ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೫ ಅಧ್ಯಾ, ೩.] ಏಕಾದಶಸ್ಕಂಧವು. ಹೀಗೆ ಬ್ರಹ್ಮನು ರುದ್ರಾದಿದೇವತೆಗಳೊಡಗೂಡಿ ಕೃಷ್ಣನನ್ನು ಸ್ತುತಿಸಿ, ಅಂತರಿಕ್ಷದಲ್ಲಿದ್ದಂತೆಯೇ ಸಾಷ್ಟಾಂಗಪ್ರಣಾಮವನ್ನು ಮಾಡಿ ತಿರುಗಿ ಹೀಗೆಂದು ಹೇಳುವನು. (ಪ್ರಭ ! ನಾವು ಹಿಂದೆ ನಿನ್ನಲ್ಲಿಗೆ ಬಂದು ಭೂಭಾರವನ್ನು ಪರಿಹರಿಸಬೇಕೆಂದು ಪ್ರಾರ್ಥಿಸಿಕೊಂಡೆವು. ನೀನು ಆ ಕಾರವನ್ನು ಹಾಗೆಯೇ ನಡೆಸಿ ಪೂರೈಸಿದೆ ! ಸತ್ಪುರುಷರ ಥರವನ್ನೂ ಲೋಕದಲ್ಲಿ ಸ್ಥಿರವಾಗಿ ನೆಲೆಗೊಳಿಸಿದೆ! ಶ್ರವಣಕೀರ್ತನಾದಿಗಳಿಂದ ಸಮಸ್ತ ಲೋಕವನ್ನೂ ಪಾವನಮಾಡತಕ್ಕ ನಿನ್ನ ಕೀರ್ತಿಯನ್ನೂ ಹರಡಿದೆ ! ಇಂತಹ ದಿವ್ಯಸುಂದರವಿಗ್ರಹಬಂದ ಯದುವಂಶದಲ್ಲಿ ಅವತರಿಸಿ, ಲೋಕ ಕ್ಷೇಮಕ್ಕಾಗಿ ಎಷ್ಟೋ ಅದ್ಭುತಕಾರಗಳನ್ನೂ ನಡೆಸಿದೆ. ಓ'ಸರೇಶ್ವರಾ ! ಪಾಪಪ್ರಚುರವಾದ ಕಲಿಯುಗದಲ್ಲಿ, ಸತ್ಪುರುಷರು ನಿನ್ನ ಕಥಾಶ್ರವಣ ಕೀರ್ತನಗಳಿಂದಲೇ ಸುಲಭವಾಗಿ ಸಂಸಾರವನ್ನು ದಾಟುವುದಕ್ಕೂ ಅವ ಕಾಶವನ್ನು ಕಲ್ಪಿಸಿದೆ. ಓ ಪುರುಷೋತ್ತಮಾ ! ನೀನು ಯದುವಂಶದಲ್ಲಿ ಅವತರಿಸಿ, ಇದುವರೆಗೆ ನೂರಿಪ್ಪತ್ತೈದುವರ್ಷಗಳು ಕಳೆದುಹೋದುವು. ದೇವತೆಗಳ ಮತ್ತು ಸಾಧುಗಳ ಕ್ಷೇಮಕ್ಕಾಗಿ ನೀನು ಇನ್ನು ಮೇಲೆ ಮಾಡಬೇ ಕಾಗಿರುವ ಕಾರವೇನೂ ಉಳಿದಿರುವಂತೆ ನಮಗೆ ತೋರಲಿಲ್ಲ ! ಯಾದವ ಕುಲವೂಕೂಡ, ಬ್ರಾಹ್ಮಣಶಾಪದಿಂದ ಹೆಚ್ಚು ಕಡಿಮೆಯಾಗಿ ಹತಪ್ಪಾಯ ವಾಗಿಯೇ ಇರುವುದು. ಆದುದರಿಂದ ನಿನಗೆ ಸಮ್ಮತವಾದರೆ, ಇನ್ನು ಮೇಲೆ ನೀನು ನಿನ್ನ ನಿಜಸ್ಥಾನವಾದ ಪರಮಪದಕ್ಕೆ ತೆರಳಬಹುದು. ನೀನು ಇನ್ನು ಮೇಲೆ ಆ ನಿನ್ನ ಸ್ಥಾನದಲ್ಲಿಯೇ ಇದ್ದು, ಈ ಸಮಸ್ತಲೋಕಗಳನ್ನೂ, ಲೋಕಪಾಲಕರನ್ನೂ , ನಿನ್ನ ಕಿಂಕರರಾದ ನಮ್ಮನ್ನೂ ರಕ್ಷಿಸುತ್ತಿರು. ” ಎಂದನು. ಮಾಯಾಮನುಷ್ಯನಾದ ಕೃಷ್ಣನು, ಆ ಬ್ರಹ್ಮಾದಿದೇವತೆಗೆ ಳಲ್ಲಿ ಪ್ರಸನ್ನನಾಗಿ, ಅವರನ್ನು ಮನ್ನಿಸಿ ಹೀಗೆಂದು ಹೇಳುವನು. ಓ ದೇ ವಶ್ರೇಷ್ಠಾ ! ಈಗ ನೀನು ಹೇಳಿದ ವಿಷಯವನ್ನು ಮೊದಲೇ ನಾನು ನಿಶ್ಚಯಿಸಿಕೊಂಡಿರುವೆನು. ನಿಮಗಾಗಿ ನಾನು ಈ ಭೂಮಿಯಲ್ಲಿ ನಡೆಸ ಬೇಕಾದ ಕಾವ್ಯಗಳೆಲ್ಲವೂ ಪೂರಯಿಸಿದುವು. ಭೂಭಾರವನ್ನು ಪರಿಹರಿಸಿದು ದಾಯಿತು. ಆದರೆ ನಮ್ಮ ಯಾದವಕುಲವೊಂದುಮಾತ್ರ ಎಣೆಯಿಲ್ಲದ 155 B