ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೩೯ ಅಧ್ಯಾ, ೬] ಏಕಾದಶಸ್ಕಂಧವು, ವರಿಗೆ ಹಿಂದುಮುಂದಿನ ಪಾಪಗಳನ್ನು ನೀಗಿಸತಕ್ಕವನಾಗಿರುವನೆಂಬು ದನ್ನೂ ಆ ಅಗ್ನಿ ಯಿಂದಲೇ ಗ್ರಹಿಸಿಕೊಂಡೆನು. ಮತ್ತು ಅಗ್ನಿ ಯು ತನಗಾ ಶ್ರಯವಾದ ಕಟ್ಟಿಗೆ ಮೊದಲಾದುವುಗಳಲ್ಲಿ 'ಸೇರಿ, ಆಯಾ ವಸ್ತುಗಳ ತಕ್ರ ತ್ವ ಋಜುತ್ವ ಮೊದಲಾದ ಆಕಾರದಿಂದಲೇ ತೋರುವಂತೆ, ಪರಮಪುರು ಮನೂಕೂಡ ತನ್ನ ಮಾಯೆಯಿಂದ ಚಿದಚಿದಾತ್ಮಕವಾದ ಪ್ರಪಂಚದಲ್ಲಿ ಅಡಗಿದ್ದು, ಆಯಾ ದೇವಮನುಷ್ಯಾಧಿರೂಪಗಳಿಂದಲೇ ಕಾಣುತ್ತಿರುವ ನೆಂಬುದನ್ನೂ ಗ್ರಹಿಸಿದೆನು. ಚಂದ್ರನ ಕಳೆಗಳಿಗೆ ಸಂಭವಿಸುವ ವೃದ್ಧಿ ಕ್ಷಯಗಳು ಆ ಚಂದ್ರನಿಗಿಲ್ಲವೆಂಬುದನ್ನೂ, ಆಗ್ನಿ ಯಲ್ಲಿ ಜ್ವಾಲೆಗಳಿಗೆ ಸಂಭವಿ ಸುವ ಉತ್ಪತ್ತಿ ವಿನಾಶಗಳು ಆ ಅಗ್ನಿಗಿಲ್ಲದಿರುವುದನ್ನೂ ನೋಡಿ, ಮನು ವ್ಯನಿಗೆ ನಿಷೇಕ ಮೊದಲಾಗಿ ಸ್ಮಶಾನಾಂತವಾಗಿ ಕಾಲವೇಗದಿಂದ ನಡೆಯು ವ ವಿಕಾರಗಳೆಲ್ಲ, ಅವನ ದೇಹಕ್ಕೇ ಹೊರತು ಆತ್ಮನಿಗಿಲ್ಲವೆಂಬುದನ್ನು ಆ ಚಂದ್ರಾಗ್ನಿಗಳ ದೃಷ್ಟಾಂತದಿಂದ ಗ್ರಹಿಸಿದೆನು. ಸೂಯ್ಯನು ತನ್ನ ಕಿರಣಗಳಿಂ ದ ಸಮುದ್ರಜಲವನ್ನೆಳೆದು, ಸ್ವಾರ್ಥವಾಗಿ ಉಪಯೋಗಿಸಕೊಳ್ಳದೆ, ಅದ ನ್ನು ಸಕಾಲದಲ್ಲಿ ಪರೋಪಕಾರಾರ್ಥವಾಗಿ ಮಳೆಯ ರೂಪದಿಂದ ಭೂಮಿ ಗೆ ಚೆಲ್ಲುವಂತೆ, ಯೋಗಿಯಾದವನೂಕೂಡ ಭೋಗ್ಯವಸ್ತುಗಳನ್ನು ಸಂಪಾ ದಿಸಿದರೂ, ಸ್ಕೋಪಯೋಗದಲ್ಲಿ ದೃಷ್ಟಿಯಿಡದೆ, ಅವುಗಳನ್ನು ಅರ್ಥಿಗಳಾ ಗಿ ಬಂದವರ ಉಪಯೋಗಕ್ಕೆ ಬಿಟ್ಟು ಬಿಡಬೇಕೆಂಬುದನ್ನು ಸೂರೈನ ದೃ ಪ್ಯಾಂತದಿಂದ ಗ್ರಹಿಸಿದೆನು. ಮತ್ತು ಆಕಾಶದಲ್ಲಿರುವ ಸೂರನು, ಕನ್ನಡಿ, ನೀರು ಮುಂತಾದುವುಗಳಲ್ಲಿ ಪ್ರತಿಫಲಿಸಿದಾಗ, ಅಜ್ಞರಿಗೆ ಅದರಲ್ಲಿರುವಂ ತೆಯೇ ತೋರಿದರೂ, ಆ ಸೂಯ್ಯನಿಗೆ ಅವುಗಳ ಸಂಸ್ಕರವೇ ಇಲ್ಲದಿರುವಂತೆ ಆತ್ಮನೂಕೂಡ ದೇವಾದಿಶರೀರಗಳಲ್ಲಿದ್ದರೂ ಅವುಗಳ ಸ್ವಭಾವಕ್ಕಿಡಾಗ ಬರುವನೆಂಬುದನ್ನೂ ಸೂರದೃಷ್ಟಾಂತದಿಂದ ಗ್ರಹಿಸಿದನು. ಒಮ್ಮೆ ನಾನು ಒಂದಾನೊಂದು ಕಪೋತ ಕ್ಷಗುಂಟಾದ ಕದತೆಯನ್ನು ನೋಡಿ ಯೋಗಿಯಾದವನು ಎಲ್ಲಿಯೂ, ಯಾವಾಗಲೂ ಅತಿಸ್ನೇಹವನ್ನು ಬೆಳೆಸ ಬಾರದೆಂದೂ, ಅದರಿಂದ ಕೊನೆಗೆ ಬಹಳದುಃಖಕ್ಕೆ ಭಾಗಿಯಾಗಬೇಕಾಗು ನದಂದೂ ಗ್ರಹಿಸಿದನು. ಆ ಕಥೆಯನ್ನೂ ನಿನಗೆ ನೀಡುವನು ಕೇಳು.