ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮ ಶ್ರೀಮದ್ಭಾಗವತವು [ಅಧ್ಯಾ. ೩ ವ್ಯಾಪಿಸಿರುವನೆಂಬುದನ್ನು ಆಕಾಶದಿಂದ ನಾನು ತಿಳಿದೆನು. ಮತ್ತು ಪೃಥಿ ವ್ಯಪೇಜೋಮಯಗಳಾದ ಮೇಘಗಳು, ಕಾಲವಶದಿಂದ ವಾಯುಪ್ರೆಂತರ ಳಾಗಿ ಸುತ್ತಲೂ ವ್ಯಾಪಿಸಿದರೂ, ಆಕಾಶವು ಅವುಗಳ ಸ್ಪರ್ಶವಿಲ್ಲದಿರುವಂತೆ, ಪರಮಪುರುಷನು ಪ್ರಕೃತಿಗುಣಪರಿಣಾಮರೂಪಗಳಾಗಿ, ಕಾಲದಿಂದ ಸೃಜಿಸಲ್ಪಟ್ಟ ಚರಾಚರವಸ್ತುಗಳೊಳಗೆಲ್ಲಾ ವ್ಯಾಪಿಸಿದ್ದರೂ, ಆ ವಸ್ತು ಗಳ ದೋಷಕ್ಕೆ ಈಡಾಗತಕ್ಕವನಲ್ಲವೆಂಬುದನ್ನು ಆ ಆಕಾಶದ ಗುಣದಿಂದಲೇ ಗ್ರಹಿಸಿದೆನು. ನೀರಿನಲ್ಲಿ ಸ್ವಚ್ಛತೆಯೂ, ಸಹಜವಾದ ಸ್ನಿಗ್ಧತೆಯೂ, ಮಾಧುರವೂ ಇದ್ದು, ಅದು ದರ್ಶನ ಸ್ಪರ್ಶನ ಸಂಕೀರ್ತನಾದಿಗಳಿಂದ ಲೋಕವನ್ನು ಪಾವನಮಾಡತಕ್ಕ ಪೂಣ್ಯತೀರ್ಥವೆಂದೂ ಹೇಳಿಸಿಕೊಳ್ಳುವಂತೆ ಮುನಿಯಾದವನು ಸ್ವಚ್ಛಹೃದಯನಾಗಿಯೂ, ಇತರಭೂತಗಳಲ್ಲಿ ಸ್ನೇಹ ವನ್ನು ತೋರಿಸತಕ್ಕವನಾಗಿಯೂ, ಮಧುರಭಾಷಿಯಾಗಿಯೂ ಇದ್ದು, ತನ್ನ ದರ್ಶನ ಸ್ಪರ್ಶ ನಾದಿಗಳಿಂದಲೇ ಇತರರನ್ನು ಪುನೀತರನ್ನಾಗಿ ಮಾಡುವಂ ತಿರಬೇಕೆಂಬುದನ್ನು ಆ ಜಲದಿಂದ ನಾನು ಗ್ರಹಿಸಿದೆನು. ಆಗ್ನಿಯ ತೇಜ ಸ್ಸಿನಿಂದ ಜ್ವಲಿಸುತ್ತ, ಸಿಕ್ಕಿದುದನ್ನು ಭಕ್ಷಿಸುತ್ತಿದ್ದರೂ, ಶುದ್ಧವೆನಿಸಿಕೊಂ ಡಿರುವಂತೆ, ಯೋಗಿಯಾದವನು ಜ್ಞಾನದಿಂದಲೂ, ತಪಸ್ಸಿನಿಂದಲೂ ತೇಜಸ್ವಿಯೆನಿಸಿಕೊಂಡು, ಮೃಷ್ಟಾನ್ನ ಕದನ್ನ ಗಳೆಂಬ ಭೇದವನ್ನೆಣಿಸದೆ, ಉದರಭರಣಮಾತ್ರದಲ್ಲಿ ತೃಪ್ತನಾಗಿ, ದೇಹಧಾರಣಮಾಡುತ್ತ ಶುದ್ಧ ಮನಸ್ಕನಾಗಿರಬೇಕೆಂಬುದನ್ನು ಆ ಅಗ್ನಿಯಿಂದ ತಿಳಿದೆನು. ಮತ್ತು ಅದೇ ಆಗ್ನಿಯು, ಒಂದೊಂದುಕಡೆಯಲ್ಲಿ ಭಸ್ಮಾದಿಗಳಲ್ಲಿ ಮರೆಸಿಕೊಂಡೂ, ಮತ್ತೆ ಕೆಲವೆಡೆಗಳಲ್ಲಿ ಜ್ವಾಲೆಗಳನ್ನು ಕೆದರುತ್ತ ಸ್ಪಷ್ಟವಾಗಿ ತೋರುತ್ತ ಲೂ ಇದ್ದು, ಶ್ರೇಯಕಾಂಕ್ಷಿಗಳಾಗಿ ತನ್ನನ್ನು ಉಪಾಸಿಸತಕ್ಕವರು ತಾ ವಾಗಿ ತಂದುಕೊಟ್ಟ ಹವಿಸ್ಸನ್ನು ಗ್ರಹಿಸಿ, ಅವರ ಹಿಂದುಮುಂದಿನ ಬಾ ಪಗಳೆಲ್ಲವನ್ನೂ ನೀಗಿಸುವಂತೆ, ಯೋಗಿಯಾದವನು ತನ್ನ ಮಹಿಮೆಯನ್ನು ಹೊರಕ್ಕೆ ಕಾಣಿಸದೆ, ಬೂದಿಮುಚ್ಚಿದ ಕೆಂಡದಂತಿದ್ದು, ಅವಶ್ಯಸಮಯ 'ಗಳಲ್ಲಿ ತನ್ನ ತೇಜಸ್ಸನ್ನು ಹೊರಪಡಿಸುತ್ತ, ಲಭಿಸಿದುದನ್ನು ಭುಜಿಸಿ ಫಾಗಿ, ಮೋಕ್ಷಾರ್ಥಿಗಳಿಂದ ಅನುವರ್ತಿಸಲ್ಪಡುತ್ತ, ನನ್ನನ್ನು ಸೇವಿಸಿದ