ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪೧ R ಅಧ್ಯಾ, ೫ || ಏಕಾದಶಸ್ಕಂಧವು. ಲಾರದವರು, ಪ್ರಾಯಕವಾಗಿ ಭಗವಂತನನ್ನು ಭಜಿಸದೆ ಅವನಲ್ಲಿ ವಿಮುಖ ರಾಗಿಯೇ ಇರುವರು. ಅಂತವರಗತಿಯೇನು? ಅವರು ಯಾವವಿಧವಾದ ಶ್ರೇ ಯಸ್ಸನ್ನು ಬಯಸುವರು? ಅವರು ಆ ಸ್ಥಿತಿಯಲ್ಲಿರಲು ಕಾರಣವೇನು? ಈ ವಿ ಚಾರಗಳನ್ನು ನನಗೆ ತಿಳಿಸಬೇಕು” ಎಂದನು. ಅದಕ್ಕೆ ಚಮಸನೆಂಬವನು, ರಾಜಾ ಕೇಳು! ಚತುರುಖರೂಪಿಯಾದ ಪರಮಪುರುಷನು, ಕ್ರಮವಾಗಿ ತನ್ನ ಮುಖ,ತೋಳು, ತೊಡೆ, ಪಾದಗಳೆಂಬ ಅವಯವಗಳಿಂದ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣದವರನ್ನು ಸೃಷ್ಟಿಸಿ, ಅವರಲ್ಲಿ ಸತ್ಪಾದಿಗುಣಭೇದಗಳನ್ನೂ, ಬ್ರಹ್ಮಚಯ್ಯಾದ್ಯಾಶ್ರಮಧಮ್ಮಗಳನ್ನೂ ಏರ್ಪ ಡಿಸಿರುವನು. ಇವರಲ್ಲಿ ಯಾರು ಜಗತ್ಕಾರಣನಾದ ಪರಮಪ್ರರುಷನಲ್ಲಿ ಏಕಭ ಕಿಯನ್ನಿಡದೆ,ಅವನನ್ನು ಇತರ ದೇವತೆಗಳಿಗೆ ಸಮಾನವಾಗಿ ಭಾವಿಸುವರೋ ಅವರು ಆ ವರ್ಣಾಶ್ರಮಥರಗಳಿಂದ ಹೊರಗೆಸಿಸಿಕೊಂಡು, ನರಕದಲ್ಲಿ ಬಿಳುವರು. ಆದರೆ ಆ ಶ್ರೀಮನ್ನಾರಾಯಣನೇ ತಮಗೆ ಕಾರಣಭೂತ ನೆಂದೂ, ಅವನೇ ಸರೇಶ್ವರನೆಂದೂ, ಸತ್ಯನೆಂದೂ, ಶಾಸ್ತ್ರ ದೃಷ್ಟಿಯಿಂದ ತಿಳಿಯಬಲ್ಲವರು, ಅವನನ್ನು ಭಜಿಸಬೇಕಾದುದು ಸಹಜವೇ ! ಆ ಜ್ಞಾನವಿದ್ರೂ ಅವನನ್ನು ಭಜಿಸದಿರುವವರು, ಕೃತಷ್ಟು ರೆನಿಸುವುದರಿಂದ ಅಂತವರಿಗೆ ನರಕಪ್ರಾಪ್ತಿಯು ನ್ಯಾಯ್ಯವೇ ! ಹಾಗಿಲ್ಲದೆ ಕೇವಲಜ್ಞಾನ ಶೂನ್ಯರಾಗಿರುವವರ ಗತಿಯೇನು ? ಎಂದರೆ, ಶಾಸ್ತ್ರಾಧಿಕಾರವಿಲ್ಲದುದರಿಂದ, ಹರಿಕಥಾಶ್ರವಣದಲ್ಲಿಯಾಗಲಿ, ಹರಿಕೀರ್ತನದಲ್ಲಿಯಾಗಲಿ ಪ್ರವೃತ್ತಿಯಿಲ್ಲದ Aಶೂದ್ರಾದಿಗಳೂ ಕೂಡ, ನಿನ್ನಂತಹ ಭಗವದ್ಭಕರ ಕೃಪೆಗೆ ಪಾತ್ರರಾಗಿ ತಪ್ಪದೆ ಮುಕ್ತಿಯನ್ನು ಹೊಂದಬಹುದು. ಬ್ರಾಹ್ಮಣಾದಿವರ್ಣತ್ರಯದ ವರಿಗೂ ವೇದಾಧಿಕಾರವಿರುವುದರಿಂದ, ಆ ವೇದಾಧ್ಯಯನದಿಂದಲೂ, ಆದ ರಿಂದ ಸಂಪಾದಿಸಬಹುದಾದ ಜ್ಞಾನದಿಂದಲೂ, ಭಗವದುಪಾಸನೆಗೆಬೇಕಾ ದ ಸೌಕಯ್ಯಗಳನ್ನು ಪಡೆದಿದ್ದರೂ ಕೆಲವರು ಮೋಹಪರವಶರಾಗಿ, ಭಗವ ದುಪಾಸನೆಯನ್ನು ಬಿಟ್ಟು, ಅಕ್ಕ ಕಾಮಗಳಲ್ಲಿಯೇ ಆಸೆಯುಳ್ಳವರಾಗುವರು. ಅವರು ವೇದಗಳಲ್ಲಿ ಸ್ವರ್ಗಾಹಿಸುಖಗಳ ಆಸೆಯನ್ನು ತೋರಿಸತಕ್ಕ * ಆರ್

  • ಇಲ್ಲಿ “ಅಪಾಮ ಸೋಮಮತಾ ಅಭೂಮ, ಅಕ್ಷಯ್‌೦ ಹತ್ಯೆ ಚಾತುರ್ಮಾಸ್ಯಯಾಜಿನ ಸುಕೃತಂ ಭವತಿ, ಯತ್ರನೋಹಂ ನಶೀತಂ ನಗ್ಲಾನಿ