ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪೦ ಶ್ರೀಮದ್ಭಾಗವತವು [ಅಧ್ಯಾ, ೫ ನೃಸಿಂಹಾವತಾರದಲ್ಲಿ ಹಿರಣ್ಯಕಶಿಪುವನ್ನು ಕೊಂದು, ಅವನ ಸೆರೆಯಲ್ಲಿದ್ದ ದೇವಸೀಯರನ್ನು ಬಿಡಿಸಿದುದಲ್ಲದೆ, ಅವನನ್ನು ಕೊಂದುದರಿಂದ ಸಾಧುಗ ಳಿಗೆ ಅಭಯವನು ಉಂಟುಮಾಡಿದನು. ದೇವಾಸುರಯುದ್ಧಗಳಲ್ಲಿಯೂ ದೇವತೆಗಳ ಕ್ಷೇಮಕ್ಕಾಗಿ ದೈತ್ಯರನ್ನು ಕೊಲ್ಲಿಸುತ್ತ ಬಂದನು. ಒಂದೊಂದು ಮನ್ವಂತರದಲ್ಲಿಯೂ ಬೇರೆಬೇರೆ ಅವತಾರಗಳನ್ನೆತ್ತಿ ಲೋಕವನ್ನು ಪಾಲಿ ಸಿದನು. ವಾಮನಾವತಾರದಲ್ಲಿ ಬ್ರಹ್ಮಚಾರಿಯಾಗಿ ಬಂದು ಯಾಚಿಸುವನೆವ ಬಂದ ಬಲಿಚಕ್ರವರ್ತಿಯ ವಶವಾಗಿದ್ದ ಭೂಮಿಯನ್ನು ಕಿತ್ತು ಇಂದ್ರಾದಿ ಗಳಿಗೆ ಕೂಡಿಸಿದನು. ಹೈಹಯರೆಂಬ ಕ್ಷತ್ರಿಯರ ಕುಲವನ್ನು ನಾಶಮಾಡು ವುದಕ್ಕಾಗಿ ಬೃಗುವಂಶದಲ್ಲಿ ಪರಶುರಾಮನಾಗಿ ಅವತರಿಸಿ, ಅಗ್ನಿಯಂತೆ ಕೂತೇಜಸ್ಸಿನಿಂದ ಇಪ್ಪತ್ತೊಂದಾವರ್ತಿ ಕ್ಷತ್ರಿಯರನ್ನು ಬೇಟೆಯಾಡಿ, ಲೋಕದಲ್ಲಿ ಕತ್ರವಂಶವನ್ನೇ ನಿರ್ಮೂಲಮಾಡಿದನು. ಈಗ ಸೀತಾಪತಿ ಯಾದ ರಾಮನಾಗಿ ಜನಿಸಿ, ಸಮುದ್ರಕ್ಕೆ ಸೇತುವನ್ನು ಕಟ್ಟಿ, ಲಂಕಾಧಿ ಪತಿಯಾದ ದಶಕಂಠನನ್ನು ಕೊಂದು, ತನ್ನ ಪವಿತ್ರ ಕೀರ್ತಿಯಿಂದ ಲೋಕ ವನ್ನು ಪವನಮಾಡುತ್ತಿರುವನು. ತಾನು ಜನನವಿಲ್ಲದವನಾದರೂ, ಭೂಭಾರಪುಹಾರಾರ್ಥವಾಗಿ ಮುಂದೆ ಯದುವಂಶದಲ್ಲಿ ಕೃಷ್ಣರೂಪದಿಂ ದವತರಿಸಿ, ದೇವತೆಗಳಿಗೂ ದುಷ್ಕರಗಳಾದ ಅನೇಕ ಕಾವ್ಯಗಳನ್ನು ನಡೆಸು ವನ, ಆದರೆಂದಾಚೆಗೆ ಬುದ್ಧನಾಗಿ ಅವತರಿಸಿ, ಯಾಗಾರ್ಹರಲ್ಲದವರೂ ಯಜ್ಞಾಟಕಗಳಲ್ಲಿ ಪ್ರವರ್ತಿಸುತ್ತಿರಲು, ವೇದವಿರುದ್ಧಗಳಾದ ವಾದಗ ಳಿಂದ ಅವರನ್ನು ತಾನೇ ಮೋಹಗೊಳಿಸುವನು. ಕಲಿಯುಗಾಂತದಲ್ಲಿ ಕಲ್ಕಿ ಯಾಗಿ ಅವತರಿಸಿ, ರಾಜ್ಯಾಧಿಕಾರದಿಂದ ಕೊಬ್ಬಿದ ಶೂದ್ರರನ್ನು ನಾಶಗೊ ಳಿಸುವನು. ಓ ರಾಜೇಂದ್ರಾ! ಆ ಭಗವಂತನ ಅವತಾರಗಳೂ, ಕರಗಳೂ ಹೀಗೆ ಅನಂತವಾಗಿರುವುವು” ಎಂದನು. ಇದು ನಾಲ್ಕನೆಯ ಅಧ್ಯಾಯವು. w+ ಜನಕಾರ್ಷಭ ಸಂವಾದವು.+w ವಿದೇಹರಾಜನು ತಿರುಗಿ ಪ್ರಶ್ನೆ ಮಾಡುವನು. (ಎಲೈ ಆತ್ಮವಿದರೆ ! ಇಂದ್ರಿಯಗಳನ್ನು ಜಯಿಸಲಾರದೆ, ಕಾಮಕ್ರೋಧಾದಿಗಳನ್ನೂ ಅಡಗಿಸ