ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪೨ ಶ್ರೀಮದ್ಭಾಗವತವು (ಅಧಾ, ೫. ವಾದಗಳಿಗೆ ಮರುಳಾಗಿ, ಅವನ್ನೇ ಹಿಡಿದು ವಾದಿಸುವರು. ಆಕರಗಳು ತಮ್ಮ ಕ ಸಂಸಾರಬಂಧಕಗಳೆಂಬುದನ್ನು ತಾವೂ ತಿಳಿದುಕೊಳ್ಳಲಾರರು. ತಾವೇ ಪ್ರಾಜ್ಞರೆಂಬ ಹೆಮ್ಮೆಯಿಂದ ತಿಳಿದವರಲ್ಲಿ ಕೇಳಿ ತಿಳಿಯುವುದಕ್ಕೂ ಪ್ರಯ ಶ್ರೀ ಸರು. ಕಿವಿಗಿಂಪಾಗಿರುವ ಆ ವೇದವಾಕ್ಯಗಳಿಗೆ ಮರುಳಾಗಿ, ಅದನ್ನೆ ಇತ ರರಿಗೂ ಉಪದೇಶಿಸುವರು. ಮತ್ತು ರಜೋಗುಣಪ್ರಾಬಲ್ಯದಿಂದ ಅವರ ಮನಸ್ಸಿನಲ್ಲಿ ಮತ್ತೊಬ್ಬರನ್ನು ಕೊಲ್ಲತಕ್ಕ ಅಭಿಚಾರಾದಿಕೃತ್ಯಗಳಲ್ಲಿಯೂ ಆಸೆ ಹುಟ್ಟುವುದು, ಕೊರಸರ್ಪಗಳಂತೆ ಅವರು ಯಾವಾಗಲೂ ಕೋಪಕ್ಕೆ ವಶರಾಗಿರುವರು. ದಾಂಭಿಕರೂ, ದುರಹಂಕಾರಿಗಳೂ ಆದ ಅಂತಹ ಪಾಪಿ ಗಳು, ವಿಷ್ಣು ಭಕ್ತರನ್ನು ಆಪಹಾಸ್ಯ ಮಾಡುವುದೂ ಉಂಟು. ಅವರು ಯಾ ವಾಗಲೂ ಸ್ತ್ರೀಯರನ್ನೇ ಪರದೈವದಂತೆ ಪೂಜಿಸುವರೇಹೊರತು ಗುರುಹಿರಿ ಯರನ್ನು ಸೇವಿಸಲಾರರು. ಮೈಥುನಸುಖವೊಂದೇ ಅವರಿಗೆ ಪರಮಸುಖವು. ಆತ್ಮಸ್ತುತಿಯೂ, ತಮ್ಮ ಅಭ್ಯುದಯಗಳನ್ನು ಹೇಳಿಕೇಳಿ ಹಿಗ್ಗುವುದೂ ಆ ವರಿಗೆ ನಿತ್ಯಕೃತ್ಯವು. ಅವರು ಲೋಭಬುದ್ದಿಯಿಂದ ಇತರರಿಗೆ ಅನ್ನ ವಸ್ತ ಗಳನ್ನಾಗಲಿ, ದಕ್ಷಿಣೆಗಳನ್ನಾಗಲಿ ಕೊಡದಂತೆಯೇ ಡಂಭಕ್ಕಾಗಿ ಯಜ್ಞ ಗಳನ್ನು ನಡೆಸುವರು. ತಮ್ಮ ಸುಖಕ್ಕಾಗಿ ನಿಷ್ಕಾರಣವಾಗಿ ಪಶುಗಳನ್ನು ಕೊಲ್ಲುವರು. ಆದರಿಂದುಂಟಾಗುವ ದೋಷವೇನೆಂಬುದನ್ನು ಭಾವಿಸ ಲಾರರು. ಮತ್ತು ತಮ್ಮ ಕುಲ, ರೂಪ, ಧನ, ಅಧಿಕಾರ, ವಿದ್ಯೆ, ದಾನ ಕಾದಿಗಳಿಗಾಗಿ ಹೆಮ್ಮೆಗೊಂಡು, ಸತ್ಯೇಶ್ವರನಾದ ಶ್ರೀ ಹರಿಯನ್ನೂ , ಹರಿಭಕ್ತರನ್ನೂ , ಸಾಧುಗಳನ್ನೂ ನಿರಾಕರಿಸುವರು. ಆ ಭಗವಂತನು ಸಮಸ್ತಪ್ರಾಣಿಗಳಲ್ಲಿಯೂ ಅಂತರಾತ್ಮನಾಗಿ ನೆಲೆ ಗೊಂಡಿದ್ದರೂ, ಆಕಾಶದಂತೆ ಅವುಗಳ ದೋಷಕ್ಕಿಡಾಗದೆ ನಿರತಿಶಯ ಪುರುಷಾರ ರೂಪನಾಗಿರುವನೆಂಬ ಅವನ ಸ್ವರೂಪಸ್ವಭಾವಗಳನ್ನು ವೇ ದಾಂತಗಳಿಂದಮಾತ್ರವೇ ತಿಳಿಯಬೇಕಾಗಿರುವುದು. ಕಾಮ್ಯಕಗಳಲ್ಲಿ ನಕವ್ಯಾಗಮ” ಇತ್ಯಾದಿಶ್ರುತಿಗಳು ಕಿವಿಗಿಂಪಾಗಿರುವುದನ್ನು ನಂಬಿ, ರಂಭಾಸಂ ಭೋಗಾದಿಗಳನ್ನು ಕೋರಿ ಕರಗಳನ್ನನುಷ್ಟಿಸುತ್ತ, ಅವುಗಳನ್ನು ಪ್ರಮುಖವಾಗಿ ನಿರೂಪಿಸುವರೆಂದು ಭಾವವು. -- .. . . --- - -- --: •