ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೫೭ ಅಧ್ಯಾ. 4.] ಏಕಾದಶಸ್ಮಂಥವು. ದರೆ, ಆ ಪುಣ್ಯಫಲದಿಂದ ನಾವು, ನಾವೆಯಿಂದ ಸಮುದ್ರವನ್ನು ಹೇಗೋ ಹಾಗೆ ಆ ಬ್ರಾಹ್ಮಣಶಾಪದಿಂದುಂಟಾಗುವ ದುಃಖವನ್ನು ದಾಟಬಹುದು” ಎಂದನು ಹೀಗೆ ಶ್ರೀಕೃಷ್ಣನು ಆಜ್ಞೆ ಮಾಡಿದೊಡನೆ ಯಾದವರೆಲ್ಲರೂ, ಪ್ರಭಾಸತೀರಕ್ಕೆ ಹೊರಡುವುದಾಗಿ ನಿಶ್ಚಯಿಸಿಕೊಂಡು, ರಥಗಳು, ಕುದುರೆಗಳು, ಮೊದಲಾದ ವಾಹನಗಳನ್ನು ಸಿದ್ಧಪಡಿಸುತಿದ್ದರು. ಆಗ ಶ್ರೀಕೃಷ್ಣನಿಗೆ ಪರಮಭಕ್ತನಾದ ಉದ್ದವನು, ಯಾದವರು ನಡೆಸು ತಿರುವ ಪ್ರಯಾಣಸನ್ನಾಹಗಳನ್ನೂ, ಅಲ್ಲಲ್ಲಿ ತಲೆದೋರುತ್ತಿರುವ ಮಹೋತ್ಸಾತಗಳನ್ನೂ ನೋಡಿ, ಭಗವಂತನು ಹೇಳಿದ ವಾಕ್ಯವನ್ನೂ ಪಾ ಲೋಚಿಸಿ, ಒಮ್ಮೆ ಏಕಾಂತವಾಗಿ ಶ್ರೀಕೃಷ್ಣನಬಳಿಗೆ ಬಂದು, ಅವನ ಪಾದಗಳಿಗೆ ತಲೆಯನ್ನು ಸೋಕಿಸಿ ನಮಸ್ಕರಿಸಿ ಬದ್ಧಾಂಜಲಿಯಾಗಿ ಹೀಗೆಂದು ವಿಜ್ಞಾಪಿಸುವನು, “ಓ ದೇವದೇವೇಶಾ ! ನೀನು ನಮ್ಮ ಯಾ ದವಕುಲವನ್ನು ಸಿಶೆಷವಾಗಿ ತೀರಿಸಿ, ಈ ಲೋಕವನ್ನು ಬಿಟ್ಟು, ತನ್ನ ನಿಜ ಸ್ಥಾನಕ್ಕೆ ಹೋಗುವುದೇನೋ ಒತ್ತಿ ತವಾದ ಸಂಗತಿಯೆಕಂದರೆ, ನಿನಗೆ ಆ ಉದ್ದೇಶವು ಹುಟ್ಟ ಬಿದ್ದ ಪಕ್ಷದಲ್ಲಿ ಈಗಾಗಲೇ ಆ ಬ್ರಾಹ್ಮಣಶಾಪ ವನ್ನೂ ತಪ್ಪಿಸಿಬಿಡುತಿದ್ದೆ ! ಆಕಾರಕ್ಕೆ ನೀನು ಸಮದ್ಧನಾಗಿರ.ವಾಗ್ಲೂ ಸುಮ್ಮನೆ ತಟಸ್ಥನಾಗಿರುವುದರಿಂದ, ಯಾದವಕುಲನಾಶವೂ ನಿನಗೂ ಸಮ್ಮತವೆಂದೇ ನಿಶ್ಚಯಿಸಬೇಕಾಗಿದೆ. ಆದರೆ ನಾನುಮಾತ್ರ ನಿನ್ನ ಪಾದಾರ ವಿಂದವನ್ನು ಕ್ಷಣಮಾತ್ರವೂ ಅಗಲಿರಲಾರೆನು. ನೀನು ನಿನ್ನ ಸ್ಥಾನಕ್ಕೆ ಹೊರಡುವಾಗ ನನ್ನನ್ನೂ ನಿನ್ನೊಡನೆ ಕರೆದುಕೊಂಡೇ ಹೋಗಬೇಕು. ಕೃಷ್ಣಾ ! ಸಮಸ್ತಲೋಕಕ್ಕೂ ಮಂಗಳಕರಗಳಾಗಿ, ಕಳುವವರ ಕಿಸಿಗೆ ಅಮೃತಪ್ರಾಯಗಳಾದ ನಿನ್ನ ಚರಿತ್ರಗಳನ್ನು ಯಾರು ಒಂದಾವರ್ತಿ ಕೇಳಿ ರುಚಿನೋಡಿರುವರೋ, ಅವರಿಗೆ,ಅದರಲ್ಲಿಹೊರತು ತಮ್ಮ ದೇಹದಲ್ಲಿಯಾಗಲಿ, ದೇಹಾನುಬಂಧಿಗಳಲ್ಲಿಯಾಗಲಿ, ಇತರ ವಿಷಯಗಳಲ್ಲಿಯಾಗಲಿ, ಯಾವುದ ರಲ್ಲಿಯೂ ರುಚಿಯು ಹುಟ್ಟದು. ಹಾಗಿರುವಾಗ ಅನವರತವೂ ನಿನ್ನ ಸಹ ವಾಸುಖವನ್ನೇ ಅನುಭವಿಸುತ್ತಿದ್ದ ನನಗೆ ನಿನ್ನನ್ನು ಬಿಟ್ಟಿರುವುದು ಹೇಗೆ ತಾನೇ ಸಾಧ್ಯವು ? ಮತ್ತು ನೀನು ಮಲಗುವಾಗ ಮಲಗುವುದು, ಕುಳ್ಳಿ