿದನು. ಗಜೇಂದ್ರವರದಾವತಾರದಲ್ಲಿ ಶರಣಾಗತನಾದ ಗಜೇಂದ್ರನನ್ನು ಮೊಸಳೆಯ ಬಾಯಿಂದ ತಪ್ಪಿಸಿ ಕಾಪಾಡಿದನು.ಒಮ್ಮೆ ವಾಲ ಖಿಲ್ಯರೆಂಬ ಋಷಿಗಳು ಕಶ್ಯಪನಿಗಾಗಿ ಸಮಿತ್ತುಗಳನ್ನು ತರುತ್ಯ, ನಡುವೆ ಗೋಷ್ಟದದಲ್ಲಿ ಮುಳುಗಿ ಹೋಗುತ್ತಿರುವಾಗ ತನ್ನನ್ನು ಸ್ತುತಿಸಲು, ಅವ ರನ್ನು ಮೇಲಕ್ಕೆ ಆಪತ್ತಿನಿಂದ ಉದ್ಧರಿಸಿದನು. ವೃತ್ರವಧದಿಂದ ದೇವೇಂದ್ರನಿಗೆ ಪ್ರಾಪ್ತವಾಗುತ್ತಿದ್ದ ಬ್ರಹ್ಮಹತ್ಯೆಯನ್ನು ತಪ್ಪಿಸಿದನು. 154 B